'Rudhirvan' gets houseful screening at Indian International Film Festival premiere

ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸದ ಪ್ರೀಮಿಯರ್ ನಲ್ಲಿ ‘ರುಧಿರ್ವನ’ ಸಿನಿಮಾ ಹೌಸ್ ಫುಲ್ - CineNewsKannada.com

ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸದ ಪ್ರೀಮಿಯರ್ ನಲ್ಲಿ ‘ರುಧಿರ್ವನ’ ಸಿನಿಮಾ ಹೌಸ್ ಫುಲ್

ಕನ್ನಡಿಗ ಅಗ್ನಿ ನಿರ್ದೇಶನ ಚೊಚ್ಚಲ ಸಿನಿಮಾ ರುಧಿರ್ವನ ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸದ ಗಾಲಾ ಪ್ರೀಮಿಯರ್ ಗೆ ಆಯ್ಕೆಯಾಗಿದೆ. ನಾಳೆ ಈ ಚಿತ್ರದ ಪ್ರದರ್ಶನವಿದ್ದು, ಈಗಾಗಲೇ ಹೌಸ್ ಫುಲ್ ಆಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ರುಧಿರ್ವನ ಸಿನಿಮಾದಲ್ಲಿ ಪವನಾ ಗೌಡ, ಭೀಮ ಪೊಲೀಸ್ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಶಠಮರ್ಷಣ, ಬಲರಾಜವಾಡಿ, ಕೃಷ್ಣ ಹೆಬ್ಬಾಲೆ, ಮೇದಿನಿ ಕೆಳಮನೆ, ಅವಿನಾಶ್ ರೈ, ಅರ್ಜುನ್ ಕಜೆ, ಅಪೂರ್ವ ತಾರಾಬಳಗದಲ್ಲಿದ್ದಾರೆ. ಇದೊಂದು ಹಾರರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವ ಸಿನಿಮಾ ಅನ್ನೋದು ಚಿತ್ರತಂಡದ ಅಭಿಪ್ರಾಯ.

ರುಧಿರ್ವನ ಅಂದ್ರೆ ರಕ್ತಸಿಕ್ತವಾದ ಕಾಡು ಎಂದರ್ಥ. ಸಂದೀಪ್ ವೆಲ್ಲೂರಿ ಛಾಯಾಗ್ರಹಣ, ರೋಣದ ಬಕ್ಕೇಶ್ ಸಂಗೀತ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಅಂದಹಾಗೇ ಕ್ರೌಡ್ ಫಂಡೆಂಡ್ ಸಿನಿಮಾ. ಅಗ್ನಿ,ಸ್ನೇಹಿತರು ಹಾಗೂ ಅವರ ಅಗ್ನಿ ಅವರ ಯೂಟ್ಯೂಬ್ ಚಂದಾದಾರರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪಾಯಿಂಟ್ ಆಫ್ ವೀವ್ ಪಿಕ್ಚರ್ ಹೌಸ್ ಬ್ಯಾನರ್ ನಡಿ ರುಧಿರ್ವನ ಸಿನಿಮಾ ಮೂಡಿಬರಲಿದೆ. ಇನ್ನು, ಸ್ಯಾಂಗ್ವಿನ್ ಹೋಲ್ಮ್ ಎಂಟರ್ಟೈನ್ಮೆಂಟ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ಕೊಡಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin