Actress Megha Shetty shines in the film “Operation London Cafe”

“ಆಪರೇಷನ್ ಲಂಡನ್ ಕೆಫೆ” ಚಿತ್ರದಲ್ಲಿ ಮಿಂಚಿದ ನಟಿ ಮೇಘಾ ಶೆಟ್ಟಿ - CineNewsKannada.com

“ಆಪರೇಷನ್ ಲಂಡನ್ ಕೆಫೆ” ಚಿತ್ರದಲ್ಲಿ ಮಿಂಚಿದ ನಟಿ ಮೇಘಾ ಶೆಟ್ಟಿ

ಲಂಗದಾವಣಿ ತೊಟ್ಟ ಅಪ್ಪಟ ಬಜಾರಿ ಬಾಯಿ ಬಡಕಿ ಹಳ್ಳಿ ಹುಡುಗಿಯಂತೆ ಕಾಣಿಸುವ ನಟಿ ಮೇಘಾ ಶೆಟ್ಟಿ “ಆಪರೇಷನ್ ಲಂಡನ್ ಕೆಫೆ” ಚಿತ್ರದಲ್ಲಿ ಮಿಂಚಿದ್ದು’ರೈ ರೈ ರೈ ಈ ಪ್ರೀತಿ ಶ್ಯಾನೆ ಮಜವಾಗುತೈತಿ, ಮನಸಾಗ ಎಲಿಯಡಿಕಿ ಆಗಿಯಾಕತೈತಿ’ ಎನ್ನುತ್ತಾ ತನ್ನ ಅಭಿಮಾನಿಗಳಿಗೆ ಮತ್ತು ಸಿನಿಪ್ರಿಯರಿಗೆ ರಸಗವಳ ಬಡಿಸಿದ್ದಾರೆ.

ನವೆಂಬರ್ 28 ಕ್ಕೆ ಕನ್ನಡ ಮರಾಠಿ ಮತ್ತು ಹಿಂದಿ ಮೂರೂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ನಕ್ಸಲೇಟ್ ಗೆಟಪ್ಪಿನಲ್ಲಿ ಮೀಸೆ ತಿರುವುತ್ತಾ ಖದರ್ರಾಗಿ ಕಾಣುವ ನಾಯಕ ಕವೀಶ್ ಶೆಟ್ಟಿ ಸಿದ್ಧಾಂತ ಬದ್ಧ ಬಿಗುಮಾನವನ್ನು ಅಣಕಿಸಿ, ಗೋಳು ಹುಯ್ದುಕೊಳ್ಳುತ್ತಾ ಪ್ರಕೃತಿ ಮತ್ತು ಮಾನವ ಸಹಜ ಪ್ರೀತಿ ಸಂಬಂಧಗಳ ಬಗ್ಗೆ ಸುಂದರವಾಗಿ ಕಾಣುತ್ತಿದೆ.

ನಟಿ ಮೇಘಾ ಶೆಟ್ಟಿ ಇದೇ ಮೊದಲ ಬಾರಿಗೆ ಚಿತ್ರದ ಮೂಲಕ ಮರಾಠಿ ಚಿತ್ರರಂಗಕ್ಕೂ ಲಗ್ಗೆಯಿಟ್ಟಿದ್ದಾರೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣಗೊಂಡಿರುವ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಾಹಕ ಆರ್. ಡಿ. ನಾಗಾರ್ಜುನ್ ಹಾಡಿಗೆ ತಕ್ಕ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಸಂಗೀತ ನಿರ್ದೇಶಕ ಪ್ರಾಂಶು ಝಾ ಜಿಲ್ಕಾ ಚಿತ್ರದ ನಂತರ ಎರಡನೆಯ ಬಾರಿ ತಮ್ಮ ವಿಶೇಷ ವಿಶಿಷ್ಟ ಸಂಗೀತ ಸಂಯೋಜನೆಯ ಮೂಲಕ ಮತ್ತೊಮ್ಮೆ ಕನ್ನಡಕ್ಕೂ ಜೈ ಎಲ್ಲದಕ್ಕೂ ಸೈ ಎನ್ನಿಸಿಕೊಂಡಿದ್ದಾರೆ.ಮಾದಕ ಮತ್ತು ಮೋಹಕ ಧ್ವನಿಯಿಂದ ಈಗಾಗಲೇ ಕನ್ನಡಿಗರ ಮನ ಸೂರೆಗೊಳಿಸಿದ ಗಾಯಕಿ ಐಶ್ವರ್ಯ ರಂಗರಾಜನ್ ಮೂಲಕ ಮತ್ತೊಂದು ಹಿಟ್ ಹಾಡನ್ನು ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ

ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin