"1990s" Trailer Released : The film hits the screens on February 28

“1990s” ಚಿತ್ರದ ಟ್ರೇಲರ್ ಬಿಡುಗಡೆ : ಫೆಬ್ರವರಿ 28 ರಂದು ಸಿನಿಮಾ ತೆರೆಗೆ - CineNewsKannada.com

“1990s” ಚಿತ್ರದ ಟ್ರೇಲರ್ ಬಿಡುಗಡೆ : ಫೆಬ್ರವರಿ 28 ರಂದು ಸಿನಿಮಾ ತೆರೆಗೆ

90ರ ದಶಕದ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕಥೆಯೊಂದಿಗೆ ಜನಮನ ಗೆಲ್ಲಲು 1990s ಚಿತ್ರತಂಡ ಮುಂದಾಗಿದೆ. ಇದೇ ತಿಂಗಳ 28 ರಂದ ಚಿತ್ರ ತೆರೆಗೆ ಬರಲು ಸಜ್ಜಾಗಿದೆ

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ ಸಿ.ಎಂ ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ ಚಿತ್ರದ ಹಾಡು ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

“ಥಟ್ ಅಂತ ಹೇಳಿ” ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಡಾ‌. ನಾ.ಸೋಮೇಶ್ವರ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ “1990s” ಚಿತ್ರದ ಟ್ರೇಲರ್ ಅನಾವರಣ ಮಾಡಿ ಶುಭಕೋರಿದರು.

ಇಂದ್ರಜಿತ್ ಲಂಕೇಶ್ ಮಾತನಾಡಿ ಟಿಕೆಟ್ ಬೆಲೆ ಕಡಿಮೆ ಆಗಬೇಕು ಹಾಗೂ ಕೆಲವು ಚಿತ್ರಮಂದಿಗಳಲ್ಲಿ ಆಸನ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಸರಿ ಹೋಗಬೇಕು ಟ್ರೇಲರ್ ಚೆನ್ನಾಗಿದೆ. ಚಿತ್ರ ಸಹ ಇದೇ ರೀತಿ ಇರುತ್ತದೆ ಎಂಬ ಭರವಸೆ ಇದೆ ಎಂದರು.

ನಿರ್ದೇಶಕ ಸಿ.ಎಂ.ನಂದಕುಮಾರ್ ಮಾತನಾಡಿ ಚಿತ್ರದ ಹೆಸರೆ ಹೇಳುವಂತೆ ನಮ್ಮ ಚಿತ್ರದ ಕಥೆ 90 ರ ಕಾಲಘಟ್ಟದ್ದು. ಪ್ರೇಮಕಥೆಯೇ ಪ್ರಧಾನವಾದರೂ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ತಿಳಿಸಿದ ನಿರ್ಮಾಪಕರಲ್ಲೊಬ್ಬರಾದ ಅರುಣ್ ಕುಮಾರ್ ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.

ನಾಯಕ ಅರುಣ್ ಹಾಗೂ ನಾಯಕಿ ರಾಣಿ ವರದ್ ಮಾತನಾಡಿ ಚಿತ್ರಕ್ಕೆ ಮೊದಲಿನಿಂದಲೂ ಎಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇದೇ 28 ರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡಿ. ಬೆಂಬಲ ನೀಡಿ ಎಂದರು.

ನಟ ದೇವ್, ಸಂಗೀತ ನಿರ್ದೇಶಕ ಮಹಾರಾಜ, ಛಾಯಾಗ್ರಾಹಕ ಹಾಲೇಶ್, ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಮುಂತಾದ ಚಿತ್ರತಂಡದ ಸದಸ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin