Shikhandi Movie Review: ಮಂಗಳಮುಖಿಯರ ಸುತ್ತ ಸಾಗುವ ವಿಭಿನ್ನ ಕಥನ “ಶಿಖಂಡಿ”
ಚಿತ್ರ: ಶಿಖಂಡಿ
ನಿರ್ದೇಶನ: ವಿ ಗುರುಮೂರ್ತಿ
ತಾರಾಗಣ: ಯುವರಾಜ್ ಗೌಡ,ಖ್ಯಾತಿ,ನಿಖಿಲ್, ನಿಖಿತಸ್ವಾಮಿ, ರಾಜ್ ದೀಪಕ್ ಶೆಟ್ಟಿ, ನೀತು ವನಜಾಕ್ಷಿ, ರಾಘವೇಂದ್ರ , ಚಾಂದಿನಿ, ವೇದ, ಬಲ ರಾಜ್ವಾಡಿ, ನಯನ, ವಿಜಯ್ ಚೆಂಡೂರ್ ಮತ್ತಿತರರು
ರೇಟಿಂಗ್ : *** 3/5
ಮಂಗಳಮುಖಿಯರನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ, ಅದು ಸರಿಯೋ ತಪ್ಪೋ ಎನ್ನುವುದು ಒಂದೆಡೆಯಾದರೆ ಈ ವಾರ ತೆರೆಗೆ ಬಂದಿರುವ ಶಿಖಂಡಿ ಚಿತ್ರದಲ್ಲಿ ಮಂಗಳಮುಖಿಯರನ್ನು ಕೇಂದ್ರಿಕರಿಸಿ ಚಿತ್ರವನ್ನು ಜನರ ಮುಂದಿಡಲಾಗಿದೆ.
ಈ ವಿಭಿನ್ನ ಮಾದರಿಯ ಕಥೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ವಿ. ಗುರುಮೂರ್ತಿ ಶಿಖಂಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಗುವಿನ ಜನನಕ್ಕೆ ವಿಶಷ ಪೂಜೆ ಮಾಡಿ ಆ ನಂತರ ದಂಪತಿಗೆ ಜನಿಸಿ ಮಗುವವನ್ನು ಕೊಲ್ಲಲು ಯತ್ನ ನಡೆಸಿದ ದುಷ್ಟ ಶಕ್ತಿಗಳ ವಿರುದ್ದ ಹೋರಾಟ ನಡೆಸುವ ಕಥೆಯನ್ನು ಒಳಗೊಂಡಿದೆ.
ನಾಯಕ ಸೂರ್ಯ (ಯುವರಾಜ್ ಗೌಡ) ಕೆಲಸದಲ್ಲಿ ಶಿಸ್ತಿನ ಮನುಷ್ಯ. ರಾತ್ರಿ 9 ಆಯ್ತು ಎಂದರೆ ಸಾಕು ಎಷ್ಟೇ ಕೆಲಸಗಳಿದ್ದರೂ ಅದನ್ನು ಬದಿಗೊತ್ತಿ ಎಣ್ಣೆ ಹಾಕೋದು ಅವನ ಮತ್ತೊಂದು ಕಾಯಕ. ಎಂದಿನಂತೆ ಮಾಮೂಲಿ ಕೆಲಸ, ಕಾರ್ಯ, ಸ್ನೇಹಿತರು. ಇಂತಹ ಸೂರ್ಯನ ಸ್ನೇಹಿತರ ಇಂಜಿನಿಯರ್ ತಂಡಕ್ಕೆ ಆಸ್ಪತ್ರೆ ಕಟ್ಟುವ ಕೆಲಸದ ಆಫರ್.
ಅದು ದೂರದ ದರೋಜಿ ಎನ್ನುವ ಕುಗ್ರಾಮ. ಅಲ್ಲಿ ಆಸ್ಪತ್ರೆ ಕಟ್ಟಿಸಲು ಒಂದು ಉದ್ದೇಶವಿದೆ, ಅದರ ಕೆಲಸಕ್ಕೆ ಮುಂದಾದವರು ಸಂಗೀತ (ಖ್ಯಾತಿ) ಮತ್ತು ಅವರ ಅಪ್ಪ. ಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಲು ಮುಂದಾದಾಗ ಅದನ್ನು ತಡೆಯಲು ಇನ್ನೊಬ್ಬ ವ್ಯಕ್ತಿ ಎದುರಾಗುತ್ತಾನೆ. ಅದನ್ನು ದಾಟಿ ಆಸ್ಪತ್ರೆ ಕಟ್ಟುತ್ತಾರೆ.
ಸೂರ್ಯನ ಹಿನ್ನೆಲೆ ಏನು, ಮಂಗಳ ಮುಖಿಯರು ಆತ್ಮವಾಗಿ ಕಾಡುವುದೇಕೆ, ಕುಗ್ರಾಮದಲ್ಲಿ ಆಸ್ಪತ್ರೆ ಕನಸು ಕನಸಾಗುತ್ತಾ ಎನ್ನುವ ವಿಷಯ ತಿಳಿಯಲು ಸಿನಿಮಾ ನೋಡಿದರೆ ಚೆನ್ನ
ನಿರ್ದೇಶಕ ಗುರುಮೂರ್ತಿ, ಮಹಾಭಾರತದಲ್ಲಿ ಬರುವ “ಶಿಖಂಡಿ” ಪಾತ್ರವನ್ನು ಆಧರಿಸಿರುವ ಕಥಾಹಂದರ ಹೊಂದಿರುವ ಕುತೂಹಲಕಾರಿ ಕಥನವನ್ನು ಕಟ್ಟಿಕೊಟ್ಟಿದ್ದಾರೆ ಚಿತ್ರದಲ್ಲಿ ಕೆಲ ಮಂದಿಯನ್ನು ಹೊರತು ಪಡಿಸಿದರೆ ಬಹುತೇಕರು ಹೊಸ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಯುವರಾಜ್ ಗೌಡ. ಖ್ಯಾತಿ,ನಿಖಿಲ್, ನಿಖಿತಸ್ವಾಮಿ, ರಾಜ್ ದೀಪಕ್ ಶೆಟ್ಟಿ, ನೀತು ವನಜಾಕ್ಷಿ, ರಾಘವೇಂದ್ರ, ಚಾಂದಿನಿ, ವೇದ, ಬಲ ರಾಜವಾಡಿ ನಯನ, ವಿಜಯ್ ಚೆಂಡೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಮಂಜು ಕವಿ ಸಂಗೀತ ನಿರ್ದೇಶನದ ಅಬ್ಬರದಲ್ಲಿ ಸಂಭಾಷಣೆ ಕೇಳಿಸದು, ಪ್ರದ್ಯೋತನ್ ಹಿನ್ನೆಲೆ ಸಂಗೀತ. ಸ್ವಾಮಿ ಮೈಸೂರು ಛಾಯಾಗ್ರಹಣವಿದೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

