“ರೋಣ’ ಚಿತ್ರದ ಮೂಲಕ ನವ ನಾಯಕ ರಘುರಾಜನಂದ ಆಗಮನ
ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ನಾಯಕ ನಟರು ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ, ಆ ಸಾಲಿಗೆ ಮತ್ತೊಬ್ಬ ನವ ನಟ ರಘು ರಾಜ ನಂದ ಆಗಮನವಾಗಿದೆ. ಅದುವೇ “ರೋಣ” ಚಿತ್ರದ ಮೂಲಕ

ತಮ್ಮದೇ ನಿರ್ಮಾಣದಲ್ಲಿ ಮೂಡಿಬಂದಿರುವ ರೋಣ ಚಿತ್ರದಲ್ಲಿ ರಘುರಾಜನಂದ ಮೊದಲ ಪ್ರಯತ್ನದಲ್ಲಿ ಚಿತ್ರರಂಗದಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಗಮನ ಹೆಚ್ಚುವಂತೆ ಮಾಡಿದೆ
ರೋಣ ಚಿತ್ರದ ಟೀಸರ್, ಪೋಸ್ಟರ್ ಬಿಡುಗಡೆಯಾಗಿದೆ, ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದ ಶರತ್ ಲೋಹಿತಾಶ್ವ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಈ ವೇಳೆ ಮಾತನಾಡಿದ ಅವರು ಹೊಸತಂಡವಾದರೂ ಚಿತ್ರದ ಕಥೆ, ಕಲಾವಿದರಿಂದ ಏನು ತೆಗೆಸಬೇಕು ಎನ್ನುವುದು ನಿರ್ದೇಶಕರಿಗೆ ಗೊತ್ತಿತ್ತು. ಹೀಗಾಗಿ ಚಿತ್ರ ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಯ ಹಂತಕ್ಕೆ ಬಂದಿದೆ, ಚಿತ್ರದಲ್ಲಿ ನನ್ನದೂ ಪ್ರಮುಖ ಪಾತ್ರವಿದೆ, ಹೊಸ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಿಸಿದರು

ಚಿತ್ರಕ್ಕೆ ಸತೀಶ್ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು ಚಿತ್ರವನ್ನು ಸುಮಾರು 60ಕ್ಕೂ ಹೆಚ್ಚು ದಿನಗಳ ಕಾಳ ಚಿತ್ರೀಕರಣ ಮಾಡಿದ್ದು ಅಕ್ಟೋಬರ್ ಅಥವಾ ನವಂಬರ್ಲ್ಲಿ ತೆರೆಗೆ ತರುವ ಉದ್ದೇಶವಿದೆ, ರೋಣ ಊರಿನ ಹೆಸರು ಜೊತೆಗೆ ಸಾಮಾಜಿಕ ಕಳಕಳಿ ಸೇರಿದಂತೆ ಸಿನಮಾಕ್ಕೆ ಬೇಕಾದ್ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು
ಕನ್ನಡ ಪಿಚ್ಚರ್ ಚಿತ್ರವನ್ನು ಅರ್ಪಿಸಿದೆ. ಅರುಣ್ ಕುಮಾರ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬದೇರಿಯ ಸಂಗೀತ ಸಂಯೋಜಿಸಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್,ಕಿನ್ನಾಳ ರಾಜ್ ಸಾಹಿತ್ಯ ಬರೆದಿದ್ದಾರೆ.
ನಾಯಕನಾಗಿ ರಘುರಾಜನಂದ ನವ ಪ್ರತಿಭೆ ಕಾಣಿಸಿಕೊಂಡಿರೆ, ರಂಗಭೂಮಿ ಹಿನ್ನೆಲೆಯ ರಘು ರಾಜ ನಂದನಿಗೆ ನಾಯಕಿಯಾಗಿ ಪ್ರಕೃತಿ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ ತಂದೆಯ ಪಾತ್ರ ನಿರ್ವಹಿಸಿದ್ದು ಮಾಲೂರು ವಿಜಯ್ , ಚಿಲ್ಲರ್ ಮಂಜು , ಬಲರಾಜವಾಡಿ, ಸಂಗೀತ ಅನೀಲ್ ಪ್ರಮುಖ ಪಾತ್ರಗಳನ್ನ ನಿಭಾಯಿಸಿದ್ದಾರೆ.

ಹಳ್ಳಿ ಸೊಗಡಿನಲ್ಲಿ ವೈಜ್ಞಾನಿಕ , ಧಾರ್ಮಿಕ, ರಾಜಕೀಯ ವಿಚಾರಗಳು ಈ ಸಿನಿಮಾದಲ್ಲಿ ಬೆರೆತಂತೆ ಕಾಣ್ತಿದೆ. ಹೊಸ ನಿರ್ದೇಶಕನ ಕೆಲಸ ತಾಂತ್ರಿಕ ನೈಪುಣ್ಯತೆ ಎದ್ದು ಕಾಣ್ತಿದೆ. ನಾಯಕ ನಟ ರಘುರಾಜನಂದ ನೋಟ, ಆಟ ನಿರೀಕ್ಷೆ ಹುಟ್ಟಿಸಿದೆ. ಬಹುತೇಕ ರಂಗಭೂಮಿ ಹಿನ್ನೆಲೆಯುಳ್ಳವರೇ ಸೇರಿ ತಂಡ ಕಟ್ಟಿಕೊಂಡು ಮಾಡಿರುವ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ

