Review: "Rona", a political story set in a rural setting

Review: ಗ್ರಾಮೀಣ ಸೊಗಡಿನಲ್ಲಿ ರಾಜಕೀಯದ ಕಥಾಹಂದರ ” ರೋಣ” - CineNewsKannada.com

Review: ಗ್ರಾಮೀಣ ಸೊಗಡಿನಲ್ಲಿ ರಾಜಕೀಯದ ಕಥಾಹಂದರ ” ರೋಣ”

ಚಿತ್ರ : ರೋಣ
ನಿರ್ದೇಶಕ: ಸತೀಶ್ ಕುಮಾರ್
ತಾರಾಗಣ : ರಘು ರಾಜ ನಂದ, ಪ್ರಕೃತಿ ಪ್ರಸಾದ್, ಶರತ್ ಲೋಹಿತಾಶ್ವ, ಸದಾಶಿವ ನೀನಾಸಂ ಮಾಲೂರು ವಿಜಯ್, ಚಿಲ್ಲರ್ ಮಂಜು, ಬಲರಾಜವಾಡಿ, ಸಂಗೀತ ಅನೀಲ್ ಮತ್ತಿತರು
ರೇಟಿಂಗ್ : * 3.5/ 5

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಹೊಸ ಕಂಟೆಂಟುಗಳಿರುವ. ಕಥೆಗಳು ,ಚಿತ್ರಗಳು ತೆರೆಗೆ ಬರುತ್ತಿವೆ. ಅದರಲ್ಲಿಯೂ ಯುವನಟರು ಚಿತ್ರರಂಗದಲ್ಲಿ ಕಮಾಲು ಮಾಡುತ್ತಿದ್ದಾರೆ. ಅಂತಹ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ” ರೋಣ” ಚಿತ್ರ.

ಗ್ರಾಮೀಣ ಸೊಗಡಿನ ಜೊತೆಗೆ ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅದರ ವಿರುದ್ದ ತಿರುಗು ಬೀಳುವ ಕಥನಕ್ಕೆ ರೋಚಕ ತಿರುವುಗಳ ಮೂಲಕ ಚಿತ್ರನ್ನು ಕುತೂಹಲಕಾರಿ ತೆರೆಗೆ ಕಟ್ಟಿಕೊಡಲಾಗಿದೆ. ಗ್ರಾಮೀಣ ಸೊಗಡಿನಲ್ಲಿ ರಾಜಕೀಯದ ಕಥಾಹಂದರವನ್ನು ನಿರ್ದೇಶಕ ಸತೀಶ್ ಕುಮಾರ್ ತೆರೆಗೆ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ

ಗ್ರಾಮೀಣ ಪ್ರದೇಶದಲ್ಲಿನ ಆಚಾರ, ವಿಚಾರ, ತಲೆ ತಲಾಂತರಿಂದ ನಡೆದುಕೊಂಡು ಬಂದ ಸಂಪ್ರದಾಯಗಳಿಗೆ ಜನರು ಒಗ್ಗಿಕೊಂಡು ಬಿಟ್ಟಿರುತ್ತಾರೆ. ರಾಜಕೀಯ, ತಂತ್ರ, ಪ್ರತಿ ತಂತ್ರ ದ್ವೇಷ, ಅಸೂಯೆಗಳ ವಿರುದ್ದ ಯುವ ಪಡೆ ತಿರುಗಿ ಬಿದ್ದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ರೋಣ ಕಣ್ಣ ಮುಂದೆ ಇರುವ ಉದಾಹರಣೆ.

ರೋಣ ಊರಿನ ಹೆಸರು, ರಾಜಕೀಯ ಕಾರಣಕ್ಕೆ ಮಹತ್ವ ಪಡೆದ ಸ್ಥಳ. ಮುಖ್ಯಮಂತ್ರಿ ಆದಿಯಾಗಿ ಯಾವೆಲ್ಲಾ ರಾಜಕೀಯ ನಾಯಕರಿಗೆ ಹೇಳಿ ಮಾಡಿಸಿದ ಊರು. ಅಲ್ಲಿನ ಶಾಸಕ ಜನರಿಗೆ ಅಗತ್ಯವಿರುವ ಯಾವುದೇ ಮೂಲಸೌಲಭ್ಯ ಕಲ್ಪಿಸದೆ ರೈತರು ಮತ್ತು ಜನಸಾಮಾನ್ಯರ ಜಮೀನು ಕಳಬಳಿಸುವುದೇ ಆತನ ಕಾಯಕ.

ಗ್ರಾಮದ ಮುಖಂಡ ರಾಮಕೃಷ್ಣ (ಶರತ್ ಲೋಹಿತಾಶ್ವ), ಹನುಮಂತು (ಬಾಲರಾಜವಾಡಿ) ಮೇಲೆ ದಾಳಿ ಮಾಡುತ್ತಾರೆ. ಈ ವೇಳೆ ಶಿವು (ರಘು ರಾಜ ನಂದ) ಅವರಿಗೆ ನೆರವಾಗಿ ಕಾಪಾಡುತ್ತಾನೆ.ಮುಂದೆ ರಾಜಕೀಯ ಜೀವನಕ್ಕೆ ತೊಂದರೆ ಆಗಿ ಬಿಡುತ್ತದೆ ಎನ್ನುವುದನ್ನು ಅರಿತ ರಾಜಕೀಯ ನಾಯಕ ತನ್ಬ ಮಸಲತ್ತು ಮಾಡುತ್ತಾನೆ. ನಗರದಿಂದ ಹಳ್ಳಿಗೆ ಬರುವ
ಹನುಮಂತು ಮಗಳು ಕಾವ್ಯ (ಪ್ರಕೃತಿ ಪ್ರಸಾದ್) ಊರಿನ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾಳೆ.

ದೇವಿಯ ಉತ್ಸವ ಒಂದೆಡೆ, ಸರಣಿ ಸಾವು.ಪೆÇಲೀಸರ ತನಿಖೆಯ ಯಾವ ಹಂತಕ್ಕೆ ಬರುತ್ತದೆ.ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುದು ಚಿತ್ರದ ಕಥನ ಕುತೂಹಲ, ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ಯುವ ನಟ ರಘುರಾಜನಂದ ಆಕ್ಷನ್ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಒಂದಷ್ಟು ನಟನಾ ತರಬೇತಿ ಪಡೆದುಕೊಂಡರೆ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಅತ್ಯುತ್ತಮ ನಟ ಸಿಕ್ಕಂತಾಗಲಿದೆ, ಅದನ್ನು ರಘು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ,

ನಾಯಕಿಯಾಗಿ ಪ್ರಕೃತಿ ಪ್ರಸಾದ್ ಪಾತ್ರಕ್ಕೆ ಜೀವ ಒದಗಿಸಿದ್ದಾರೆ, ಹಿರಿಯ ಕಲಾವಿದ ಶರತ್ ಲೋಹಿತಾಶ್ವ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಸಂಗೀತ ಅನಿಲ್, ಚಿಲ್ಲರ್ ಮಂಜು, ಈಟಿವಿ ಶ್ರೀಧರ್, ನಟ ಬಾಲ ರಾಜವಾಡಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin