Vijay Tata collaboration with actor Vikram Ravichandran's film "Mudhol

ನಟ ವಿಕ್ರಂ ರವಿಚಂದ್ರನ್ ನಟನೆಯ “ಮುಧೋಳ್” ಚಿತ್ರದ ಜೊತೆ ವಿಜಯ್ ಟಾಟಾ ಕೊಲಾಬರೇಷನ್ - CineNewsKannada.com

ನಟ ವಿಕ್ರಂ ರವಿಚಂದ್ರನ್ ನಟನೆಯ “ಮುಧೋಳ್” ಚಿತ್ರದ ಜೊತೆ ವಿಜಯ್ ಟಾಟಾ ಕೊಲಾಬರೇಷನ್

ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಹುಟ್ಟು ಹಬ್ಬದಂದು ಅವರ ಹೊಸ ಚಿತ್ರ ” ಮುದೋಳ್ ” ಚಿತ್ರವನ್ನು‌ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಇಡಲು ಚಿತ್ರ ತಂಡ ಮುಂದಾಗಿದೆ

ನಿರ್ಮಾಪಕಿ ರಕ್ಷಾ ಅವರಿಗೆ ಉದ್ಯಮಿ ಹಾಗು ನಿರ್ಮಾಪಕ ವಿಜಯ್ ಟಾಟಾ ಅವರು ಅಮೃತ ಸಿನಿ ಕ್ರಾಪ್ಟ್ ಜೊತೆಯಾಗಿದೆ. ಹೀಗಾಗಿ ನಟ ವಿಕ್ರಮ್ ರವಿಚಂದ್ರನ್ ಮತ್ತು ಅವರ ತಂಡಕ್ಕೆ ಆನೆ ಬಲ ಬಂದಿದೆ.

ಅಮೃತ ಸಿನಿ ಕ್ರಾಪ್ಟ್ ಸಂಸ್ಥೆ ಚಿತ್ರ ನಿರ್ಮಿಸುವುದರ ಜೊತೆಗೆ ವಿತರಣೆ , ಮಾರ್ಕೆಟಿಂಗ್ , ಸೇರಿದಂತೆ ಬೇರೆ ಚಿತ್ರಗಳ ಜೊತೆ ಕಲಾಬೋರೇಷನ್ ಗೂ ಮುಂದಾಗಿರುವುದು ಮತ್ತೊಂದು ಸಂತೋಷದ ಸಂಗತಿ.

ನಟ ವಿಕ್ರಂ ರವಿಚಂದ್ರನ್ ಮಾತನಾಡಿ ಸಾಮಾನ್ಯವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಎರಡನೇ ಸಿನಿಮಾ ಮಾಡಿದ ವೇಳೆ ,ಅಣ್ಣ ಅಭಿನಯಿಸಿದ್ದ ಮುಗಿಲು ಪೇಟೆ ನಿರ್ಮಾಣಕ್ಕೆ ಸಾಥ್ ಕೊಟ್ಟಂತ ನಿರ್ಮಾಪಕಿ ರಕ್ಷಾ ಅವರು ತಮ್ಮ ಚಿತ್ರಕ್ಕೂ ಬೆಂಬಲವಾಗಿ ನಿಂತಿದ್ದಾರೆ. ನನ್ನ ಕನಸಿನ ಪ್ರಾಜೆಕ್ಟ್ ಗೆ ನಿರ್ದೇಶಕ ಕಾರ್ತಿಕ್ ರಾಜು ಬೆನ್ನೆಲುಬಾಗಿದ್ದಾರೆ. ಚಿತ್ರದ ನಿರ್ದೇಶಕರು, ಸಂಗೀತ ನಿರ್ದೇಶಕರು ಸಂಕಲನಕಾರರು ಸೇರಿ ಮಾಡುತ್ತಿರುವ ಚಿತ್ರ ” ಮುಧೋಳ್ ‘ ನಿರ್ಮಾಪಕಿ ರಕ್ಷಾ ಅವರ ಜೊತೆ ವಿಜಯ್ ಟಾಟಾ ಜೊತೆ ಸೇರಿದ್ದಾರೆ‌ ಎಂದರು

ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊರ ತರಲು ಕೊಲಾಬ್ರೇಶನ್ ಮಾಡಿಕೊಂಡಿದ್ದೇವೆ. ಈಗೊಂದು ಸ್ಟ್ರಾಂಗ್ ಟೀಮ್ ಸೇರಿಕೊಂಡು ಮುಂದೆ ಬರುತ್ತಿದ್ದೇವೆ. ಕನಸಿನ ಚಿತ್ರಕ್ಕೆ ಬೆಂಬಲ ಇರಲಿ ಎಂದು ಕೇಳಿಕೊಂಡರು.

ಮುಧೋಳ್ ಚಿತ್ರದ ನಿರ್ಮಾಪಕಿ ರಕ್ಷಾ ಹಾಗೂ ಖ್ಯಾತ ಉದ್ಯಮಿ ನಿರ್ಮಾಪಕ ವಿಜಯ್ ಟಾಟಾ ಸೇರಿದಂತೆ ಹಲವು ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin