“ದಿ ಡೆವಿಲ್ ” ಚಿತ್ರಜೀವನದ ಮೈಲುಗಲ್ಲಿನ ಚಿತ್ರ- ನಟಿ ರಚನಾ ರೈ
“ದಿ ಡೆವಿಲ್ ” ಚಿತ್ರಕ್ಕಾಗಿ ಎರಡು ಚಿತ್ರಗಳನ್ನು ಬಿಟ್ಟಿದ್ದೇನೆ. ಹಾಗಂತ ಆ ಚಿತ್ರ ತಂಡ ಚೆನ್ನಾಗಿರಲಿಲ್ಲ ಅಂತ ಅಲ್ಲ, “ದಿ ಡೆವಿಲ್” ಚಿತ್ರರಂಗದದ ಕೆರಿಯರ್ನಲ್ಲಿ ಮೈಲಿಗಲ್ಲಾಗುವ ಚಿತ್ರವಾಗಲಿದೆ..”

ಹೀಗಂತ ಆತ್ಮವಿಶ್ವಾಸದಿಂದ ಹೇಳಿದರು ನಟಿ ರಚನಾ ರೈ… ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರ ಡಿಸೆಂಬರ್ 11ಕ್ಕೆ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರಕ್ಕಾಗಿ ಆಡಿಷನ್ ಕೊಟ್ಟು ಆಯ್ಕೆಯಾಗಿದ್ದೇನೆ. ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ. ಕನ್ನಡದ ನಟಿಯರಿಗೆ ಚಿತ್ರದಲ್ಲಿ ಅವಕಾಶ ನೀಡಬೇಕು ಎಂದು ದರ್ಶನ್ ಸಾರ್ ಹೇಳುತ್ತಿರುತ್ತಾರೆ. ಹೀಗಾಗಿ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಇನ್ನು ಮುಂದೆ ಯಾವುದೇ ಚಿತ್ರದಲ್ಲಿ ನಟಿಸಿದರೂ “ದಿ ಡೆವಿಲ್” ಎಂದೂ ಮರೆಯುವುದಿಲ್ಲ. ಚಿತ್ರದ ಎಲ್ಲಾ ಶ್ರೇಯವನ್ನು ನಟ ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ಅವರಿಗೆ ಅರ್ಪಿಸುತ್ತೇನೆ ಎಂದರು

ನಿರ್ದೇಶಕ ಪ್ರಕಾಶ್ ವೀರ್ ಮಾತನಾಡಿ ಮೊದಲ ಆಡಿಷನ್ ಮೂಲಕ ನಟಿ ರಚನಾ ರೈ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಯಿತು. ಮೊದಲು ಒಮ್ಮೆ ಆಡಿಷನ್ ಕೊಟ್ಟಿದ್ದರು. ನಂತರ ಎರಡನೇ ಬಾರಿ ಕರೆಸಿ ಆಡಿಷನ್ ನಂತರ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ ಎಂದು ಹೇಳಿದರು
ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿ ಮೊದಲು ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಾಗ ಇಲ್ಲ ಎಂದು ಹೇಳಿದ್ದೆ. ಕಳೆದ ವರ್ಷ ಮತ್ತೊಮ್ಮೆ ಸಂಪರ್ಕಿಸಿದಾಗ ಇಲ್ಲ ಎನ್ನಲು ಆಗಲಿಲ್ಲ. ನವಗ್ರಹ ಚಿತ್ರ ಆಗಿ 18 ವರ್ಷಗಳ ಬಳಿಕ ದರ್ಶನ್ ಜೊತೆ ನಟಿಸಿದ್ದೇನೆ. ಚಿಕ್ಕ ಪಾತ್ರ ಆದರೆ ಮಹತ್ವದ ಪಾತ್ರ ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದರು.

ಹಿರಿಯ ನಟ ಶೋಭರಾಜ್ ಮಾತನಾಡಿ “ಜಗ್ಗುದಾದ” ಚಿತ್ರದಲ್ಲಿ ಕಾಣಿಸಿಕೊಂಡಿದ್ದೆ. ಆ ನಂತರ ಸಿನಿಮಾದಲ್ಲಿ ನಟಿಸುವ ಅವಕಾದ ಸಿಕ್ಕಿರಲಿಲ್ಲ. ಒಂದು ಶಾಟ್ನಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರೂ ನಟಿಸುತ್ತಿದ್ದೆ. ಚಿಕ್ಕ ಪಾತ್ರವಾದರೂ ಚೊಕ್ಕ ಪಾತ್ರ,ಹೆಚ್ಚಾಗಿ ದರ್ಶನ್ ಮತ್ತು ಅಚ್ಯುತ್ ಕಾಂಬಿನೇಷನ್ನಲ್ಲಿ ನನ್ನ ಪಾತ್ರವಿದೆ ಎಂದು ಹೇಳಿದರು

ಹಿರಿಯ ನಟ ಅಚ್ಯುತ್ ಕುಮಾರ್ ಮಾತನಾಡಿ ದರ್ಶನ್ ಜೊತೆ ನಾಲ್ಕನೇ ಸಿನಿಮಾ, ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಡಿಸೆಂಬರ್ 11 ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು ಎಲ್ಲರೂ ನೋಡಿ ಎಂದರು
ಹಾಸ್ಯ ನಟ ಹುಲಿ ಕಾರ್ತಿಕ್ ಮಾತನಾಡಿ ಕನ್ನಡಕ್ಕಾಗಿ ದರ್ಶನ್ ಇದ್ದಾರೆ.ಅವರ ಜೊತೆ ಸಿನಿಮಾದಲ್ಲಿ ನಟಿಸಿದ್ದರೂ ಅವರೊಂದಿಗೆ ಕುಳಿತು ಸಿನಿಮಾ ನೋಡುವ ಭಾಗ್ಯ ಇಲ್ಲ. ದರ್ಶನ್ ಸಾರ್ ಹೊರಗೆ ಬರ್ತಾರೆ ಎನ್ನುವ ವಿಶ್ವಾಸ ನಂಬಿಕೆ ಇದೆ ಎಂದು ವೇದಿಕೆ ಮೇಲೆ ಕಣ್ಣೀರಿಟ್ಟರು


