ನೈಜ ಘಟನೆಯ ಗ್ಯಾಂಗ್ ಸ್ಟರ್ ಕಥೆಯ “ಕೆಡಿ” ಚಿತ್ರ ಏಪ್ರಿಲ್ 30 ಕ್ಕೆ ಬಿಡುಗಡೆ: ಟ್ರೈಲರ್ ಬಿಡುಗಡೆ
ಭಾರತೀಯ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಬಹು ತಾರಾಗಣದ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ನೈಜ ಘಟನೆಯ ಗ್ಯಾಂಗ್ ಸ್ಟರ್ ಕಥೆಯ ಸಿನಿಮಾ ಕೆಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಹಿರಿಯ ನಟ ದತ್ತಣ್ಣ ಚಾಲನೆ ನೀಡಿ ಶುಭ ಹಾರೈಸಿದರು

ನಿರ್ಮಾಪಕ ಕೆ.ವೆಂಕಟ್ ನಾರಾಯಣ್ ಕೋನಂಕಿ, ನಿರ್ದೇಶಕ ಪ್ರೇಮ್, ನಾಯಕ ದ್ರುವ ಸರ್ಜಾ, ನಾಯಕಿ ರೀಶ್ಮಾ ನಾಣಯ್ಯ, ರಮೇಶ್ ಅರವಿಂದ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ವಿಲಿಯಂ ಡೇವಿಡ್, ಕೊರಿಯೋಗ್ರಾಫರ್ ಭಜರಂಗಿ ಮೋಹನ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

ನಿರ್ದೇಶಕ ಪ್ರೇಮ್ ಮಾತನಾಡಿ ಕೆಡಿ ಚಿತ್ರ ಇದೇ ತಿಂಗಳ 30ಕ್ಕೆ ಬಿಡುಗಡೆ ಆಗ್ತಾ ಇದೆ. ಚಿತ್ರದ ಹೀರೋ ಮ್ಯೂಸಿಕ್ ಡೈರೆಕ್ಟರ್, ನಿರ್ದೇಶಕ ಅಂತಿದ್ದೆವು, ಆದರೆ ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕ ವೆಂಕಟ್ ನಾರಾಯಣ್.
ಮೂರು ವರ್ಷ ಸಾವಿರಾರು ಜನಕ್ಕೆ ಅನ್ನ ಹಾಕಿದ್ದಾರೆ, ನಿಜಕ್ಕೂ ಗುಂಡಿಗೆ ಇರುವ ನಿರ್ಮಾಪಕರು, ಸೆನ್ಸಾರ್ ತಂಡ ಅಲ್ಲದೆ ಸಿನಿಮಾ ನೋಡಿದ ಎಲ್ಲರೂ ದ್ರುವ ಸರ್ಜಾ ಅಭಿನಯ ಮೆಚ್ಚಿಕೊಂಡಿದ್ದಾರೆ, ಇಡೀ ಚಿತ್ರವೇ ಈ ಟ್ರೈಲರ್, ಇಲ್ಲಿ ಪ್ರತಿ ಪಾತ್ರಗಳೂ ಹುಟ್ಟುತ್ತವೆ, ಪ್ರತಿ ಪಾತ್ರವೂ ಎಂಡ್ ಆಗಲ್ಲ. ಕೆಡಿ ಸಿನಿಮಾ, ಏಪ್ರಿಲ್ 30ರಂದು ಕೆಡಿ ದೇಶಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ ಎಂದರು.
ನಟ ದ್ರುವ ಸರ್ಜಾ ಮಾತನಾಡಿ ಕೆಡಿ ಚಿತ್ರ ಎಲ್ಲರಿಗೂ ಖುಷಿ ಕೊಡಲಿದೆ. ಒಳ್ಳೆಯ ಪ್ಯಾಮಿಲಿ ಮನರಂಜನಾತ್ಮಕ ಕಥೆ ಚಿತ್ರದಲ್ಲಿದೆ. ಸನ್ನಿವೇಶಕ್ಕೆ ತಕ್ಕಂತೆ ಸ್ವಲ್ಪ ವಯಲೆನ್ಸ್ ಇದೆ. ನಿರ್ಮಾಪಕ ವೆಂಕಟ್ ಅವರು ಪ್ರೇಕ್ಷಕರನ್ನು, ಕಥೆಯನ್ನು ನಂಬಿ ಈ ಸಿನಿಮಾ ಮಾಡಿದ್ದಾರೆ. ನಾನಾಗಲೀ, ಪ್ರೇಮ್ ಆಗಲೀ ಈ ಚಿತ್ರದ ಹೀರೋ ಅಲ್ಲ, ನಮ್ಮ ನಿರ್ಮಾಪಕರೇ ನಿಜವಾದ ಹೀರೋ, ನಾಯಕಿ ರೀಶ್ಮಾ ವಂಡರ್ ಫುಲ್ ಆಕ್ಟರ್, ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಅರ್ಜುನ್ ಜನ್ಯ ಜತೆ ಇದು ಮೊದಲ ಚಿತ್ರ. ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ. ಇಡೀ ಫ್ಯಾಮಿಲಿ ಕೂತ್ಕೊಂಡ್ ನೋಡುವಂಥ ಚಿತ್ರವಿದು, ದತ್ತಣ್ಣ ಅವರು ಟ್ರೈಲರ್ ಲಾಂಚ್ ಮಾಡಿದ್ದು ಖುಷಿಯಾಗಿದೆ. ಕೆಡಿ ಚಿತ್ರದ್ದು ಫನ್
ಜರ್ನಿನೂ ಇದೆ. ಬೇರೆ ಥರದ ಜರ್ನಿಯೂ ಇದೆ ಎಂದು ಹೇಳಿದರು.

ನಿರ್ಮಾಪಕ ಕೆ.ವೆಂಕಟ್ ನಾರಾಯಣ್ ಮಾತನಾಡಿ
ಪ್ರೇಮ್ ವಂಡರ್ಪುಲ್ ಸಿನಿಮಾ ಮಾಡಿದ್ದಾರೆ. ದ್ರುವ, ರಮೇಶ್ ಅರವಿಂದ್, ರವಿಚಂದ್ರನ್ ಎಲ್ಲರೂ ತುಂಬಾ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದಾರೆ, ಇದೇ 30ಕ್ಕೆ ನಿಮ್ಮ ಮುಂದೆ ಬರ್ತಿದೆ, ನೋಡಿ ಎಂದು ಹೇಳಿದರು.
ನಟ ರಮೇಶ್ ಅರವಿಂದ್ ಮಾತನಾಡಿ ಚಿತ್ರ ಎಲ್ಲರ ಶ್ರಮದಿಂದ ದೊಡ್ಡದಾಗಿ ಬಂದಿದೆ. ಕೆಡಿ ಅಂದ್ರೆ ಕಾಳಿದಾಸ, ಆದರೆ ಆತ ರಕ್ತದಲ್ಲಿ ಕಾವ್ಯ ಬರೆಯುತ್ತಾನೆ. ನನ್ನ ಹೆಸರು ಧರ್ಮ, ಇಲ್ಲಿ ಪ್ರತಿ ಪಾತ್ರಗಳ ಕ್ಯಾರೆಕ್ಟರ್ ವ್ಯತಿರಿಕ್ತವಾಗಿದೆ ಎಂದರು.
ಕೆಡಿ ಚಿತ್ರದಲ್ಲಿ 6 ಸುಂದರ ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ನಾಯಕಿ ರೀಶ್ಮಾ ನಾಣಯ್ಯ, ಅರ್ಜುನ್ ಜನ್ಯ, ವಿಲಿಯಂ ಡೇವಿಡ್, ಭಜರಂಗಿ ಮೋಹನ್ ಸೇರಿದಂತೆ ಇಡೀ ಕೆಡಿ ಚಿತ್ರತಂಡ ಸಿನಿಮಾದ ವಿಶೇಷತೆಗಳ ಬಗ್ಗೆ ಮಾತನಾಡಿದರು.
ಅಂದಹಾಗೆ, 1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್ಸ್ಟರ್ ಕಥೆ ಈ ಚಿತ್ರಲ್ಲಿದೆ, ಚಿತ್ರದ ಆರು ಕಲರ್ಫುಲ್ ಹಾಡುಗಳಿಗೆ ಆರು ಕೊರಿಯಾಗ್ರಾಫರ್ಗಳು ಕೆಲಸ ಮಾಡಿದ್ದಾರೆ.
ಕೆಡಿ ಚಿತ್ರಕ್ಕೆ ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಅಲ್ಲದೆ ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಬಾಲಿವುಡ್ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.


