“ಹೃದಯಂ” ಚಿತ್ರದ ಮೂಲಕ ಕಾಲೇಜು ಲವ್ ಸ್ಟೋರಿ ಹೇಳಲು ಮುಂದಾದ ತಂಡ
ಪದವಿಪೂರ್ವ, ಉಡಾಳ ಚಿತ್ರದ ಬಳಿಕ ನಟ ಪೃಥ್ವಿ ಶಾಮನೂರು ಮತ್ತೊಂದು ಯೂಥ್‍ಫುಲ್ ಲವ್ ಸ್ಟೋರಿ ಮೂಲಕ ತೆರೆಮೇಲೆ ಬರುವ ಸಿದ್ದತೆ ನಡೆಸಿದ್ದಾರೆ. ಚಿತ್ರದ ಹೆಸರು “ಹೃದಯಂ”. ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ನಿರ್ದೇಶನ ವಿಭಾಗದಲ್ಲಿ ತೊಡಗಿಕೊಂಡಿರುವ ರಜತ್ ಸೂರ್ಯವಂಶಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.ಶ್ರೀದೇವಿ ಎಲ್.ಕೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಪ್ರಥಮ ದೃಶ್ಯಕ್ಕೆ ನಟ ನವೀನ್ ಶಂಕರ್ ಕ್ಲಾಪ್ ಮಾಡಿದರು. sÀ ಹಾರೈಸಿದರು ಈ ವೇಳೆ ನಿರ್ದೇಶಕ ಯೋಗರಾಜ ಭಟ್, ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಶುಭ ಹಾರೈಸಿದರು.
ನಿರ್ದೇಶಕ ರಜತ್ ಸೂರ್ಯವಂಶಿ ಮಾತನಾಡಿ ಕಳೆದ 12 ವರ್ಷಗಳಿಂದ ನಂದಕಿಶೋರ್ ಸೇರಿ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಇದೊಂದುಬಲವ್ ಸ್ಟೋರಿ. ನೈಜ ಘಟನೆಯೊಂದನ್ನಾಧರಿಸಿದ ಚಿತ್ರ. 2000-2006ರ ಸಮಯದಲ್ಲಿ ನಡೆಯುವ ಕಾಲೇಜ್ ಲವ್ ಸ್ಟೋರಿಯನ್ನು ಚಿತ್ರದ ಮೂಲಕ ಹೇಳಹೊರಟಿದ್ದೇವೆ. 22-23ರ ವಯಸಿನ ಕಾಲೇಜು ವಿದ್ಯಾರ್ಥಿಗಳ ನಡುವೆ ಪ್ರೀತಿ, ಪ್ರೇಮದ ಪ್ರಕರಣಗಳು ಹೇಗೆಲ್ಲಾ ನಡೆಯುತ್ತಿತ್ತು ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ ಎಂದರು.
ಮಾರ್ಚ್ ಮೊದಲ ವಾರದಿಂದ ಆರಂಭಿಸಿ ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ. ಚಿತ್ರದಲ್ಲಿ 5 ಹಾಡುಗಳಿದ್ದು ಚೇತನ್ ದಾವ್ಯ ಮ್ಯೂಸಿಕ್ ಮಾಡುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಆರಾಧನಾ ಭಟ್, ರಮೇಶ್ ಇಂದಿರಾ, ರವಿಭಟ್, ಸ್ವಾತಿ, ಸೂರಜ್(ಕಾಮಿಡಿ ಕಿಲಾಡಿಗಳು) ನಟಿಸುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು

ನಟ ಪೃಥ್ವಿ ಶಾಮನೂರು ಮಾತನಾಡಿ 2006ರಲ್ಲಿ ನಡೆಯುವ ಅಪ್ಪಟ ಪ್ರೇಮಕಥೆ. ಸ್ಟೋರಿ ತುಂಬಾ ಚೆನ್ನಾಗಿದೆ. ಒಬ್ಬ ಕಾಲೇಜ್ ಹುಡುಗನಾಗಿ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದರು.
ನಾಯಕಿ ಆರಾಧನಾ ಭಟ್ ಮಾತನಾಡಿ ಕಿರುತೆರೆಯ ಮಹಾನಟಿಯಲ್ಲಿ ಭಾಗವಹಿಸಿದ್ದೆ. ನನ್ನ 2ನೇ ಚಿತ್ರ. ಕಥೆ ಕೇಳಿ ತುಂಬಾ ಖುಷಿಯಾಯ್ತು. ನನ್ನದು ಕಾಲೇಜ್ ಹುಡುಗಿಯ ಪಾತ್ರ, ಮೂರು ಶೇಡ್ಸ್ ಇದೆ ಎಂದು ಹೇಳಿದರು
ನಿರ್ಮಾಪಕಿ ಶ್ರೀದೇವಿ ಎಲ್.ಕೆ. ಮಾತನಾಡಿ ನಿರ್ದೇಶಕರು ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ, ಹಾಗಾಗಿ ನಾವೀ ಚಿತ್ರ ನಿರ್ಮಾಣಕ್ಕೆ ಮುಂದಾದೆವು ಎಂದರು.

ಸಾಗರ್ ಛಾಯಾಗ್ರಹಣ, ರಜತ್, ಉಪೇಂದ್ರ, ಮನೋಜ್ ಸಂಭಾಷಣೆ, ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ಅವರ ಸಾಹಿತ್ಯ ಚಿತ್ರಕ್ಕಿದೆ.

