Gharga Movie Review: A mysterious, intriguing film Gharga

Gharga Movie Review : ರಹಸ್ಯ, ಕುತೂಹಲ ಕೆರಳಿಸುವ ಚಿತ್ರ ಘಾರ್ಗ - CineNewsKannada.com

Gharga Movie Review : ರಹಸ್ಯ, ಕುತೂಹಲ ಕೆರಳಿಸುವ ಚಿತ್ರ ಘಾರ್ಗ

ಚಿತ್ರ: ಘಾರ್ಗ
ನಿರ್ದೇಶನ : ಎಂ ಶಶಿಧರ್
ತಾರಾಗಣ; ಅರುಣ್ ರಾಮ್ ಪ್ರಸಾದ್, ಸಾಯಿ ಕುಮಾರ್, ಅರುಣ್ ಸಾಗರ್, ರೆಹಾನ, ಸಂಪತ್ ಕುಮಾರ್, ಮಿತ್ರಾ, ಪ್ರಕಾಶ್ ತುಮ್ಮಿನಾಡು, ರಾಹುಲ್ ದೇವ್, ದೇವ್‍ಗಿಲ್ ಮತ್ತಿತರರು
ರೇಟಿಂಗ್ : * 3.5/ 5

” ಇಷ್ಟು ದಿನ ನೀನು ಆಟ ಆಡ್ತಾ ಇದ್ದೆ… ಇನ್ಮುಂದೆ ನನ್ನ ಆಟ ..ಯಾವುದೇ ಮೂಲೆಯಲ್ಲಿದ್ದರೂ ವಿಗ್ರಹ ತಂದು ಪ್ರತಿಷ್ಠಾಪನೆ ಮಾಡ್ತೇನೆ…ಇದು ಪರಮೇಶ್ವರನ ಮೇಲಾಣೆ..”

ಶಿವನದೊಡ್ಡ ಮೂರ್ತಿಯ ಎದುರು ಕುಳಿತ ಗಜಾನನ ಐತಾಳ್ ಪ್ರತೀಜ್ಞೆ ಮಾಡ್ತಾರೆ..ಅಷ್ಟಕ್ಕೂ ಆತ ಪ್ರತೀಜ್ಞೆ ಮಾಡಲು ಕಾರಣ ಏನು..ಅವರ ಜೊತೆ ಆಟ ಆಡಿದವರು ಯಾರು..

ಇಂತದೊಂದು ಕುತೂಹಲವನ್ನು ಮುಂದಿಟ್ಟುಕೊಂಡು ಎಂ. ಶಶಿಧರ್ ” ಘಾರ್ಗ”. ಚಿತ್ರದ ಮೂಲಕ ಕುತೂಹಲ , ಘಾರ್ಗದ ರಹಸ್ಯ, ವಿಗ್ರಹ ಕದಿಯಲು ಗ್ಯಾಂಗ್ ತಂತ್ರ, ಪ್ರತಿತಂತ್ರ, ದಟ್ಟ ಕಾನನ ಮದ್ಯೆ ನಡೆಯುವ ಕುತೂಹಲ ಭರಿತ ಕಥೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಚಿತ್ರದ ಮೂಲಕ ಹಿರಿಯ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಪುತ್ರ ಅರುಣ್ ರಾಮ್ ಪ್ರಸಾದ್ ಚಿತ್ರರಂಗಕ್ಕೆ ಪರಿಚಯವಾಗಿದ್ದಾರೆ. ಇಡೀ ಚಿತ್ರದಲ್ಲಿ ಅಬ್ಬರಿಸಿರುವುದು ಜೊತೆಗೆ ಗಮನ ಸೆಳದಿರುವುದು ಹಿರಿಯ ಕಲಾವಿದ ಸಾಯಿ ಕುಮಾರ್ ಮತ್ತು ಅರುಣ್ ಸಾಗರ್ ಜುಗಲ್ ಬಂಧಿ. ಚಿತ್ರಕ್ಕೆ ಅರುಣ್ ರಾಮ್ ಪ್ರಸಾದ್ ನಾಯಕನಾಗಿದ್ದರೂ ಚಿತ್ರದ ನಿಜವಾದ ನಾಯಕ ಸಾಯಿ ಕುಮಾರ್.

ಭೂಪಟದಲ್ಲಿಯೇ ಇಲ್ಲದ ಊರು ಘಾರ್ಗಗೆ ಹೊರಡುವ ರೈಟರ್ ವಿಕ್ರಮ ಅಡಿಗ ( ಅರುಣ್ ರಾಮ್ ಪ್ರಸಾದ್) ಗೆ ಡ್ರೈವರ್ ಪುಂಡಲೀಕ ( ಅರುಣ್ ಸಾಗರ್ ) ಜೊತೆಯಾಗ್ತಾರೆ. ಅಷ್ಟಕ್ಕೂ ಆ ಊರ ಹೆಸರು ಕೇಳಿದರೆ ಬೆಚ್ಚಿ ಬೀಳುವ ಮಂದಿಯೇ ಹೆಚ್ಚು. ಇದ್ದಕ್ಕಿದ್ದಂತೆ ಸಾವನ್ನಪ್ಪುವ ಮಹಾಬಲ ಐತಾಳರ ಬಗ್ಗೆ ಮಾಹಿತಿ ಗೊತ್ತಿರುವುದು ಅವರ ಪುತ್ರ ಗಜಾನನ ಐತಾಳ್ ( ಸಾಯಿ ಕುಮಾರ್) ಗೆ ಮಾತ್ರ.

ಒಂಟಿ ಮನೆ ಸುತ್ತ ಮುತ್ತ ನಡೆಯುವ ಘಟನೆ, ರೈಟರ್ ಹೆಸರಲ್ಲಿ ಮುಖವಾಡ ಹಾಕಿಕೊಂಡ ಬಂದ ವಿಕ್ರಮ ಅಡಿಗನ ನಿಜವಾದ ಹೆಸರು ಆರ್ಯನ್ ಎನ್ನುವ ಸತ್ಯ ಬಯಲಾದಾಗ ಮುಂದೇನಾಗುತ್ತದೆ. ಅಷ್ಟಕ್ಕೂ ಆತ ಹೆಸರು ಬದಲಾಯಿಸಿಕೊಂಡು ಬರಲು ಅಸಲಿ ಕಾರಣ ಏನು..ಆತ ಯಾರು..ಡ್ರೈವರ್ ಯಾಕೆ ತಿರುಗಿ ಬೀಳ್ತಾನೆ..ಅಘೋರಿಗಳು ಕಾಯುತ್ತಿರುವುದಾದರೂ ಏನು ಎನ್ನುವ ಕುತೂಹಲ ಚಿತ್ರದುದ್ದಕ್ಕೂ ಕಾಡುತ್ತದೆ.

ಇದಕ್ಕೆ ಉತ್ತರ ಕಂಡು ಕೊಳ್ಳಬೇಕಾದರೆ ಘಾರ್ಗ ಚಿತ್ರ ನೋಡಬೇಕು. ಸಸ್ಪೆನ್ಸ್, ಥ್ರಿಲ್ಲರ್, ಕುತೂಹಲ, ಅಪರಾದ ಹೀಗೆ ಹಲವು ವಿಷಯಗಳನ್ನು ಕ್ರೂಡೀಕರಿಸಿ ನಿರ್ದೇಶಕ ಎಂ ಶಶಿಧರ್ ಚಿತ್ರವನ್ನು ಪ್ರೇಪಕ್ಷಕರ ಮುಂದಿಟ್ಟಿದ್ದಾರೆ. ಜೊತೆಗೆ ಸಿನಿಮಾ ಮುಂದುವರಿಯುವುದು ಎನ್ನುವ ಕುತೂಹಲ ಮೂಡಿಸಿದ್ದಾರೆ.

ಯುವ ನಟ ಅರುಣ್ ರಾಮ್ ಪ್ರಸಾದ್ ಮೊದಲರ್ದಕ್ಕಿಂತೆ ದ್ವಿತೀಯಾರ್ಧದಲ್ಲಿ ಗಮನ ಸೆಳೆಯುತ್ತಾರೆ.ಇನ್ನೊಂದಿಷ್ಡು ತಯಾರಿ ಮಾಡಿಕೊಂಡರೆ ಕನ್ನಡಕ್ಕೆ ಉತ್ರಮ ನಟ ಸಿಗುವುದರಲ್ಲಿ ಅನುಮಾನವಿಲ್ಲ

ಹಿರಿಯ ಕಲಾವಿದರಾದ ಸಾಯಿ ಕುಮರ್, ಅರುಣ್ ಸಾಗರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಉಳಿದಂತೆ ನಾಯಕಿ ರೆಹನಾ, ಸಂಪತ್ ಕುಮಾರ್, ಅವಿನಾಶ್, ಮಿತ್ರ ,ರಾಹುಲ್ ದೇವ್, ದೇವ್ ಗಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin