ನಟ ಮನೋಜ್ ಹುಟ್ಟುಹಬ್ಬಕ್ಕೆ “ಧರಣಿ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ
ಯುವ ನಟ ಮನೋಜ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಉಡುಗೊರೆಯಾಗಿ ಮುಂಬರುವ ಚಿತ್ರ “ ಧರಣಿ” ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ

‘ಧರಣಿ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.. ಕೋಳಿ ಹುಂಜ ಹಿಡಿದು.. ಅದೇ ಕೋಳಿ ಹುಂಜಹಾಸನದ ಮೇಲೆ ಮಾಸ್ ಆಗಿ ಪೋಸು ಕೊಟ್ಟಿರೋ ಮನೋಜ್ ಧರಣಿ ಲುಕ್ ಗಮನ ಸೆಳೆದಿದೆ. ಜೊತೆಗೆ ಚಿತ್ರದ ಮೇಲಿನ ಭರವಸೆ ಹೆಚ್ಚಿಸದೆ.
ಈ ವರ್ಷ ಬರುವ ಚಿತ್ರಗಳ ಸಾಲಿನಲ್ಲಿ “ಧರಣಿ” ಕೋಳಿ ಕಾಳಗ ಕುತೂಹಲ ಕೆರಳಿಸಿದೆ. ಮತ್ತು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
sಚಿತ್ರಕ್ಕೆ ಸುಧೀರ್ ಶಾನುಬೋಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎ ಕ್ಯೂ ಪಿಲ್ಮ್ ನಿರ್ಮಾಣ ಮಾಡುತ್ತಿದೆ. ಅರುಣೋದಯ ಅವರ ಕಥೆ ಚಿತ್ರಕ್ಕಿದೆ. ಸತೀಶ್ ಚಂದ್ರಯ್ಯ ಸಂಕಲನ, ಅರುಣ್ ಸುರೇಶ್ ಛಾಯಾಗ್ರಹಣ ಚಿತ್ರಕ್ಕಿದೆ.
ಠಕ್ಕರ್ ಚಿತ್ರದ ಬಳಿಕ ನಟ ಮನೋಜ್ ಹೊಸ ತನದ ಕತೆ ಮತ್ತು ಲುಕ್ನಲ್ಲಿ ಚಿತ್ರರಸಿಕರ ಗಮನ ಸೆಳೆಯಲು ಮುಂದಾಗಿದ್ದಾರೆ. ನಟ ದರ್ಶನ್ ಸಂಬಂಧಿಕರೂ ಆಗಿರುವ ಹಿನ್ನೆಲೆಯಲ್ಲಿ ಚಿತ್ರಕ್ಕೆ ದರ್ಶನ್ ಅಭಿಮಾನಿಗಳ ಬೆಂಬಲೂ ಸಿಗುವ ಸಾಧ್ಯತೆ ಇದೆ.

