Apart from cinema, writing is his hobby: Actor, director - Kamal Raj

ಸಿನಿಮಾ ಹೊರತಾಗಿ ಬರೆಯುವ ಹವ್ಯಾಸ: ನಟ,ನಿರ್ದೇಶಕ- ಕಮಲ್ ರಾಜ್ - CineNewsKannada.com

ಸಿನಿಮಾ ಹೊರತಾಗಿ ಬರೆಯುವ ಹವ್ಯಾಸ: ನಟ,ನಿರ್ದೇಶಕ- ಕಮಲ್ ರಾಜ್

ಬಣ್ಣದ ಬದುಕೇ ಹಾಗೆ ಒಮ್ಮೆ ಅದರಲ್ಲಿ ಗುರುತಿಸಿಕೊಂಡರೆ ಅದರಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಮತ್ತು ತುಡಿತ ಸದಾ ಇರತ್ತದೆ. ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಲ ವಿತರಕ, ಸಾಹಿತ್ಯ ಸಂಭಾಷಣೆ ಬರೆಯುವುದರಲ್ಲಿ ಸಿದ್ದ ಹಸ್ತರಾಗಿರುವ ಕಮಲ್ ರಾಜ್ ಇದೀಗ ಏಕ ಕಾಲಕ್ಕೆ ಐದು ಕೃತಿಗಳನ್ನು ಹೊರ ತಂದಿದ್ಧಾರೆ.

ನೈಸರ್ಗಿಕ ವ್ಯವಹಾರ, ಮಾರುಕಟ್ಟೆ ತಂತ್ರ, ತಂದೆ ಮತ್ತು ಮಕ್ಕಳ ನಡುವಿನ ಬಾಂಧವ್ಯ, ಐತಿಹಾಸಿಕ ವ್ಯಕ್ತಿಗಳ ಸಾಧನೆಗಳು ಮತ್ತು ಭಾವ ಲಹರಿ ಗೀತೆಗಳ ಗುಚ್ಛದ ಕುರಿತು ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ದೇವರ ಯುನಿವರ್ಸಲ್ ಬಿಸಿನೆಸ್ ಸ್ಕೂಲ್, ಮಾರ್ಕೆಟಿಂಗ್ ಐಕಾನ್ಸ್ ಆಫ್ ಇಂಡಿಯಾ ಎಸ್‍ಆರ್‍ಕೆ ಅಂಡ್ ಮೋದಿ, ಟು ಮೈ ಕಿಡ್ಸ್ ಇಮಾದ್ ಅಂಡ್ ಆಲಿಯಾ, ಟಿಪ್ಪು ಸುಲ್ತಾನ್ ಮತ್ತು 1000 ಶಾಯರಿಯಾನ್ ಜಸ್ಬಾತ್ ದಿಲ್ ಸೇ ಕೃತಿ ಹೊರತಂದಿದ್ಧಾರೆ
ಬಹಳ ದಿನಗಳ ನಂತರ ನಟ, ನಿರ್ದೇಶಕ ಹುಚ್ಚ ವೆಂಕಟ್ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಜೊತೆಗೆ ನಟ ವಿರಾಟ್, ನಿರ್ಮಾಪಕ ವಿ. ಲಕ್ಷ್ಮೀಕಾಂತ್, ನಟರಾದ ರಕ್ಷಕ್ ಮತ್ತಿತರರು ಭಾಗಿಯಾಗಿದ್ದರು

ಈ ವೇಳೆ ಮಾತಿಗಿಳಿದ ಕಮಲ್ ರಾಜ್. ಸಿನಿಮಾದ ಹೊರತಾಗಿರುವ ಮತ್ತು ಎಲ್ಲರೂ ತಿಳಿದುಕೊಳ್ಳಲೇ ಬೇಕಾಗಿರುವ ಒಂದಷ್ಟು ವಿಷಯಗಳನ್ನು ಕೃತಿಗಳ ಮೂಲಕ ಜನರ ಮುಂದಿಡುತ್ತಿದ್ದೇನೆ. ಐದೂ ಕೃತಿಗಳಲ್ಲಿ ಪ್ರಕೃತಿ ತನ್ನ ದೈನಂದಿನ ಚಟುವಟಿಕೆಗಳು ಮತ್ತು ವ್ಯವಹಾರ. ದೇವರ ಯುನಿವರ್ಸಲ್ ಬಿಸಿನೆಸ್ ಸ್ಕೂಲ್ ಕೃತಿಯಲ್ಲಿ ಹೇಳಿದ್ದೇನೆ ಎಂದರು.

ಪ್ರಕಾಶಕ ಲಕ್ಷ್ಮಿ ಕಾಂತ್ ಮಾತನಾಡಿ ಎಲ್ಲಾ ಕೃತಿಗಳು ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ಪುಸ್ತಕ ಮಳಿಗೆಗಳು ಮತ್ತು ಆನ್‍ಲೈನ್‍ನಲ್ಲೂ ಲಭ್ಯವಿದೆ ಎಂದು ತಿಳಿಸಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin