Villagers take out a walking tour to celebrate the success of the film "Kuladali Kilyavudo"

“ಕುಲದಲ್ಲಿ ಕೀಳ್ಯಾವುದೋ” ಚಿತ್ರ ಯಶಸ್ವಿಗೆ ಗ್ರಾಮಸ್ಥರಿಂದ ಪಾದಯಾತ್ರೆ - CineNewsKannada.com

“ಕುಲದಲ್ಲಿ ಕೀಳ್ಯಾವುದೋ” ಚಿತ್ರ ಯಶಸ್ವಿಗೆ ಗ್ರಾಮಸ್ಥರಿಂದ ಪಾದಯಾತ್ರೆ

ಕಾಮಿಡಿ ಕಿಲಾಡಿ ಶೋಗಳ ಮೂಲಕ ಗಮನ ಸೆಳೆದು ಪ್ರಶಸ್ತಿ ಪಡೆದ ಹಾಸ್ಯ ಕಲಾವಿದ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರ ಯಶಸ್ವಿಗೆ ಗ್ರಾಮಸ್ಥರಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಅನೇಕ ಕಡೆಗಳಿಂದ ಪಾದಯಾತ್ರೆ ಮೂಲಕ ತಲುಪಿ ದೇವರ ದರ್ಶನ ಮಾಡುವ ವಾಡಿಕೆ ಇದೆ. ಅದೇ ರೀತಿ ಹಾಸನ ಜಿಲ್ಲೆಯ ಮಡೆನೂರಿನಿಂದಲೂ ಅನೇಕ ಜನರು ಧರ್ಮಸ್ಥಳಕ್ಕೆ ಪಾದಾಯಾತ್ರೆ ಹೊರಟಿದ್ದಾರೆ.

ಪಾದಯಾತ್ರೆ ಹೊರಟಿರುವ ಪಾದಾಯಾತ್ರಿಗಳು ತಮ್ಮೂರಿನ ಹುಡುಗ ನಾಯಕನಾಗಿ ಅಭಿನಯಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೊ” ಚಿತ್ರ ಯಶಸ್ವಿಯಾಗಲೆಂದು ಚಿತ್ರದ ಪೋಸ್ಟರ್ ಹಿಡಿದು ಹಾರೈಸಿದ್ದಾರೆ. ಪಾದಯಾತ್ರಿಗಳಿಗೆ ಮಡೆನೂರ್ ಮನು ಮತ್ತು ಸ್ನೇಹಿತರು ನೀರು ಮಜ್ಜಿಗೆ, ಪಾನಕ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ.

ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ನಿರ್ಮಿಸುತ್ತಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರ ಈಗಾಗಲೇ ಫಸ್ಟ್ ಲುಕ್ ಟೀಸರ್ ಹಾಗೂ ಹಾಡಿನ ಮೂಲಕ ಜನರ ಮನ ತಲುಪಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin