ಕಾಂತಾರ ಚಾಪ್ಟರ್ 1 ಇಂಗ್ಲೀಷ್ ವರ್ಷನ್ ಅಕ್ಟೋಬರ್ 31 ರಂದು ತೆರೆಗೆ
ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಯಾದಾಗಿನಿಂದ ಎಲ್ಲಾ ಭಾಷೆಗಳಲ್ಲಿ ಪ್ರೇಕ್ಷಕರ ಮನಗೆದ್ದಿದೆ, ಅಷ್ಟೇ ಅಲ್ಲ, ಜಾಗತಿಕವಾಗಿ 800 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ. ಇದೀಗ ಇದರ ಬೆನ್ನಲ್ಲೇ ಕಾಂತಾರ ಚಾಪ್ಟರ್ 1 ಚಿತ್ರ ಡಬ್ ಆಗಿ ಇಂಗ್ಲೀಷ್ ಭಾಷೆಯಲ್ಲಿ ಬಿಡುಡಗೆಗೆ ಸಜ್ಜಾಗಿದೆ.
ಭಾರತೀಯ ಭಾಷೆಯ ಚಿತ್ರವೊಂದು ಇಂಗ್ಲೀಷ್ ಭಾಷೆಗೆ ಡಬ್ ಆಗಿ ಬಿಡುಡಗೆ ಆಗುತ್ತಿರುವ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಕಾಂತಾರ ಚಾಪ್ಟರ್ 1 ಚಿತ್ರ ಪಾತ್ರವಾಗಿದೆ, ಡಬ್ ಆಗಿರುವ ಚಿತ್ರ ಅಕ್ಟೋಬರ್ 31 ರಂದು ಬಿಡುಗಡೆಯಾಗುತ್ತಿದ್ದು ಚಿತ್ರವನ್ನು ಕನ್ನಡ ಸೇರಿದಂತೆ ಇನ್ನಿತರೆ ಪ್ರಾದೇಶಿಕ ಭಾಷೆ ಬರದ ಮಂದಿ ಇಂಗ್ಲೀಷ್ ನಲ್ಲಿ ನೋಡಲು ಹೊಂಬಾಳೆ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.
ಇಂಗ್ಲೀಷ್ ವರ್ಷನ್‍ನಲ್ಲಿ ಮೂಡಿಬಂದಿರುವ ಕಾಂತಾರ ಚಾಪ್ಟರ್ 1 ಚಿತ್ರ 2 ಗಂಟೆ 14 ನಿಮಿಷ 45 ಸೆಕೆಂಡ್ ಅವಧಿ ಹೊಂದಿದೆ, ಇದೇ ಅಕ್ಟೋಬರ್ 31ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಚಿತ್ರ ಇದಾಗಿದೆ, ಹೊಂಬಾಳೆ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ, ಚಿತ್ರದಲ್ಲಿ ರುಕ್ಮಣಿ ವಸಂತ್ ಸೇರಿದಂತೆ ಹಲವ ಹಿರಿ- ಕಿರಿಯ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ.

