Muhurat for a film with a different title that talks about the value of relationships

ಸಂಬಂಧಗಳ ಮೌಲ್ಯ ತಿಳಿಸುವ ವಿಭಿನ್ನ ಶೀರ್ಷಿಕೆಯ ಚಿತ್ರಕ್ಕೆ ಮುಹೂರ್ತ - CineNewsKannada.com

ಸಂಬಂಧಗಳ ಮೌಲ್ಯ ತಿಳಿಸುವ ವಿಭಿನ್ನ ಶೀರ್ಷಿಕೆಯ ಚಿತ್ರಕ್ಕೆ ಮುಹೂರ್ತ

“4.30 ರಿಂದ 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ” ಎಂಬ ವಿಭಿನ್ನ ಶೀರ್ಷಿಕೆಯುಳ್ಳ ಚಿತ್ರದ ಮುಹೂರ್ತ ನಡೆದಿದೆ’’. ಧರ್ಮಶ್ರೀ ಮಂಜುನಾಥ್ ಹಾಗೂ ಯೋಗರಾಜ್ ನಿರ್ಮಿಸುತ್ತಿರುವ ಚಿತ್ರವನ್ನು ಪೂವೈ ಸುರೇಶ್ ಹಾಗೂ ಶಿವರಾಜ್ ನಿರ್ದೇಶಿಸುತ್ತಿದ್ದಾರೆ.

ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಪುತ್ರ ಎಂ.ಎನ್ ಸುಚಿತ್ ನಾಯಕನಾಗಿ ಹಾಗೂ ಸಾತ್ವಿಕ ನಾಯಕಿಯಾಗಿ ನಟಿಸುತ್ತಿದ್ದಾರೆ.ದ್ವಿತೀಯ ನಾಯಕನಾಗಿ ಅನಿಲ್ ಹಾಗೂ ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಧನ್ಯ ಅಭಿನಯಿಸುತ್ತಿದ್ದಾರೆ.

ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಮಾತಮಾಡಿ ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡುವುದು ಕಷ್ಟ ಇರಲಿಲ್ಲ. ಆದರೆ, ಮೊದಲು ಉತ್ತಮ ಕಲಾವಿದ ಅಂತ ಕರೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ನಟನೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾನೆ. ಚಿತ್ರಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದರು

ಮತ್ತೊಬ್ಬ ನಿರ್ಮಾಪಕ ಯೋಗರಾಜ್ ಮಾತನಾಡಿ ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಕಥಾಹಂದರ ಹೊಂದಿರುವ ಚಿತ್ರ. 90ರ ದಶಕದಲ್ಲಿ ಮದುವೆ ಅಂದರೆ ಒಂದು ಸಂಭ್ರಮ. ಪ್ರತಿಯೊಬ್ಬರ ಮನೆಗೂ ಹೋಗಿ ಪತ್ರಿಕೆ ಕೊಟ್ಟು ಮದುವೆಗೆ ಕರೆಯುತ್ತಿದ್ದರು. ಈಗ ಹಾಗಲ್ಲ. ಎಲ್ಲಾ ಮೊಬೈಲ್ ನಲ್ಲೇ. ಹಾಗಾಗಿ ಈಗಿನ ಜನತೆಗೆ ಅಂದಿನ ಸಂಬಂಧಗಳು ಹೇಗಿತ್ತು ಎಂದು ತೋರಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ. ಹಾಡುಗಳ ಚಿತ್ರೀಕರಣ ಚಿಕ್ಕಮಗಳೂರು, ಮಂಗಳೂರು ಮುಂತಾದ ಕಡೆ ಆಗಲಿದೆ ಎಂದು ಹೇಳಿದರು.

ನಾಯಕ ಎಂ.ಎನ್ ಸುಚಿತ್ ಮಾತನಾಡಿ ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಚಿತ್ರದ ಮೂಲಕ ನಾಯಕನಾಗಿ ನಟಿಸುತ್ತಿದ್ದೇನೆ. ನಟನೆ, ಸಾಹಸ ಸೇರಿದಂತೆ ಎಲ್ಲವನ್ನು ಕಲಿತ್ತಿದ್ದೇನೆ. ಎಂದು ತಿಳಿಸಿದರು.

ನಿರ್ದೇಶಕರಾದ ಪೂವೈ ಸುರೇಶ್, ಶಿವರಾಜ್, ಚಿತ್ರದ ದ್ವಿತೀಯ ನಾಯಕ ಅನಿಲ್, ದ್ವಿತೀಯ ನಾಯಕಿ ಧನ್ಯ, ಕಲಾವಿದರಾದ ರಮೇಶ್ ರೈ, ರೇಖಾದಾಸ್, ವಸ್ತ್ರ ವಿನ್ಯಾಸ ಮಾಡುತ್ತಿರುವ ಸುಶೀಲ ಯೋಗರಾಜ್ ಮುಂತಾದವರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin