“ಕಂಗ್ರಾಜುಲೇಷನ್ ಬ್ರದರ್” ಚಿತ್ರಕ್ಕೆ ಬೆಂಬಲವಾಗಿ ನಿಂತ ನಟ ಡಾರ್ಲಿಂಗ್ ಕೃಷ್ಣ
ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ “ಕಂಗ್ರಾಜುಲೇಷನ್ ಬ್ರದರ್” ಈಗ ಜನಪ್ರಿಯ ಡೈಲಾಗ್ ಸಿನಿಮಾ ಶೀರ್ಷಿಕೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಚಿತ್ರ ಇದೇ ನವಂಬರ್ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ನಟ ಡಾರ್ಲಿಂಗ್ ಕೃಷ್ಣ ಬೆಂಬಲ ನೀಡಿದ್ದಾರೆ

ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನದ, ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಹಾಗೂ ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಹಾಗೂ ಸಂಜನ್ ದಾಸ್ ನಾಯಕಿಯರಾಗಿ ನಟಿಸಿರುವ “ಕಂಗ್ರಾಜುಲೇಷನ್ ಬ್ರದರ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಹರೀಶ್ ರೆಡ್ಡಿ ಸಹ ನಿರ್ಮಾಣವಿದೆ
ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ ಚಿತ್ರದ ಶೀರ್ಷಿಕೆಯೇ ಬಹಳ ಇಷ್ಟವಾಯಿತು. ಟ್ರೇಲರ್ ಇನ್ನೂ ಇಷ್ಟವಾಯಿತು. ಸಿನಿಮಾ ಕೂಡ ಚೆನ್ನಾಗಿರುವ ಭರವಸೆ ಇದೆ ಥಿಯೇಟರ್ ನಲ್ಲೇ ಸಿನಿಮಾ ನೋಡುತ್ತೇನೆ. ಹೊಸತಂಡಕ್ಕೆ ಹಾಗೂ ಆ ಹೊಸತಂಡದ ಮೇಲೆ ಭರವಸೆಯಿಟ್ಟು ಬಂಡವಾಳ ಹೂಡಿರುವ ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ಮಾತನಾಡಿ ಒಂದು ವರ್ಷದ ಹಿಂದೆ ಈ ಚಿತ್ರ ಆರಂಭವಾಗಿದ್ದು. ಈಗ ಇದೇ 21 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ಕಲ್ಲೂರ್ ಸಿಕ್ಕರು. ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ಹರೀಶ್ ರೆಡ್ಡಿ ಜೊತೆಯಾದರು ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಉತ್ಸಾಹಿ ತಂಡದ ಹೊಸಪ್ರಯತ್ನ ಗೆಲ್ಲುವ ಎಲ್ಲಾ ಲಕ್ಷಣಗಳು ಇದೆ. ಈಗಾಗಲೇ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಿರುವವರು ಮೆಚ್ಚಿಕೊಂಡಿದ್ದಾರೆ. ನನ್ನ ಬಳಿ 45 ಕಥೆಗಳಿದೆ. ಈ ಚಿತ್ರ ಗೆದ್ದರೆ, ಅಷ್ಟು ಚಿತ್ರಗಳನ್ನು ಈ ತಂಡದ ಜೊತೆಗೆ ಮಾಡುತ್ತೇನೆ ಎಂದರು
ನಿರ್ದೇಶಕ ಪ್ರತಾಪ್ ಗಂಧರ್ವ ಮಾತನಾಡಿ ಹೇಳುವುದು ಏನು ಇಲ್ಲ. ಒಂದೊಳ್ಳೆ ಚಿತ್ರ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಪ್ರೋತ್ಸಾಹ ನಮ್ಮ ಚಿತ್ರದ ಮೇಲಿರಲಿ ಎಂದು ಹೇಳಿದರು.

ನಾಯಕ ರಕ್ಷಿತ್ ನಾಗ್ ಮಾತನಾಡಿ ನಮ್ಮ ತಂಡ ಪ್ರಚಾರದ ಸಲುವಾಗಿ ಇಡೀ ಕರ್ನಾಟಕ ಸುತ್ತಿದ್ದೇವೆ. ಹೋದ ಕಡೆ ಎಲ್ಲಾ ನಮ್ಮ ಚಿತ್ರಕ್ಕೆ ಸಿಕ್ಕ ಪ್ರಶಂಸೆಗೆ ಮನ ತುಂಬಿ ಬಂದಿದೆ. ನವೆಂಬರ್ 21 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದರು
ನಾಯಕಿಯರಾದ ಸಂಜನದಾಸ್, ಅನೂಷ, ಕಲಾವಿದ ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ ಮುಂತಾದವರು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕ ಹರೀಶ್ ರೆಡ್ಡಿ ಮಾಹಿತಿ ಹಂಚಿಕೊಂಡರು

