First look poster of the film "Time Pass" released

“ಟೈಮ್ ಪಾಸ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ - CineNewsKannada.com

“ಟೈಮ್ ಪಾಸ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಟೈಮ್ ಪಾಸ್”ಚ ಫಸ್ಟ್ ಲುಕ್ ಅಕ್ಷಯ ತೃತೀಯದಂದು ಬಿಡುಡಗೆಯಾಗಿದ್ದು ಕುತೂಹಲ ಕೆರಳಿಸಿದೆ.ನೈಜ ಘಟನೆ ಆಧರಿಸಿದ ಕಥಾನಕವೊಂದು ದೃಶ್ಯ ರೂಪ ಧರಿಸಿದಂತಿದೆ

ಚಿತ್ರೀಕರಣ ಮುಗಿಸಿಕೊಂಡು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಟೈಮ್ ಪಾಸ್ ಚಿತ್ರದ ಮೂಲಕ ಚೇತನ್ ಜೋಡಿದಾರ್ ಸ್ವತಂತ್ರ ನಿರ್ದೇಶಕರಾಗಿದ್ದಾರೆ.ಈವರೆಗೂ ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ. ಯಾವ ಸಿನಿಮಾ ಶಾಲೆಗಳಲ್ಲಿಯೂ ಕಲಿಕೆ ಮಾಡಿಲ್ಲ. ಸಿನಿಮಾ ನೋಡುತ್ತಾ, ಯೂಟ್ಯೂಬ್ ಮೂಲಕ ನಿರ್ದೇಶನದ ಪಟ್ಟುಗಳನ್ನು ಅರಿತುಕೊಳ್ಳುತ್ತಲೇ ಟೈಮ್ ಪಾಸ್ ಚಿತ್ರವನ್ನು ನಿರ್ದೇಶಕನಾಗಿ ಪೂರ್ಣಗೊಳಿಸಿದ್ದಾರೆ. ಒಂದೊಳ್ಳೆ ತಂಡದೊಂದಿಗೆ, ಪಕ್ಕಾ ಮನೋರಂಜನಾತ್ಮಕ ಚಿತ್ರವೊಂದನ್ನು ರೂಪಿಸಿರುವ ಭರವಸೆ ಅವರಲ್ಲಿದೆ.

ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ ಎಂ.ಹೆಚ್ ಕೃಷ್ಣಮೂರ್ತಿ ಮತ್ತು ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಹ್ಯೂಮರ್ ಜಾನರಿಗೆ ಸೇರಿಕೊಳ್ಳುವ ಸಿನಿಮಾ. ಇದುವರೆಗೂ ಒಂದಷ್ಟು ಬಾರಿ ಸಿನಿಮಾ ರಂಗಕ್ಕೆ ಕನ್ನಡಿ ಹಿಡಿದಂಥಾ ಕಥನಗಳೇ ಚಿತ್ರಗಳಾದದ್ದಿದೆ. ಇಲ್ಲಿಯೂ ಕೂಡಾ ಭಿನ್ನ ಧಾಟಿಯಲ್ಲಿ ಸಿನಿಮಾ ರಂಗದ ವಾಸ್ತವಕ್ಕೆ ಕನ್ನಡಿ ಹಿಡಿದಂಥಾ ಕಥನವಿದೆಯಂತೆ.

ರೋಚಕ ಕಥೆಯನ್ನು ಹಾಸ್ಯದ ಧಾಟಿಯಲ್ಲಿ ನಿರೂಪಿಸಲಾಗಿದೆ. ನಾಲ್ಕು ಹಾಡುಗಳು ಮತ್ತು ಎರಡು ಸಾಹಸ ಸನ್ನಿವೇಶಗಳಿವೆ. ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ ಸಂಗೀತ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin