Kiccha Sudeep praises Parashurama's heroic story "Amsha"
ಪರಶುರಾಮನ ಶೌರ್ಯ ಕಥೆ “ಅಂಶ” ಕೃತಿಗೆ ಕಿಚ್ಚ ಸುದೀಪ್ ಮೆಚ್ಚುಗೆ
ಕಿಚ್ಚ ಸುದೀಪ್ ಅವರ ಭಾವ ರಂಜಿತ್ ರಾಧಾಕೃಷ್ಣನ್ ಬರೆದಿರುವ ಪರಶುರಾಮನ ಶೌರ್ಯ ಕಥೆಯಾದ “ಅಂಶ” ಕೃತಿಯ ಬಗ್ಗೆ ಸತಃ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿ ಬರವಣಿಗೆಗೆ ಫಿಧಾ ಆಗಿದ್ಧಾರೆ

ಜೊತೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ರಂಜಿತ್ ರಾಧಾಕೃಷ್ಣನ್ ಅವರ ಪರುಶುರಾಮನ ಕೃತಿಯನ್ನು “ಅಂಶ” ಹೆಸರಲ್ಲಿ ಕನ್ನಡಕ್ಕೆ ಅಮೂಲ್ಯ ಎಸ್ ಪ್ರಮೋದ್ ತಂದಿದ್ಧಾರೆ,
ಕರ್ನಾಟಕ ರಾಜ್ಯೋತ್ಸವದ ದಿನದಂದು, ಕನ್ನಡಿಗರಿಗೆ ಅದ್ಭುತ ಕೃತಿ ಸಿಕ್ಕಿದೆ ಎಂದು ನಟ ಕಿಚ್ಚ ಸುದೀಪ್ ಮೆಚ್ಚಿಕೊಂಡು ಸಂತಸದ ವ್ಯಕ್ತಪಡಿಸಿದ್ಧಾರೆ

ರೇಣುಕಾ ಜಮದಗ್ನಿ- ಪರಶುರಾಮರ ಕಥೆಯನ್ನು ಈ ನಾಡಿನಲ್ಲಿ ಕೇಳದವರು ಕಡಿಮೆ. ಪುರಾಣದ ಕಥೆಗಳು ಭಕ್ತಿಯ ದೃಷ್ಟಿಯಿಂದ ಪುನರ್ ಪಠಣವಾಗುವ ಅದರ ಜೊತೆಗೆ ಪುನರ್ಮನನ ಆಗುವುದು ಈ ನೆಲದ ಮಹಿಮೆ. ಈ ಕೃತಿಯಲ್ಲೂ ಅದು ಆಗುತ್ತಿದೆ ಅನ್ನೋದು ವಿಶೇಷ. ನವಂಬರ್ 20 ರಿಂದ ಈ ಕೃತಿ ಅಮೆಜಾನ್ನಲ್ಲಿ ಲಭ್ಯವಿರಲಿದೆ, ಖರೀದಿಸಬಹುದಾಗಿದೆ

