ಸೆಪ್ಟಂಬರ್ 5 ರಂದು ‘ಓಂ ಶಿವಂ’ ಚಿತ್ರ ತೆರೆಗೆ - CineNewsKannada.com

ಸೆಪ್ಟಂಬರ್ 5 ರಂದು ‘ಓಂ ಶಿವಂ’ ಚಿತ್ರ ತೆರೆಗೆ

ಅಲ್ವಿನ್ ನಿರ್ದೇಶನದ, ದೀಪಾ ಮೂವೀಸ್ ಲಾಂಛನದಲ್ಲಿ ಕೆ.ಎನ್.ಕೃಷ್ಣ ನಿರ್ಮಿಸಿರುವ ಹಾಗೂ ಭಾರ್ಗವ ಕೃಷ್ಣ ಮತ್ತು ವಿರಾನಿಕ ಶೆಟ್ಟಿ ನಾಯಕ – ನಾಯಕಿಯಾಗಿ ನಟಿಸಿರುವ “ಓಂ ಶಿವಂ” ಚಿತ್ರ ಸೆಪ್ಟಂಬರ್ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಳವಳ್ಳಿ ಸಾಯಿಕೃಷ್ಣ ಅವರದು. ವಿರೇಶ್ ಛಾಯಾಗ್ರಹಣ, ಸತೀಶ್ ಚಂದ್ರ ಸಂಕಲನ, ವಿಜಯ್ ಯಾರ್ಡ್ಲಿ ಸಂಗೀತ ನಿರ್ದೇಶನ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್, ನರಸಿಂಹ, ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನವಿದೆ.

ಚಿತ್ರದ ತಾರಾಬಳಗದಲ್ಲಿ ಭಾರ್ಗವ ಕೃಷ್ಣ, ವಿರಾನಿಕ ಶೆಟ್ಟಿ, ರವಿ ಕಾಳೆ, ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ಬಲ ರಾಜ್ವಾಡಿ, ಲಕ್ಷ್ಮೀ ಸಿದ್ದಯ್ಯ, ಅಪೂರ್ವ, ಯಗ್ರಂ ರವಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin