ಮನಸಾರೆ ನಕ್ಕು ನಗಿಸುವ ಕಾಮಿಡಿ ಚಿತ್ರ “ಅಮೃತಾಂಜನ್”- ಜ್ಯೋತಿ ರಾವ್ ಮೋಹಿತ್
“ಅಮೃತಾಂಜನ್” ಕಿರುಚಿತ್ರ ಈಗ ಸಿನಿಮಾವಾಗಿ ತೆರೆಯ ಮೇಲೆ ಬರಲು ಸಿದ್ದವಾಗುತ್ತಿದೆ. ಚಿತ್ರಕ್ಕೆ ಜ್ಯೋತಿ ರಾವ್ ಮೋಹಿತ್ ಆಕ್ಷನ್ ಕಟ್ ಹೇಳುತ್ತಿದ್ದು ಸಿನಿಮಾದ ಮೂಲಕ ಮನರಂಜನೆಗೆ ಹೆಚ್ಚಿನ ಒತ್ತು ನೀಡಿದ್ದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ

ಈ ಕುರಿತು ಚಿತ್ರದ ನಿರ್ದೇಶಕರಾದ ಜ್ಯೋತಿ ರಾವ್ ಮೋಹಿತ್ ಮಾಹಿತಿ ಹಂಚಿಕೊಂಡಿದ್ದು ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ. ಅಮೃತಾಂಜನ್ ಕಿರುಚಿತ್ರಕ್ಕೂ ಅಮೃತಾಂಜನ್ ಸಿನಿಮಾಗೂ ಬಹಳ ವ್ಯತ್ಯಾಸವಿದೆ. ಎಂದು ಹೇಳಿದ್ದಾರೆ
ಈ ಮೊದಲು ಮೊದಲು ಸೋಡಾಬುಡ್ಡಿ ಸಿನಿಮಾ ಮಾಡಿದ್ದೆ ಸೋತು ಹೋಯ್ತು. ಆಮೇಲೆ ಕೆಲಸ ಇಲ್ಲದೆ ಇದ್ದಾಗ ಕಿರುಚಿತ್ರ ಮಾಡಿದ್ದೆ. ಅದುವೇ ಅಮೃತಾಂಜನ್. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಸಿನಿಮಾಗೆ ಏನೆಲ್ಲಾ ಇರಬೇಕು ಎನ್ನುವುದನ್ನು ಅಡಕ ಮಾಡಿ ಸಿನಿಮಾ ಮಾಡಿದ್ದೇವೆ ಎಂದಿದ್ದಾರೆ

ಅಮೃತಾಂಜನ್ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ. ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇವೆ. ಸಿನಿಮಾ ನೋಡುವಾಗ ಪ್ರತಿ ಸನ್ನಿವೇಶವೂ ಇಷ್ಟವಾಗಲಿದೆ. ಹೊಸ ವಿಷಯವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ.ನಾನು ಕುಡಿಯೋದು ಬಿಟ್ಟರೆ ನೀನು ಮೇಕಪ್ ಹಾಕೋದು ಬಿಡ್ತೀಯಾ. ಈ ಡೈಲಾಗ್ ಒಂದು ಕ್ಯಾರಿ ಮಾಡಿದ್ದೀವಿ. ಬಿಟ್ರೆ ಕಥೆ ಎಳೆ ತುಂಬಾನೇ ಹೊಸದಾಗಿದೆ. ಪ್ರತಿಯೊಬ್ಬ ತಂದೆ – ತಾಯಿನು ಮಕ್ಕಳಿಗೆ ಈ ಥರ ಮಾಡ್ಬೇಕು ಅಂದ್ಕೊಳ್ತಾರೆ ಎಂದಿದ್ದಾರೆ
ಸಿನಿಮಾ ಮಾಎಲು ಹೊರಟಾಗ ಕಿರುಚಿತ್ರ ಅಂದ್ರು, ಮೊಬೈಲ್ ನೋಡೋರು ಚಿತ್ರಮಂದಿರಕ್ಕೆ ಬರಲ್ಲ ಎನ್ನುವ ಆರೋಪದ ನಡುವೆಯೂ ಸಿನಿಮಾ ಮಾಡಿದ್ದೇವೆ. ಫ್ಯಾಮಿಲಿ ಆಡಿಯನ್ಸ್, ಯೂಥ್ಸ್ ಆಗಿರಬಹುದು ಯಾರಿಗೂ ಬೋರ್ ಹೊಡೆಸಲ್ಲ. ಎಲ್ಲರೂ ಮನಸಾರೆ ನಗಲಿದ್ದಾರೆ

ಈ ಸಿನಿಮಾದಲ್ಲಿ ಮಾಂಟೇಜಸ್ ಸಾಂಗ್ಸ್ ಇದೆ. ಶೇಕಡಾ 80ರಷ್ಟು ಕಾಮಿಡಿ ಇದ್ರೆ 10 ರಿಂದ 15 ರಷ್ಟು ಎಮೋಷನ್ ಇದೆ ಎಮೋಷನ್ಸ್ ಅಪ್ಪ ಮಗನ ಬಗ್ಗೆ ದೊಡ್ಡ ಎಮೋಷನ್ಸ್ ಇದೆ. ಕಥೆಗೆ ಏನ್ ಬೇಕೋ ಅದನ್ನು ತೋರಿಸಿದ್ದೇವೆ. ಬೆಂಗಳೂರು, ಮಂಗಳೂರು, ಉಡುಪಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ

