Y.R. Rohan selected for the Asian Championship to be held in Sri Lanka

ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್‍ಷಿಪ್‍ಗೆ ವೈ.ಆರ್.ರೋಹನ್ ಆಯ್ಕೆ - CineNewsKannada.com

ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್‍ಷಿಪ್‍ಗೆ ವೈ.ಆರ್.ರೋಹನ್ ಆಯ್ಕೆ

ಮಂಡ್ಯ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‍ನ ಮಂಡ್ಯ ಜಿಲ್ಲೆ ಮಾತ್ರವಲ್ಲದೆ ದೇಶ ,ವಿದೇಶಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಕೌಶಲ್ಯದಿಂದ ಗಮನ ಸೆಳೆದಿದೆ. ಶಾಲಾ ಆಡಳಿಯ ಮಂಡಳಿಗಷ್ಟೇ ಅಲ್ಲ. ವಿದ್ಯಾರ್ಥಿಗಳ ಪೆÇೀಷಕರಲ್ಲಿ ಹರ್ಷದ ಹೊನಲು ಮೂಡುವಂತೆ ಮಾಡಿದೆ. ಈ ಮೂಲಕ ರಿಪಬ್ಲಿಕನ್ ಸ್ಕೂಲ್ ಮುಂಚೂಣಿ ಶಾಲೆ ಎನ್ನುವ ಹಿರಿಮೆಯ ಗರಿ ತನ್ನದಾಗಿಸಿಕೊಳ್ಳುತ್ತಿದೆ.

ಶ್ರೀಲಂಕಾದಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಏಷ್ಯಾಮಟ್ಟದ ಗೊಜುರಿಯೋ ಚಾಂಪಿಯನ್‍ಷಿಪ್‍ಗೆ 5ನೇ ತರಗತಿ ವಿದ್ಯಾರ್ಥಿ ವೈ. ಆರ್. ರೋಹನ್ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತವರ ತಂಡ ಅಭಿನಂದಿಸಿ ಪ್ರಶಸ್ತಿ ಗೆದ್ದು ಬರಲಿ ಎಂದು ಶುಭ ಹಾರೈಸಿದ್ದಾರೆ.

ಏಷ್ಯಾಮಟ್ಟದ ಗೊಜುರಿಯೋ ಚಾಂಪಿಯನ್‍ಷಿಪ್‍ಗೆ ಆಯ್ಕೆಯಾದ ವೈ.ಆರ್.ರೋಹನ್‍ನನ್ನು ಪ್ರಾಂಶುಪಾಲೆ ಸುನೀತಾ ರಾಜನ್, ಕರಾಟೆ ತರಬೇತುದಾರ ಶಿಯಾನ್ ಡಾ.ವಿನಯ್‍ಕುಮಾರ್, ಶಾಲೆಯ ಕಾರ್ಯದರ್ಶಿ ಮಂಜು ಅಭಿನಂದಿಸಿದ್ದು ಮತ್ತಷ್ಟು ಮಕ್ಕಳಲ್ಲಿ ಸಾಧಿಸುವ ಉತ್ಸಾಹ ಮತ್ತು ಹುಮ್ಮಸ್ಸು ಮೂಡಿಸಿದೆ.

ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಗೊಜುರಿಯೊ ಚಾಂಪಿಯನ್‍ಷಿಪ್‍ನಲ್ಲಿ ಮಂಡದ್ಯ ರಿಪಬ್ಲಿಕ್ ಸೆಂಟ್ರಲ್ ವಿದ್ಯಾರ್ಥಿ ದ್ವಿತೀಯ ಸ್ಥಾನದೊಂದಿಗೆ ಬಳ್ಳಿ ಪದಕ ಹಾಗು ಇತ್ತೀಚೆಗೆ ಕೊಯಮುತ್ತೂರಿನ ಭಾರತಿ ಯೂನಿವರ್ಸಿಟಿ ಒಳ ಕ್ರೀಡಾಂಗಣ ನಡೆದ ಎರಡನೇ ರಾಷ್ಟ್ರೀಯ ಗೊಜೂರಿಯೊ ಚಾಂಪಿಯನ್ ಷಿಪ್‍ನಲ್ಲಿ ಪ್ರಥಮ ಸ್ಥಾನ ಗಳಿಸಿ ಸ್ವರ್ಣ ಪದಕ ಪಡೆದು ಏಷ್ಯಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ.

ವಿದ್ಯಾರ್ಥಿಯ ಈ ಸಾಧನೆಯು ರಿಪಬ್ಲಿಕ್ ಶಾಲೆ ಹಾಗೂ ‘ಒಕೀ ನವೊ ಗುಡೋ ಕೈ ಮಾರ್ಷಲ್ ಆಟ್ರ್ಸ್’ ಅಕಾಡೆಮಿ ಇಂಡಿಯಾ ಸಂಸ್ಥೆಗೆ ಹೆಮ್ಮೆ ತಂದಿದೆ. ಈತ ಮಂಡ್ಯದ ರವಿಕುಮಾರ್ ಮತ್ತು ಸುಮಿತ್ರಾ ದಂಪತಿ ಪುತ್ರ. ವಿದ್ಯಾರ್ಥಿ ಹಾಗೂ ಕರಾಟೆ ತರಬೇತುದಾರ ಶಿಯಾನ್ ಡಾ.ವಿನಯ್‍ಕುಮಾರ್ ಶಾಲೆಯ ಕಾರ್ಯದರ್ಶಿ ಮಂಜು ಅಭಿನಂದಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin