ಸ್ಯಾಂಡಲ್ ವುಡ್ ವುಮೆನ್ಸ್ ಕ್ರಿಕೆಟ್ ಲೀಗ್ “ಟೀಮ್ ಮಂಜುಳ” ತಂಡ ವಿಜಯೋತ್ಸವ
ಇತ್ತೀಚೆಗಷ್ಟೇ ದುಬೈನಲಿ ಸ್ಯಾಂಡಲ್ ವುಡ್ ವುಮೆನ್ಸ್ ಕ್ರಿಕೆಟ್ ಲೀಗ್ -SWCL ನ ಮೊದಲ ಆವೃತ್ತಿ ನಡೆದಿತ್ತು. ಮೋನಿಕಾ ಕಲ್ಲೂರಿ ಆರ್ಟ್ಸ್ ಒಡೆತನದ “ಟೀಮ್ ಮಂಜುಳಾ” ತಂಡ ಈ ಲೀಗ್ನ ಚಾಂಪಿಯನ್ಸ್ ಆಗಿದ್ದರು. ಈ ಹಿನ್ನೆಲೆಯಲ್ಲಿ “ಟೀಮ್ ಮಂಜುಳಾ” ತಂಡದ ಒಡತಿ ಮೋನಿಕಾ ಕಲ್ಲೂರಿ ತಂಡದ ಸದಸ್ಯರನ್ನು ಅಭಿನಂದಿಸಿದರು

ತಂಡದ ರಾಯಭಾರಿ ನಟಿ ಅನು ಪ್ರಭಾಕರ್, ಕ್ಯಾಪ್ಟನ್ ಸಂಗೀತ ಭಟ್, ವೈಸ್ ಕ್ಯಾಪ್ಟನ್ ನಿಖಿತ ಸ್ವಾಮಿ ಹಾಗೂ ಟೀಮ್ ಮಂಜುಳಾ ತಂಡದ ಆಟಗಾರ್ತಿಯರು ಪಾಲ್ಗೊಂಡಿದ್ದರು.
ಚಿಕ್ಕವಯಸ್ಸಿನಲ್ಲೇ ಹೆಸರಾಂತ ಶೈಕ್ಷಣಿಕ ಸಂಸ್ಥೆಯ ಉಸ್ತುವಾರಿ ಹೊತ್ತುಕೊಂಡಿರುವ ಮೋನಿಕಾ ಕಲ್ಲೂರಿ ಸಮಾಜಮುಖಿ ಕೆಲಸಗಳಿಂದಲೂ ಖ್ಯಾತಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಮೋನಿಕಾ ಕಲ್ಲೂರಿ,ಈಗಿನ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವುದು ನಿಜಕ್ಕೂ ಖುಷಿಯಾಗುತ್ತಿದೆ . ಸ್ಯಾಂಡಲ್ ವುಡ್ ವುಮೆನ್ಸ್ ಕ್ರಿಕೆಟ್ ಲೀಗ್ ತಂಡದ ಓನರ್ ಆಗಲು ನಟಿ ತಾರಾ ಅನುರಾಧ ಕಾರಣ. ಅವರ ಮುಖಾಂತರ ತಂಡದ ಪರಿಚಯವಾಯಿತು. ಮೊದಲ ಆವೃತ್ತಿಯಲ್ಲೇ ತಂಡ ಗೆದ್ದಿರುವುದು ಬಹಳ ಸಂತೋಷವಾಗಿದೆ. ಕೊನೆಯ ಓವರ್ ನಲ್ಲಿ ಜಾಯ್ಸಿ ಫರ್ನಾಂಡಿಸ್ ಆಡಿದ ಅದ್ಭುತ ಆಟ ಈಗಲೂ ಕಣ್ಣ ಮುಂದೆ ಇದೆ. ಈ ಸಂದರ್ಭದಲ್ಲಿ ಇಡೀ ತಂಡಕ್ಕೆ ಹಾಗೂ ತಂಡದ ರಾಯಭಾರಿ ಆಗಿರುವ ಅನು ಪ್ರಭಾಕರ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ನಟಿ ಅನು ಪ್ರಭಾಕರ್ ಮಾತನಾಡಿದುಬೈನಲ್ಲಿ ಪಂದ್ಯಗಳು ಮುಗಿದು “ಟೀಮ್ ಮಂಜುಳಾ” ತಂಡ ಜಯಗಳಿಸಿದೆ. ಆದರೆ, ಈ ಸಂಭ್ರಮವನ್ನು ಮೋನಿಕಾ ಕಲ್ಲೂರಿ ಅವರು ನಮ್ಮೂರಿನಲ್ಲಿ ಆಚರಿಸಿ, ಎಲ್ಲರನ್ನೂ ಗೌರವಿಸಿದ್ದು ನನಗೆ ಬಹಳ ಸಂತಸವಾಗಿದೆ. ಇಡೀ “ಟೀಮ್ ಮಂಜುಳಾ” ತಂಡಕ್ಕೆ ನನ್ನ ಅಭಿನಂದನೆ ಎಂದರು
“ಟೀಮ್ ಮಂಜುಳಾ” ತಂಡದ ನಾಯಕಿ ಸಂಗಿತಾ ಭಟ್, ಉಪ ನಾಯಕಿ ನಿಖಿತ ಸ್ವಾಮಿ ಹಾಗೂ ಆಟಗಾರರಾದ ಪವಿ ಪೂವಯ್ಯ, ಜಾಯ್ಸಿ ಫರ್ನಾಂಡೀಸ್, ಭಾರತಿ ಪೃಥ್ವಿರಾಜ್, ಸುಷ್ಮ ತೊಗರೆ, ಸೌಮ್ಯ ಮುಂತಾದವರು ತಮ್ಮ ಖುಷಿ ಹಂಚಿಕೊಂಡರು

