ಹಸರಂಗಿ ಹುಲಿ ಅಜ್ಜಯ್ಯ, ಬಾಲ ತ್ರಿಪುರಸುಂದರಿ ವಿಗ್ರಹ ಪ್ರತಿಷ್ಠಾಪನೆ
ದೊಡ್ಡಬಳ್ಳಾಪುರ ತಾಲ್ಲೊಕಿನ ಲಕ್ಕಸಂದ್ರದ ಪುಣ್ಯಧಾಮದಲ್ಲಿ ಹಸರಂಗಿ ಅಜ್ಜಯ್ಯ ಧಾರ್ಮಿಕ ಸಂಸ್ಥಾನ ಮತ್ತು ಶ್ರೀ ಹಸರಂಗಿ ಹುಲಿ ಅಜ್ಜಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ಹಸರಂಗಿ ಹುಲಿ ಅಜ್ಜಯ್ಯ’ ಹಾಗೂ ‘ಬಾಲ ತ್ರಿಪುರ ಸುಂದರಿ ಅಮ್ಮ’ನ ಅಮೃತಶಿಲೆ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಫೆಬ್ರವರಿ 15 ಮತ್ತು 16ರಂದು ನಡೆಯಲಿದೆ
ಪುಣ್ಯಧಾಮದ ಪೀಠಾಧ್ಯಕ್ಷ ಗುರುದೇವ ಗುರೂಜಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅಜ್ಜಯ್ಯ ಅವರನ್ನು ಆರಾಧಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸತತ ಹದಿನಾರು ವರ್ಷಗಳಿಂದ ಸಿದ್ದತೆಗಳು ನಡೆದಿದ್ದು, ಈಗ ಲಕ್ಕಸಂದ್ರದ ಗುರುರಾಘವೇಂದ್ರ ಮಠದ ಸಮೀಪದಲ್ಲಿಯೇ ಇಬ್ಬರ ಮಂದಿರ ನಿರ್ಮಾಣ ಮಾಡಲಾಗಿದೆ.
ಫೆಬ್ರವರಿ 15,16ರಂದು ನಡೆಯಲಿರುವ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿರಕ್ತಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ, ಉರಿ ಗದ್ದಿಗೇಶ್ವರ ಮಠದ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ ಸೇರಿದಂತೆ ಹದಿನೈದು ಮಠದ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ವೇದಿಕೆಯ ಸಮಾರಂಭವನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ಕೆ.ಎನ್.ನಾಗರಾಜ್, ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ಮುಂತಾದ ಗಣ್ಯರು ಆಗಮಿಸಲಿದ್ದಾರೆಂದು ಟ್ರಸ್ಟಿ ವಿನಯ್ ತಿಳಿಸಿದರು.