ಪುಷ್ಪ ಅರುಣ್ ಕುಮಾರ್ – ನಿರ್ದೇಶಕ ಶ್ರೀರಾಜ್ ಕಾಂಬಿನೇಷನ್‍ನಲ್ಲಿ ಎರಡನೇ ಚಿತ್ರ
ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ತಮ್ಮ ಪಿಎ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೊದಲ ಚಿತ್ರವಾಗಿ “ಕೊತ್ತಲವಾಡಿ” ಚಿತ್ರ ನಿರ್ಮಿಸಿದ್ದರು. ಚಿತ್ರ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು.

ವಿಜಯ ದಶಮಿಯ ಶುಭದಿನದಂದು ಪಿಎ ಪ್ರೊಡಕ್ಷನ್ಸ್ ಮೂಲಕ ಎರಡನೇ ಚಿತ್ರ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಈ ಚಿತ್ರವನ್ನೂ “ಕೊತ್ತಲವಾಡಿ” ನಿರ್ದೇಶಕ ಶ್ರೀರಾಜ್ ಅವರೆ ನಿರ್ದೇಶಿಸಲಿದ್ದಾರೆ.
ಬಹುತೇಕ “ಕೊತ್ತಲವಾಡಿ” ಚಿತ್ರದ ತಂತ್ರಜ್ಞರ ತಂಡವೇ ಚಿತ್ರದಲ್ಲೂ ಮುಂದುವರೆಯಲಿದ್ದಾರೆ ಎಂದು ತಿಳಿಸಿರುವ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್, ಸದ್ಯದಲ್ಲೇ ನೂತನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.


