“ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು” ಚಿತ್ರ ತೆರೆಗೆ ಬರಲು ಸಿದ್ದತೆ
ಹಿರಿಯ ಸಾಹಿತಿ ಟಿ.ಪಿಕೈಲಾಸಂ ಸಾಹಿತ್ಯ, ಮೈಸೂರು ಅನಂತಸ್ವಾಮಿ ಗಾಯನ ಮತ್ತು ಸಂಗೀತದ ‘ತಿಪ್ಪಾರಳಿ ಬಲುದೂರ’ ಜಾನಪದ ಹಾಡಿನ ಪದವನ್ನು ಬಳಸಿಕೊಂಡು “ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು” ಸಿನಿಮಾ ಸಿದ್ದಗೊಂಡಿದೆ.

ಚಿತ್ರದ ಟ್ರೈಲರ್ ಹಾಗು ಹಾಡಿನ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಬೆಳಗಾವಿ ಮೂಲದ ಉದ್ಯಮಿ ಗಿರೀಶ ಪ್ರಕಾಶ ಭಸ್ಮೇ ನಾಯಕನಾಗಿ ನಟಿಸುವ ಜತೆಗೆ ಶ್ರೀ ದಾನಮ್ಮ ದೇವಿ ಫಿಲಂಸ್ ಲಾಂಛನದಲ್ಲಿ ಬಂಡವಾಳ ಹೂಡಿದ್ದಾರೆ ನಾಲ್ಕು ದಶಕಗಳ ಕಾಲ ಸಹ ನಿರ್ದೇಶನ-ಸಹಾಯಕ ನಿರ್ದೇಶಕರಾಗಿ ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಕೆ.ಮೋಹನ್ ಕುಮಾರ್ ಕಥೆ,ಚಿತ್ರಕಥೆ, ಸಂಭಾಷಣೆ, ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ.
ನಾಯಕಿ ಪಾವನಿ. ಇವರೊಂದಿಗೆ ಮೈಸೂರು ರಮಾನಂದ್, ಆಲಿಶಾ, ಸತೀಶ್ಗೌಡ್ರು, ಶೂಟಿಂಗ್ ಕೃಷ್ಣ ಮುಂತಾದವರು ನಟಿಸಿದ್ದಾರೆ.
ನಾಯಕ, ನಿರ್ಮಾಪಕ ಗಿರೀಶ್ ಪ್ರಕಾಶ ಭಸ್ಮೇ ಮಾತನಾಡಿ ನಾನು ಹೆಚ್2ಓ, ಶ್ರೀರಾಂಪುರ ಪೆÇೀಲೀಸ್ ಸ್ಟೇಷನ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ರೋಲ್ ಮಾಡಿದ್ದೇನೆ. ಒಮ್ಮೆ ನಿರ್ದೇಶಕರೊಂದಿಗೆ ಶುರುವಾದ ಪರಿಚಯ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಹೆಸರಿಗೆ ತಕ್ಕಂತೆ ಚಿತ್ರವು ಹಾಸ್ಯ, ಭಾವನೆಗಳು, ಪ್ರೀತಿ ಎಲ್ಲವು ತುಂಬಿಕೊಂಡಿದ್ದು ನೋಡುಗರಿಗೆ ಮನರಂಜನೆ ಕೊಡಲಿದೆ. ನಮ್ಮಗಳ ಕೋರಿಕೆಯನ್ನು ಒಪ್ಪಿಸಿಕೊಳ್ಳಿ ಎಂದರು.

ಸಂಗೀತ ಗೋಪಿ ಕಲಾಕಾರ್, ಛಾಯಾಗ್ರಹಣ ಹೊಸೂರು ಮಂಜು, ಸಾಹಸ ಸಂತೋಷ್ ರಾಥೋಡ್, ನೃತ್ಯ ಡಾಲಿ ರಮೇಶ್ ಅವರದಾಗಿದೆ. ಬೆಂಗಳೂರು, ರಾಮನಗರ, ಹಂದಲಗೆರೆ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ನಿಂದ ಪ್ರಶಂಸೆ ಪಡೆದುಕೊಂಡಿರುವ ಚಿತ್ರ ಸದ್ಯದಲ್ಲೆ ತೆರೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.

