"Dura Theera Yaana" movie to release on July 11th.

ಜುಲೈ 11 ರಂದು “ದೂರ ತೀರ ಯಾನ” ಚಿತ್ರ ಬಿಡುಗಡೆ .. - CineNewsKannada.com

ಜುಲೈ 11 ರಂದು “ದೂರ ತೀರ ಯಾನ” ಚಿತ್ರ ಬಿಡುಗಡೆ ..

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ, ಆರ್. ದೇವರಾಜ್ ನಿರ್ಮಿಸಿರುವ ಹಾಗೂ ಮಂಸೋರೆ ನಿರ್ದೇಶನದ `ದೂರ ತೀರ ಯಾನ’ ಸಿನೆಮಾ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರ ಜುಲೈ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬಕ್ಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದಕ್ಕಿಂತ ಒಂದು ಸುಮಧುರವಾಗಿದೆ. ಟ್ರೇಲರ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. ಬಹು ನಿರೀಕ್ಷಿತ ಇದಕ್ಕೂ ಮೊದಲು ಧಾರಾವಾಡದ ಪದ್ಮ ಚಿತ್ರಮಂದಿರದಲ್ಲಿ ಚಿತ್ರತಂಡ ಪ್ರೀಮಿಯರ್ ಶೋ ಆಯೋಜಿಸಿದೆ.

ನಿರ್ದೇಶಕ ಮಂಸೋರೆ ಮಾತನಾಡಿ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜಿಸುವುದು ವಾಡಿಕೆ. ಆದರೆ ನಾವು ಉತ್ತರ ಕರ್ನಾಟಕದ ಹೃದಯಭಾಗವಾದ, ಅನೇಕ ಸಾಹಿತಿಗಳ ತವರಾದ ಧಾರವಾಡದಲ್ಲಿ ನಮ್ಮ ಚಿತ್ರದ ಮೊದಲ ಪ್ರದರ್ಶನ ಆಯೋಜಿಸಿದ್ದೇವೆ. ಪ್ರೇಕ್ಷಕರೆ ನಮ್ಮ ಚಿತ್ರದ ಸೆಲೆಬ್ರಿಟಿ. ಅವರು ನೋಡಿ ನಮ್ಮ ಚಿತ್ರ ಚೆನ್ನಾಗಿದೆ ಎಂದು ಇನ್ನೊಬ್ಬರಿಗೆ ಹೇಳಿದಾಗ ಖಂಡಿತವಾಗಿ ಹೆಚ್ಚಿನ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ. ನಟ ಕಿಚ್ಚ ಸುದೀಪ್ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅವರಿಗೆ ನಮ್ಮ ತಂಡದಿಂದ ಧನ್ಯವಾದ ಎಂದರು.

ನಿರ್ಮಾಪಕ ಆರ್ ದೇವರಾಜ್ ಮಾತನಾಡಿ ಐದನೇ ಚಿತ್ರ. ಮಂಸೋರೆ ಅವರೊಂದಿಗೆ ಮೂರನೇ ಚಿತ್ರ. ಈ ಚಿತ್ರ ಖಂಡಿತವಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಇಷ್ಟವಾದ ಪ್ರೇಕ್ಷಕರು ಇನ್ನೊಬ್ಬರಿಗೂ ಇದು ಒಂದೊಳ್ಳೆ ಚಿತ್ರ. ನೀವು ನೋಡಿ ಎಂದು ಹೇಳುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

ನಾಯಕ ವಿಜಯ್ ಕೃಷ್ಣ ಹಾಗೂ ನಾಯಕಿ ಪ್ರಿಯಾಂಕ ಕುಮಾರ್ ಮಾತನಾಡಿ ನಮ್ಮ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಪ್ರಿಯವಾಗಲಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಆಗಮಿಸಿ ನಮ್ಮ ಚಿತ್ರವನ್ನು ವೀಕ್ಷಿಸಬೇಕೆಂದು ವಿನಂತಿ ಮಾಡಿದ್ದಾರೆ.

ಟ್ರಾವೆಲಿಂಗ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಮಂಸೋರೆ ಕಥೆ ಬರೆದಿದ್ದಾರೆ. ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ. ಗೌಸ್ ಪೀರ್, ಕವಿರಾಜ್, ಪ್ರಮೋದ್ ಮರವಂತೆ ಹಾಗೂ ಕಿರಣ್ ಕಾವೇರಪ್ಪ ಹಾಡುಗಳನ್ನು ರಚಿಸಿದ್ದಾರೆ.

ಟಿ ಪಿ ಕೈಲಾಸಂ ಅವರ ಖ್ಯಾತ ಕೋಳಿಕೆ ರಂಗ ಹಾಡನ್ನು ಹೊಸ ಮಾದರಿಯಲ್ಲಿ ಸಂಯೋಜನೆ ಮಾಡಿ ಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜನಿ ಸಂಕಲನ ಹಾಗೂ ಸರವಣ ಕುಮಾರ್ ಅವರ ಕಲಾ ನಿರ್ದೇಶನವಿರುವ “ದೂರ ತೀರ ಯಾನ”ಕ್ಕೆ ಬೆಂಗಳೂರು, ಉಡುಪಿ, ಕುಂದಾಪುರ, ಗೋಕರ್ಣ, ಮುರುಡೇಶ್ವರ, ಕಾರವಾರ, ಯಲ್ಲಾಪುರ, ದಾಂಡೇಲಿ, ಗೋವಾ ಮುಂತಾದ ಕಡೆ 40 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin