6 ತಿಂಗಳಲ್ಲಿ ಸಿನಿಮಾ ಮುಗಿಸಿ ನಿರ್ದೇಶಕರಿಗೆ ನಟ ರವಿಚಂದ್ರನ್ ಖಡಕ್ ಸೂಚನೆ
“ಮಲೆಯಾಳಂ ಸಿನಿಮಾ ಚೆನ್ನಾಗಿ ಓಡುತ್ತಿವೆ, ಕನ್ನಡ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿಲ್ಲ ಎಂದು ಅತ್ತೂ ಕರೆಯುವುದನ್ನು ಬಿಟ್ಟು ಪ್ರೇಕ್ಷಕರಿಗೆ ಏನು ಬೇಕೂ ಅದನ್ನು ಕೊಡುವ ಕೆಲಸ ಮಾಡಿ, ಜನ ಹುಡುಕಿಕೊಂಡು ಸಿನಿಮಾಕ್ಕೆ ಬರಬೇಕೇ ಹೊರತು ಚಿತ್ರತಂಡ ಅವರನ್ನು ಸಿನಿಮಾಗೆ ಬನ್ನಿ ಎಂದು ಕರೆಯುವುದಲ್ಲ…”
ನೇರ ನಡೆ ನುಡಿಗೆ ಹೆಸರುವಾಸಿಯಾಗಿರುವ ಹಿರಿಯ ನಟ ರವಿಚಂದ್ರನ್ ಅವರು ನಿರ್ದೇಶಕರಿಗೆ, ನಿರ್ಮಾಪಕರಿಗೆ ನೀಡಿದ ಎಚ್ಚರಿಕೆಯ ಸಲಹೆ ಇದು. “ಅಮೃತ ಸಿನಿ ಕ್ರಾಫ್ಟ್” ಹೊಸ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿದ ನಂತರ ಆ ಸಂಸ್ಥೆಯಲ್ಲಿ ಚಿತ್ರ ಮಾಡುವ 6 ಮಂದಿ ನಿರ್ದೇಶಕರಿಗೆ 6 ತಿಂಗಳೊಳಗಾಗಿ ಸಿನಿಮಾ ಮುಗಿಸಿ ಎಂದು ನಿರ್ಮಾಣ ಸಂಸ್ಥೆಯ ಪರವಾಗಿ ಷರತ್ತು ಕೂಡ ವಿಧಿಸಿ, ಆರು ತಿಂಗಳ ನಂತರ ಒಂದು ದಿನ ಆದರೂ ಯಾವುದೇ ತಂಡಕ್ಕೆ ಹಣ ಕೊಡಬೇಡಿ ಎಂದು ನಿರ್ಮಾಪಕರಿಗೂ ಸಲಹೆ ನೀಡಿದರು.
ಸಾಲ ಸೋಲ ಮಾಡಿ ಸಿನಿಮಾ ಮಾಡಿದ್ದೇನೆ ಜನರು ಕೈ ಹಿಡಿಯಬೇಕು ಎಂದು ಗೋಳಾವುದುದನ್ನು ಬಿಟ್ಟು ಆರು ತಿಂಗಳ ಒಳಗೆ ಸಿನಿಮಾ ಮಾಡಿ ಮುಗಿಸಿ ಎಂದು ನಿರ್ದೇಶಕರಾಗುತ್ತಿರುವ ನಟ ಅಜಯ್ ರಾವ್ ಗೆ ಸೂಚಿಸಿದರೂ ಅವರಿಂದ ಮಾತು ಬರಲಿಲ್ಲ, ರವಿಚಂದ್ರನ್ ಒತ್ತಾಯದ ಮೇರೆಗೆ 9 ತಿಂಗಳಲ್ಲಿ ಸಿನಿಮಾ ಮಾಡುತೇನೆ ಎಂದರು
ಪೇಪರ್ ವರ್ಕ್ 9 ತಿಂಗಳಲ್ಲ, ಒಂದು ವರ್ಷ ಇಲ್ಲ ಎರಡು ವರ್ಷ ತೆಗೆದುಕೊಳ್ಳಿ, ಸಿನಿಮಾ ಆರಂಭವಾದಾಗಿನಿಂದ ಹಿಡಿದು 6 ತಿಂಗಳಲ್ಲಿ ಸಿನಿಮಾ ಮುಗಿಸಿ ನಿರ್ಮಾಪಕರ ಕೈಗೆ ಕೊಡಿ, ಪೇಪರ್ ಎಷ್ಟು ಬೇಕಾದರೂ ಹರಿದು ಹಾಕಿ ಆದರೆ ನೋಟು ಹರಿದು ಹಾಕಬೇಡಿ ಎನ್ನುವ ಎಚ್ಚರಿಕೆ ಸಲಹೆ ನೀಡಿದರು.

ಈಗ ನೀನು ನಿರ್ದೇಶಕ, ನಿರ್ಮಾಪಕರು ಬಂಡವಾಳ ಹಾಕುತ್ತಿದ್ದಾರೆ, ನಿಗಧಿತ ಗಡುವಿನೊಳಗೆ ಸಿನಿಮಾ ಮಾಡಿ ನಿನ್ನ ಸಾಲಗಳನ್ನು ತೀರಿಸಿಕೋ ಎನ್ನುವ ಸಲಹೆಯನ್ನೂ ನೀಡಿದರು
ಅದೇ ರೀತಿ ಮತ್ತೊಬ್ಬ ನಿರ್ದೇಶಕ ಸಿಂಪಲ್ ಸುನಿಗೂ ವೇದಿಕೆ ಮೇಲೆ ಕ್ಲಾಸ್ ತೆಗೆದುಕೊಂಡ ರವಿಚಂದ್ರನ್, ಸಿನಿಮಾ ಘೋಷಣೆ ಮಾಡಿದ ಬಳಿಕ ಯಾವುದೇ ನಿರ್ದೇಶಕ ಇಲ್ಲ, ಸಿಂಪಲ್ ಸುನಿ ಕೂಡ 6 ತಿಂಗಳಲ್ಲಿ ಸಿನಿಮಾ ಮುಗಿಸಬೇಕು ಎಂದು ಹೇಳಿದರು.
ಕನ್ನಡ ಸಿನಿಮಾಗಳನ್ನು ಜನ ನೋಡುತ್ತಿಲ್ಲ ಸಿನಿಮಾಗೆ ಬನ್ನಿ ಎಂದು ಅತ್ತೂ ಕರೆಯುವುದನ್ನು ಬಿಡಿ, ಮೊದಲು ಪ್ರೇಕ್ಷಕರು ಇಷ್ಟ ಪಡುವ ಸಿನಿಮಾ ಮಾಡಿ ಅವರಾಗಿಯೇ ಚಿತ್ರಮಂದಿರಕ್ಕೆ ಬರುವಂತೆ ಮಾಡಿ, ಅದನ್ನು ಬಿಟ್ಟು ಇಂಟರ್ವೆಲ್ ತನಕ ಸಿನಿಮಾ ನೋಡಿ ಇಷ್ಟ ಆದರೆ ದುಡ್ಡು ಕೊಡಿ ಎನ್ನುವುದು ನಿಜಕ್ಕೂ ಅವಮಾನ
ಮಲೆಯಾಳಂ ಸಿನಿಮಾಗಳು ಚೆನ್ನಾಗಿ ಬರುತ್ತಿವೆ ಎನ್ನುವುವರು ಕನ್ನಡ ಬಿಟ್ಟು ಮಲೆಯಾಳಂ ಭಾಷೆಗೆ ಹೋಗಿ ಎಂದು ಎಚ್ಚರಿಕೆ ನೀಡಿದ ಅವರು, ಕನ್ನಡದಲ್ಲಿ ಜನ ಮೆಚ್ಚುವ ಸಿನಿಮಾ ಮಾಡಿದರೆ ಜನರು ಕಂಡಿತ ಇಷ್ಟಪಡುತ್ತಾರೆ.

ಟಾಟಾ ಪಕ್ಕಕ್ಕಡಿ
ನಿರ್ಮಾಪಕ ವಿಜಯ್ ಟಾಟಾ ಹೆಸರು ಕೇಳಿದರೆ ಹೆದರಿಕೆ ಆಗಲಿದೆ, ಸಿನಿಮಾ ಮುಗಿಯುವ ತನಕ ಟಾಟಾ ಪಕ್ಕಕ್ಕಿಡಿ, ಬರೀ ವಿಜಯ್ ಜೊತೆಗಿಟ್ಟುಕೊಳ್ಳಿ ಹಾಗೆ ಅಮೃತ ಅವರನ್ನು ಕೂಡ. ಯಾವುದೇ ಕಾರಣಕ್ಕೂ ಚಿತ್ರತಂಡಕ್ಕೆ ಟಾಟಾ ಹೇಳಬೇಡಿ ಎಂದು ಎಲ್ಲರೆದುರು ನಿರ್ಮಾಪಕರಿಗೆ ರವಿಚಂದ್ರನ್ ಎಂದಿನ ನೇರ ಮಾತುಗಳಲ್ಲಿಯೇ ಮನಮುಟ್ಟಿಸಿದರು.
ಎಲ್ಲಾ ನಿರ್ಮಾಪಕರು 6 ತಿಂಗಳಲ್ಲಿ ಸಿನಿಮಾ ಮುಗಿಸುತ್ತಾರೆ, ನನಗೆ ಮಾತ್ರ 6 ತಿಂಗಳಲ್ಲ ಇನ್ನೂ ಹೆಚ್ಚಿಗೆ ಸಮಯಬೇಕು ಕಥೆ ನನ್ನದೇ, ಒಳ್ಳೆಯ ಸಿನಿಮಾ ಮಾಡಿಕೊಡುತ್ತೇನೆ,ಅದಕ್ಕಾಗಿ ಸಮಯ ಬೇಕು, ರಾಮಚಾರಿ ಸೇರಿದಂತೆ ಹಲವು ಚಿತ್ರಗಳನ್ನು ಮೂರೇ ತಿಂಗಳಲ್ಲಿ ಪೂರ್ಣ ಮಾಡಿದೆ. ಶಾಂತಿ ಕ್ರಾಂತಿ ಮೂರು ವರ್ಷ ಮಾಡಿದೆ ಫಲಿತಾಂಶ ಏನು ಆಯಿತು ನೀವೇ ತಿಳಿದುಕೊಳ್ಳಿ ಎಂದರು,

