“ಪ್ರೀತಿ ಪ್ರೇಮ ಪಂಗನಾಮ” ಮೂಲಕ ನಗಿಸಲು ಬಂದ ಹಾಸ್ಯ ಜೋಡಿ
ಕಿರುತೆರೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ‘ಹಾಸ್ಯ ಲಾಸ್ಯ’ ಕಾಮಿಡಿ ಧಾರಾವಾಹಿಗಳನ್ನು ನೀಡಿ ವೀಕ್ಷಕರನ್ನು ರಂಜಿಸಿದ್ದ ಹೆಸರಾಂತ ಜೋಡಿಗಳಾದ ಡಾ.ಮುತ್ತುರಾಜ್ ಎಂ.ಎಸ್ ಮತ್ತು ಶ್ರೀಕಂಠ.ಬಿ.ಎ ಇದೀಗ “ಪ್ರೀತಿ ಪ್ರೇಮ ಪಂಗನಾಮ” ಹೆಸರಲ್ಲಿ ಜನರನ್ನು ಮತ್ತೊಮ್ಮೆ ನಗಿಸಲು ಮುಂದಾಗಿದ್ಧಾರೆ.

ಚಿತ್ರ ಮಾಡುವುದರೊಂದಿಗೆ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸಿನಿಮಾ ತೆರೆಗೆ ಬರಲು ಸನ್ನಿಹಿತವಾಗಿರುವುದರಿಂದ ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಹಾಡುಗಳ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ನಿರ್ಮಾಪಕ ಎಂ.ಎಸ್ ಮುತ್ತುರಾಜ್ ಮಾತನಾಡಿ ವಿಶ್ವಖ್ಯಾತಿ ನೆಲ್ಸನ್ ಮಂಡೇಲ ಹುಟ್ಟುಹಬ್ಬದ ದಿನದಂದು ನೂರಾರು ಜನರಿಗೆ ಉಚಿತ ಹೇರ್ ಕಟಿಂಗ್ ಮಾಡುವ ಮೂಲಕ ಸಮಾಜ ಸೇವೆ ಆರಂಭಿಸಿ ನಿರಂತರವಾಗಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಡಾ.ರಾಜ್, ಡಾ.ವಿಷ್ಣುವರ್ಧನ್, ದೇವೆಗೌಡರು ನಮ್ಮ ಧಾರಾವಾಹಿಗಳನ್ನು ತಪ್ಪದೆ ನೋಡುತ್ತಿದ್ದರು. ಮೂರು ದಶಕದ ಗೆಳೆಯ ಶ್ರೀಕಂಠ ಡೈರಕ್ಷನ್ ಮಾಡಲು ಆಸೆ ಪಟ್ಟದ್ದರು. ಅದರಂತೆ ನಾನು ಬಂಡವಾಳ ಹೂಡಿದ್ದೇನೆ ಎಂದರು.

ಕಥೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶ್ರೀಕಂಠ.ಬಿ.ಎ ಮಾತನಾಡಿ ಗತಕಾಲದಲ್ಲಿ ಪ್ರೀತಿ ಪ್ರೇಮಕ್ಕೆ ಬೆಲೆ ಇತ್ತು. ಆದರೆ ಆರು,ಮೂರು, ಎರಡು, ಒಂದು ತಿಂಗಳು. ಕೊನೆಗೆ ಮೂರೇ ದಿವಸಕ್ಕೆ ದುಡ್ಡು ಇಲ್ಲವೆ ಕೊಲೆಯಲ್ಲಿ ಅಂತ್ಯ ಕಾಣುತ್ತದೆ. ಜಗತ್ತಿನಲ್ಲಿ ಜಾತಿಗಿಂತ ದೊಡ್ಡದು ಪ್ರೀತಿ. ಯಾರಾದರೇನು ಗಂಡು-ಹೆಣ್ಣು ಎರಡೇ ಜಾತಿ ಇರುವುದು. ಬಟ್ಟೆ ಇಸ್ತ್ರೀ ಮಾಡುವ ರೋಲ್‍ಗೆ ಬಣ್ಣ ಹಚ್ಚಿದ್ದೇನೆ. ನಾವುಗಳು ಬಡತನದಿಂದ ಬಂದಿದ್ದರೂ, ಮಕ್ಕಳು ಹಾಗಾಗಬಾರದು. ಅವರನ್ನು ಶ್ರೀಮಂತರನ್ನಾಗಿ ಮಾಡಲು ಹೋದಾಗ ಹೇಗೆ ಪಂಗನಾಮವಾಯಿತು ಅನ್ನುವುದನ್ನು ಹಾಸ್ಯದೊಂದಿಗೆ ಜತೆಗೆ ಒಂದಷ್ಟು ಉತ್ತಮ ಸಂದೇಶಗಳನ್ನು ಸಮಾಜಕ್ಕೆ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು
ಯುವ ಪ್ರತಿಭೆ ಶ್ರೀಕಾಂತ್‍ಕುಮಾರ್ ತುಮಕೂರು ಸಿನಿಮಾಕ್ಕೆ ಸಾಹಿತ್ಯ, ಸಹ ನಿರ್ದೇಶನ ಅಲ್ಲದೆ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಅವರಿಗೆ ಉಜ್ವಲ ಭವಿಷ್ಯವಿದೆ. ಇಂತಹವರ ಅವಶ್ಯಕತೆ ಚಿತ್ರರಂಗಕ್ಕೆ ಬೇಕಾಗಿದೆ ಎಲ್ಲರ ಸಹಕಾರ ಬೆಂಬಲ ಬೇಕು ಎಂದು ಕೇಳಿಕೊಂಡರು

ಧೀರಜ್, ಉದಯ್ ನಾಯಕರು. ಡಯಾನ, ಚೈತ್ರಾ ನಾಯಕಿಯರು. ಇವರೊಂದಿಗೆ ಭದ್ರಾವತಿ ಶ್ರೀನಿವಾಸ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಕುಮಾರ್‍ಈಶ್ವರ್, ಛಾಯಾಗ್ರಹಣ ಗುರುರಾಜ್, ಸಂಕಲನ ದೊಡ್ಡಮನೆ ಗಣೇಶ್ ಅವರದಾಗಿದೆ. º
Áಸನ, ಚಿಕ್ಕಮಗಳೂರು, ಮಡಕೇರಿ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಚಿತ್ ಫಿಲಂಸ್‍ನ ವೆಂಕಟ್‍ಗೌಡ ಸಾರಥ್ಯದಲ್ಲಿ ಸಿನಿಮಾವು ಮೇ ಮೊದಲ ವಾರದಲ್ಲಿ ರಾಜ್ಯಾದ್ಯಂತ ಅದರಲ್ಲೂ ಬಿ ಸೆಂಟರ್‍ನ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ.

