Kiccha Sudeep's "Billa Ranga Bhasha" shooting starts tomorrow

ಕಿಚ್ಚ ಸುದೀಪ್ ನಟನೆಯ “ಬಿಲ್ಲಾ ರಂಗ ಭಾಷಾ” ನಾಳೆಯಿಂದ ಚಿತ್ರೀಕರಣ - CineNewsKannada.com

ಕಿಚ್ಚ ಸುದೀಪ್ ನಟನೆಯ “ಬಿಲ್ಲಾ ರಂಗ ಭಾಷಾ” ನಾಳೆಯಿಂದ ಚಿತ್ರೀಕರಣ

“ವಿಕ್ರಾಂತ್ ರೋಣ” ಚಿತ್ರದ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ ನ ಬಹುಬನಿರೀಕ್ಷಿತ ಚಿತ್ರ ” ಬಿಲ್ಲಾ ರಂಗ ಭಾಷಾ” ಚಿತ್ರದ ಚಿತ್ರೀಕರಣ ನಾಳೆಯಿಂದ ಆರಂಭವಾಗಲಿದೆ

ಸುದೀಪ್ ಅವರ ಮ್ಯಾಕ್ಸ್‌‌ ಚಿತ್ರ ಮ್ಯಾಕ್ಸಿಮಮ್ ಯಶಸ್ಸಿನ‌ ತರ ಬಿಲ್ಲ ರಂಗ ಭಾಷಾ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು ಕಿಚ್ಚನ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ.

ʻಬಿಲ್ಲ ರಂಗ ಭಾಷಾʼ ಇದು ಭವಿಷ್ಯದ ಕಥೆಯನ್ನು ಹೇಳುವ ಚಿತ್ರವೆಂದು ಹೇಳಲಾಗುತ್ತಿದೆ. ʻ2209 ADʼಯ ಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿಕ್ಕ ವಿಡಿಯೋ ಗ್ಲಿಂಪ್ಸ್‌ ಮೂಲಕ ಚಿತ್ರತಂಡ ಈ ಹಿಂದೆ ರಿವೀಲ್‌ ಮಾಡಿತ್ತು.

ಕಿಚ್ಚ ಸುದೀಪ್ ಮತ್ತು ಹನುಮಾನ್‌ ಚಿತ್ರದ ನಿರ್ಮಾಪಕರು, ರಂಗಿತರಂಗ, ರಾಜರಥ ವಿಕ್ರಾಂತ್‌ ರೋಣ ನಿರ್ದೇಶಕ ನಿರೂಪ್ ಭಂಡಾರಿ ಕಾಂಬಿನೇಷನ್‌ನ ಚಿತ್ರ “ಬಿಲ್ಲಾ ರಂಗ ಭಾಷಾ” ” ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚು ಮಾಡಿದೆ

‘ಬಿಲ್ಲ ರಂಗ ಭಾಷಾ’ ಸಿನಿಮಾ ಕುರಿತ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಕಿಚ್ಚ ಸುದೀಪ್ ಸಿಹಿಸುದ್ದಿ ಕೊಟ್ಟಿದ್ದಾರೆ. ಏ.16ರಂದು ‘ಬಿಲ್ಲ ರಂಗ ಭಾಷಾ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾದ ಸೆಟ್, ತಾರಾಗಣ ಮತ್ತು ಇತರೆ ವಿಚಾರಗಳನ್ನು ನಂತರ ತಿಳಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ಸಾರೆ

.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin