Famous Kannada anchor Anushree, who entered into a new life with Roshan, is getting married.

ರೋಶನ್ ಜೊತೆ ಹೊಸ ಬಾಳಿಗೆ ಕಾಲಿಟ್ಟ ಕನ್ನಡದ ಖ್ಯಾತ ನಿರೂಪಕಿ ಅನೂಶ್ರೀ ಮದುವೆ - CineNewsKannada.com

ರೋಶನ್ ಜೊತೆ ಹೊಸ ಬಾಳಿಗೆ ಕಾಲಿಟ್ಟ ಕನ್ನಡದ ಖ್ಯಾತ ನಿರೂಪಕಿ ಅನೂಶ್ರೀ ಮದುವೆ

ಕನ್ನಡದ ಖ್ಯಾತ ನಿರೂಪಕಿ, ನಟಿ ಅನೂಶ್ರೀ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ, ಗುರು ಹಿರಿಯರು, ಕುಟುಂಬದ ಸದಸ್ಯರು, ಆಪ್ತರು, ಸ್ನೇಹಿತರು ಮತ್ತು ಚಿತ್ರರಂಗದ ಆಹ್ವಾನಿತರ ಸಮ್ಮುಖದಲ್ಲಿ ಕೊಡಗಿನ ಹುಡುಗ ರೋಶನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಮೂಲಕ ಜೀವನದ ಮತ್ತೊಂದು ಇನ್ಸಿಂಗ್ಸ್ ಆರಂಭಿಸಿದ್ಧಾರೆ.

ಬೆಂಗಳೂರಿನ ಹೊರ ಹೊಲಯದ ರೆಸಾರ್ಟ್‍ನಲ್ಲಿ ಆಗಸ್ಟ್ 28ರಂದು ಬೆಳಗ್ಗೆ ನಟಿ, ನಿರೂಪಕಿ ಅನೂಶ್ರೀ ರೋಶನ್ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸುವ ಮೂಲಕ ಬದುಕಿನ ಮತ್ತೊಂದು ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ.

ಕೊಡಗಿನ ರಾಮಮೂರ್ತಿ ಮತ್ತು ಸಿಸಿಲಿಯಾ ದಂಪತಿಯ ಪುತ್ರ ರೋಶನ್ ಅವರನ್ನು ಮಾತಿನ ಮಲ್ಲಿ ಅನುಶ್ರೀ ಅವರು ಬೆಳಗ್ಗೆ 10.56ಕ್ಕೆ ನಡೆದ ಶುಭ ಮಹೂರ್ತದಲ್ಲಿ ಮದುವೆಯಾಗಿದ್ದಾರೆ.

ರೆಸಾರ್ಟ್‍ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಟರಾದ ರಾಜ್ ಬಿ ಶೆಟ್ಟಿ, ಶರಣ್, ಜೀ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ನಟಿಯರಾದ ಕಾವ್ಯಾ ಶಾ, ಚೈತ್ರಾ ಜೆ ಆಚಾರ್, ಸೋನಲ್ ಮೊಂಥೆರೋ ಮುಂತಾದವರು ಭಾಗಿಯಾಗಿ ಹೊಸ ದಂಪತಿಗೆ ಶುಭ ಹಾರೈಸಿದರು.

ನಾಯಕಿಯಾಗಿಯೂ ಮಿಂಚು:

ಕನ್ನಡ ಕಿರುತೆರೆ ಲೋಕದಲ್ಲಿ ನಿರೂಪಣೆಯಲ್ಲಿ ಸೂಪರ್ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿರುವ ನಿರೂಪಕಿ ಅನೂಶ್ರೀ, ನಿರೂಪಣೆಯ ಜೊತೆ ಜೊತೆಗೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆ ಮಾಡಿಕೊಂಡವರು, “ಬೆಂಕಿ ಪಟ್ಟಣ” ಉಪ್ಪು ಹುಳಿ ಖಾರ” ಸಿನಿಮಾಗಳಲ್ಲಿ ನಟಿಸಿ ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚಿದವರು. ನಟಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರೂ ನಿರೂಪಕಿಯಾಗಿ ನಾಡಿನ ಮನೆ ಮಾತಾಗಿದ್ದಾರೆ.

ಚಿಕ್ಕವಯಸ್ಸಿಗೆ ಬದುಕಿನ ಬಾರ ಹೊತ್ತುಕೊಂಡು ತಾಯಿ ಮತ್ತು ತಮ್ಮನನ್ನು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಬಂದು ಅವರಿಗಾಗಿ ಬದುಕುಕಟ್ಟಿಕೊಟ್ಟವರು ಅನೂಶ್ರೀ, ತಾನೂ ಬೆಳೆಯುತ್ತಾ ತನ್ನ ಆತ್ಮೀಯರು ಸ್ನೇಹಿತರುಗೆ ಬೆನ್ನಲೆಬಾಗಿದ್ದಾರೆ

ಕೊನೆಗೂ ಮದುವೆ:

ಸಾಮಾಜಿಕ ಮಾಧ್ಯಮಗಳಂತೂ ನಿರೂಪಕಿ ಅನೂಶ್ರೀ ಅವರಿಗೆ ಅದೆಷ್ಟೋ ಬಾರಿ ಮದುವೆ ಮಾಡಿದ್ದಾರೋ ಗೊತ್ತಿಲ್ಲ, ಈ ವಿಷಯವನ್ನು ಅವರು ಹಾಸ್ಯದ ದಾಟಿಯಲ್ಲಿ ತೆಗೆದುಕೊಂಡಿದ್ದೂ ಉಂಟು. ಕೊನೆಗೂ ನಿರೂಪಕಿ ಅನೂಶ್ರೀ ಅವರು ರೋಶನ್ ಅವರನ್ನು ವರಿಸಿದ್ದಾರೆ, ಹೊಸ ಬಾಳಿಗೆ ಅಡಿ ಇಟ್ಟ ಅನೂಶ್ರೀ –ರೋಶನ್ ದಂಪತಿಗೆ ಶುಭವಾಗಲಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin