Review: ದುಡ್ಡು ಮತ್ತು ಕ್ರಿಕೆಟ್ ಬೆಟ್ಟಿಂಗ್ ಸುತ್ತಾ ಸಾಗುವ ಕಥನ “ಬ್ರಾಟ್”
ಚಿತ್ರ :ಬ್ರಾಟ್
ನಿರ್ದೇಶನ : ಶಶಾಂಕ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಮನಿಶಾ ಕಂದಕೂರು, ಅಚ್ಯುತ್ ಕುಮಾರ್, ಮಾನಸಿ ಸುಧೀರ್, ರಮೇಶ್ ಇಂದಿರಾ, ಡ್ರಾಗನ್ ಮಂಜು ಮತ್ತಿತರರು
ರೇಟಿಂಗ್ : *** 3.5/5
“ಅಮ್ಮ-ಅಕ್ಕಂದು ವಡವೆ ಅಡವಿಟ್ಟು ಹಣ ತಂದಿದ್ದೇನೆ,, ಬದುಕಿಗೆ ಆಧಾರವಾಗಿದ್ದ ಕಿರಾಣಿ ಅಂಗಡಿಯನ್ನು ಗಿರಿವಿಗೆ ಇಟ್ಟು ಸಾಲ ತಂದಿದ್ದೇನೆ…
ಈ ರೀತಿ ಹಣ ತಂದಿದ್ದೀರಿ ಅಂದರೆ ಬೆಟ್ಟಿಂಗೇ ಆಡುತ್ತಿರಲಿಲ್ಲ… ಆಗಿದ್ದು ಆಯ್ತು ನಾಳೆ ಬಾಬು ಹಿಡಿತಿನಿ..,”
ಹೆಚ್ಚು ಹಣ ಮಾಡುವ ಆಸೆಗೆ ಹಣ ತಂದು ಕಳೆದುಕೊಂಡ ಹುಡುಗರ ಕಥೆ,ವ್ಯಥೆ.. ಬೆಟ್ಟಿಂಗ್ ಮೋಹ ಜಾಲಕ್ಕೆ ಬಿದ್ದು ಜೀವನ ಕಳೆದುಕೊಂಡ ಹುಡುಗರ ಬದುಕಿನ ಕಥೆ., ಇಲ್ಲಿ ಕನಸಿದೆ. ಎಲ್ಲರಂತೆ ನಾವೂ ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಹಠವಿದೆ, ನಾಯಿ ಬೆಂಜ್ ಕಾರಲ್ಲಿ ಹೋಗುವಾಗ ನಾವ್ಯಾಕೆ ಹೋಗಬಾರದು ಎನ್ನುವ ಆಸೆ ಆಕಾಂಕ್ಷೆಯೂ ಇದೆ, ಆದರೆ ಆಯ್ಕೆ ಮಾಡಿಕೊಂಡ ದಾರಿ ಮಾತ್ರ ಬೇರೆ..
ಕ್ರಿಕೆಟ್ ಬೆಟ್ಟಿಂಗ್ ಮತ್ತು ಅದರ ಹಿಂದೆ ಬಿದ್ದು ಬದುಕು ಕಳೆದುಕೊಂಡು ಬೀದಿಗೆ ಬಿದ್ದ ಕಥನವನ್ನು ನಿರ್ದೇಶಕ ಶಶಾಂಕ್ “ಬ್ರಾಟ್”ಚಿತ್ರದ ಮೂಲಕ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಅದೇ ಪ್ರೀತಿ, ಮರ ಸುತ್ತುವ ವಿಷಯಮ ಹೊಡೆದಾಟ, ಬಡಿದಾಟದ ಸಿದ್ದಸೂತ್ರಗಳಿಗೆ ಮೊರೆ ಹೋಗದೆ ವಿಭಿನ್ನ ಕಥೆಯನ್ನು ನವಿರಾಗಿ ನಿರೂಪಣೆ ಮಾಡಿ ಪ್ರೇಕ್ಷಕರ ಮುಂದೆ ಇಟ್ಟಿರುವ ನಿರ್ದೇಶಕರು ತಮ್ಮ ಕೆಲಸದಲ್ಲಿ ಸಫಲರಾಗಿದ್ದಾರೆ ಕೂಡ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹೊಸ ಬಗೆಯ ಚಿತ್ರಗಳು ತೆರೆಗೆ ಬರುತ್ತಿವೆ. ಜೊತೆಗೆ ಜನಾಕರ್ಷಣೆಯನ್ನೂ ಕೂಡ ಪಡೆಯುತ್ತಿವೆ, ಅಂತಹ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ “ಬ್ರಾಟ್”.ಕ್ರಿಕೆಟ್ ಬೆಟ್ಟಿಂಗ್ ದಂಧೆ, ಹಣದ ವ್ಯಾಮೋಹ, ಪ್ರೀತಿ, ಪ್ರೇಮ, ಪ್ರತೀಕಾರದ ಸೇರಿದಂತೆ ಕಮರ್ಷಿಯ್ ಚಿತ್ರಗಳಿಗಿರುವ ಅಂಶಗಳನ್ನು ಅಡಕಗೊಳಿಸಿ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಡಿಲವರಿ ಬಾಯ್ ಕೃಷ್ಣ ಎಲ್ಲರೂ ಆತನನ್ನು ಸ್ನೇಹಿತರು ಕ್ರಿಸ್ಟಿ (ಡಾರ್ಲಿಂಗ್ ಕೃಷ್ಣ) ಎಂದೇ ಕರೆಯುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿ ಆದ ಅವಮಾನಕ್ಕೆ ಸೆಟೆದು ಹಣ ಮಾಡುವ ದಾರಿ ಆಯ್ಕೆ ಮಾಡಿಕೊಳ್ಳುತ್ತಾನೆ. ದುಡ್ಡಿದ್ದರೆ ಎಲ್ಲವೂ ತಾನಾಗಿಯೇ ಬರಲಿದೆ ಎನ್ನುವ ಸತ್ಯ ಅರಿತ ಆತ ಸುಳ್ಳು ಹೇಳಿಕೊಂಡು ಯಾವಾರಿಸುತ್ತಾನೆ, ಆದರೆ ಆತ ಯಾರಿಗೂ ಮೋಸಮಾಡದವ. ಅಚಾನಕ್ ಆಗಿ ಮನೀಶಾ ( ಮನೀಶಾ ಕಂದಕೂರು) ಭೇಟಿ ಆಗುತ್ತೆ. ಆಕೆ ಸಿಕ್ಕಿದ್ದಂತೆ ಅದೃಷ್ಠ ಎಂದು ಭಾವಿಸುತ್ತಾನೆ. ಆಕೆಯನ್ನು ಎಲ್ಲರೂ ಅದೃಷ್ಠವಿಲ್ಲದವಳು ಎನ್ನುವ ಹಂಗಿಗೆ ಒಳಗಾದವಳು, ಇಷ್ಟು ಸಾಕು ಇಬ್ಬರ ಪರಿಚಯ ಮತ್ತು ಪ್ರೀತಿಯ ಬೀಜ ಮೊಳಕೆಯೊಡೆಲು.
ಕ್ರಿಸ್ಟಿಯ ಅಪ್ಪ ಮಹದೇವಯ್ಯ (ಅಚ್ಚುತ್ ಕುಮಾರ್) ಪ್ರಾಮಾಣಿಕ ಹೆಡ್ ಕಾನ್ಟೇಬಲ್. ಕರ್ತವ್ಯವನ್ನೇ ದೇವರು ಎಂದು ನಂಬಿದವರು. ಅದಕ್ಕಾಗಿ ಮಗನನ್ನು ಎದುರು ಹಾಕಿಕೊಳ್ಳಲು ಆತನನ್ನು ಕಾನೂನಿನ ಕುಣಿಕೆಗೆ ತರಲು ಹಿಂದುಮುಂದು ನೋಡದವ.
ರವಿಕುಮಾರ್ ( ರಮೇಶ್ ಇಂದಿರಾ) ಭ್ರಷ್ಟ ಪೊಲೀಸ್ ಇನ್ಸ್ ಪೆಕ್ಟರ್, ಬೆಟ್ಟಿಂಗ್ ದಂಧೆ ನಡೆಸುವ ಡಾಲರ್ ಮಣಿ ( ಡ್ರಾಗನ್ ಮಂಜು) ಜೊತೆ ಕೈಜೋಡಿಸಿದವ. ಕ್ರಿಸ್ಟಿಗೆ ಹೇಗಾದರೂ ಮಾಡಿ ಹಣ ಸಂಪಾದಿಸುವ ಗುರಿ, ಆತ ಮನೆಯವರಿಗೆ ಹಣ ಮಾಡಲು ಸಲಹೆ ಕೊಡುತ್ತೇನೆ ಎಂದು ಕಂಪನಿ ಮಾಡಿ ಬೆಟ್ಟಿಂಗ್ ದಂಧೆ ಆರಂಭಿಸುತ್ತಾನೆ,ಅದಕ್ಕಾಗಿ ಆತ ಮಾಡದ ಕೆಲಸಗಳಿಲ್ಲ, ಬೆಟ್ಟಿಂಗ್‍ನಲ್ಲಿ ಹಣ ಮಾಡ್ತಾರೆ, ಕಷ್ಟ ಕೋಟಲೆ ತೀರುತ್ತಾ..ಇಲ್ಲ ತಾನೇ ಎಣೆದ ಬಲೆಯಲ್ಲಿ ಬೀಳ್ತಾನಾ.. ಇಲ್ಲ ಅಂದುಕೊಂಡ ಗುರಿ ಸಾಧಿಸುತ್ತಾನೆ.. ಚಿತ್ರದ ಕಥನ ಕುತೂಹಲ ಅದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ನಿರ್ದೇಶಕ ಶಶಾಂಕ್ ಕ್ರಿಕೆಟ್ ಬೆಟ್ಟಿಂಗ್ ಮತ್ತು ಅದನ್ನು ನಂಬಿಕೊಂಡ ಯುವಕರ ಬದುಕು ಏನೆಲ್ಲಾ ಆಗಲಿದೆ. ಎನ್ನುವುದನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಪ್ರಾಮಾಣಿಕತೆ ಇಲ್ಲಿ ಕೆಲ ಮಾಡೋದಿಲ್ಲ ಬರೀ ದುಡ್ಡು ಎನ್ನುವ ವಾಸ್ತವ ಸತ್ಯವನ್ನು ಚಿತ್ರದ ಮೂಲಕ ಅನಾವರಣ ಮಾಡಿದ್ದಾರೆ.
ನಟ ಡಾರ್ಲಿಂಗ್ ಕೃಷ್ಣ, ಎಂದಿನಂತೆ ಲವಲವಿಕೆಯ ನಟನೆಯ ಮೂಲಕ ಗಮನ ಸೆಳೆದಿದ್ಧಾರೆ. ನಟಿ ಮನೀಶಾ ಕಂದಕೂರು ಕನ್ನಡ ಚಿತ್ರರಂಗಕ್ಕೆ ಭರವಸೆಯ ನಟಿಯಾಗುವ ಎಲ್ಲಾ ಲಕ್ಷಣ ತೋರಿದ್ದಾರೆ. ಮೊದಲ ಚಿತ್ರ ಅನ್ನಿಸುವುದೇ ಇಲ್ಲ ಅಷ್ಟರ ಮಟ್ಟಿಗೆ ಸಿಕ್ಕ ಪಾತ್ರಕ್ಕೆ ಜೀವತುಂಬಿದ್ದಾರೆ.
ಕಲಾವಿದರಾದ ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಡ್ರಾಗನ್ ಮಂಜು, ಮಾನಸಿ ಸುಧೀರ್ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.ಬ್ರಾಟ್ ಕೊಟ್ಟ ಕಾಸಿಗೆ ಮೋಸ ಮಾಡದ ಕೊನೆಕತನ ನೋಡಿಸಿಕೊಂಡು ಹೋಗುವ ಚಿತ್ರ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

