Show reel of the film “Ram Rahim” directed by Nam Rishi released

ನಮ್ ರಿಷಿ ನಿರ್ದೇಶನದ “ರಾಮ್ ರಹೀಮ್” ಚಿತ್ರದ ಶೋ ರೀಲ್ ಬಿಡುಗಡೆ - CineNewsKannada.com

ನಮ್ ರಿಷಿ ನಿರ್ದೇಶನದ “ರಾಮ್ ರಹೀಮ್” ಚಿತ್ರದ ಶೋ ರೀಲ್ ಬಿಡುಗಡೆ

“ರಾಮ್ ರಹೀಮ್ ” ಚಿತ್ರವನ್ನು ಫೆಬ್ರವರಿಯಲ್ಲಿ ತೆರೆಗೆ ತರಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಆದರೂ ಯಾರೂ ಸಿನಿಮಾ ನೋಡಬೇಡಿ. ಇದು ಯಾವುದೇ ಗಿಮಿಕ್ ಇಲ್ಲ.. ಚಮಕ್ ಇಲ್ಲ ಸಿನಿಮಾ ನೋಡಬೇಡಿ..”

ಹೀಗಂತ ತಮ್ಮ ಚಿತ್ರದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡರು ನಿರ್ದೇಶಕ, ನಿರ್ಮಾಪಕ ನಮ್ ಋಷಿ.

ಮಾತು ಮುಂದುವರಿಸಿ ಸಿನಿಮಾ ವಿತರಣೆ ಮಾಡಿ ಅಂತ ಯಾರ ಬಳಿ ಬೆಗ್ ಮಾಡಲ್ಲ. ಹೊಸಬರ ಚಿತ್ರವನ್ನು ಯಾವ ವಿತರಕನೂ ಸಿನಿಮಾ ವಿತರಣೆ ಮಾಡಲ್ಲ ಅಂತ ಗೊತ್ತು.. ಹೊಸಬರು ದುಡ್ಡುಕೊಟ್ಟರೆ ಸಿನಿಮಾ ವಿತರಣೆ ಮಾಡ್ತಾರೆ.. ಸತ್ಯ ಗೊತ್ತಿರುವುದರಿಂದ ಸಿನಿಮಾನಾ 60 ಲಕ್ಷ ಖರ್ಚು ಮಾಡಿ ಸಿನಿಮಾ ವಿತರಣೆ ಮಾಡುತ್ತಿದ್ದೇನೆ.. ಆದರೂ ಯಾರೂ ಸಿನಿಮಾ ನೋಡಬೇಡಿ ಎಂದು ಚಿತ್ರದ ಶೋ ರೀಲ್‍ನಲ್ಲಿ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಚಿತ್ರದ ಟೀಸರ್ , ಟ್ರೈಲರ್ ಬಿಡುಗಡೆ ಮಾಡುವುದು ಸಾಮಾನ್ಯ ಆದರೆ 11 ನಿಮಿಷ 22 ಸೆಕೆಂಡ್ ಅವಧಿಯ ಶೋ ರೀಲ್ ಬಿಡುಗಡೆ ಮಾಡಿದ್ದು ಅದರಲ್ಲಿ ಹೇಳಿದ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಪುನರುಚ್ಚರಿಸಿದರು.ಜೊತೆಗೆ ಶೋ ರೀಲ್‍ನಲ್ಲಿ ಬಳಸಿರುವ ಭಾಷೆಯ ಬಗ್ಗೆ ತಮ್ಮದೇ ಆದ ಸ್ಪಷ್ಟೀಕರಣ ನೀಡಿದರು

ಚಿತ್ರೀಕರಣಕ್ಕೆ ಕುಡಿದುಕೊಂಡು ಬಂದ ಬಗ್ಗೆ ನಟ, ನಟಿಯರು ಮಾಡಿರುವ ಆರೋಪವನ್ನು ಪುಷ್ಠೀಕರಿಸಿದ ನಮ್ ರಿಷಿ, ನಾನು ಕುಡಿಯುವುದು ಎಲ್ಲರಿಗೂ ಗೊತ್ತಿದೆ, ಈ ಕಾರಣದಿಂದಲೇ ಚಿತ್ರೀಕರಣದ ಸೆಟ್‍ಗೆ ಕುಡಿದು ಹೋಗುತ್ತಿದ್ದೆ. ತೂರಾಡಿಕೊಂಡೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದೆ, ನಾನು ಇರುವುದೇ ಹೀಗೆ ಎಂದರು.

ರಾಮ್ ರಹೀಮ್ ಚಿತ್ರವನ್ನು ಯಾಕೆ ನೋಡಬೇಡಿ ಎಂದು ಹೇಳಿದ್ದೇನೆ ಎನ್ನವು ಸಂಗತಿಯನ್ನು ಚಿತ್ರ ಬಿಡುಗಡೆಯಾದ ದಿನ ಮಾಹಿತಿ ನೀಡುತ್ತೇನೆ, ಆಗ ಸಿನಿಮಾ ನೋಡಿದ ಮಂದಿಗೆ ನಾನು ಯಾಕೆ ಹೀಗೆ ಹೇಳಿದೆ ಎನ್ನುವುದು ಗೊತ್ತಾಗಲಿದೆ ಎಂದು ಮಾಹಿತಿ ಹಂಚಿಕೊಂಡರು

ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹೊಂದಲಾಗಿದೆ. 2 ವರ್ಷದ ಹಿಂದೆ ಸಿನಿಮಾ ಆರಂಭಿಸಲಾಗಿತ್ತು ಕಾರಣಾಂತರಗಳಿಂದ ತಡ ಆಯ್ತು. ನೃತ್ಯ, ಸಾಹಸ ನಿರ್ದೇಶನ ನಾನೇ ಮಾಡಿದ್ದೇನೆ. ಅದಕ್ಕೂ ಕಾರಣವಿದೆ.ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ರಾಮ್ ರಹೀಮ್ ಎಂದು ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin