Mother Promise Movie Review : ಬೈಕ್,ಬ್ಯಾಗ್, ಸ್ನೇಹದ ಸುತ್ತಾ “ಮದರ್ ಪ್ರಾಮೀಸ್”
ಚಿತ್ರ : ಮದರ್ ಪ್ರಾಮಿಸ್
ನಿರ್ದೇಶನ: ಪೂರ್ಣಚಂದ್ರ ಮೈಸೂರು
ತಾರಾಗಣ: ಡಾಲಿ ಧನಂಜಯ,ಮಹದೇವ್ ಪ್ರಸಾದ್,ಪೂರ್ಣಚಂದ್ರ ಮೈಸೂರು, ಚಿ,ಗುರುದತ್, ವಿನಯ್ ಪ್ರಸಾದ್,ಗೀತಾ, ನಾಗಭೂಷಣ,ಶ್ರೀವತ್ಸ ಶ್ಯಾಮ್, ನರೇಶ್ ಡಿಂಗ್ರಿ, ಯಶವಂತ್, ಅರುಣ್ ಬ್ರಹ್ಮಾವರ ಮತ್ತಿತರರು
ರೇಟಿಂಗ್: *** 3.5 / 5
“ಕ್ಷಮಿಸಮ್ಮ,, ಪ್ರೀತಿಯಿಂದ ಕೊಡಿಸಿದ ಬೈಕ್ ಕಳೆದುಕೊಂಡು ನಿನ್ನ ಮುಂದೆ ನಿಂತಿದ್ದೇನೆ,, ಅದನ್ನು ತಂದು ನಿನ್ನ ಮುಂದೆ ನಿಲ್ಲಿಸ್ತೇನೆ..”
ಪ್ರೆಂಡ್, ಪ್ರೆಂಡ್‍ಶಿಪ್ ಮರೆತಿಲ್ಲ ಮಿಸ್,,,
“ಮದರ್ ಪ್ರಾಮಿಸ್..”
ಎರಡು ಸನ್ನಿವೇಶಗಳು ಚಿತ್ರ ಶೀರ್ಷಿಕೆ ಮೂಲಕ ಪ್ರತಿಬಿಂಬಿಸುವ ಕೆಲಸ ಮಾಡಲಾಗಿದೆ.
ಮಗನ ಕನಸಿಗೆ ಪೂರಕವಾಗಿ ತಾಯಿ ಕೊಡಿಸಿದ ಬೈಕ್. ಮತ್ತೊಂದು ಬಾಲ್ಯದ ಸ್ನೇಹಿತರು “ಆ ಒಂದು ಪದ” ಹೇಳಲಿಲ್ಲ ಎಂದು ಬೇರೆ ಬೇರೆಯಾಗಿ ಕೊನೆಗೆ ಶಿಕ್ಷಕಿ ಮುಂದೆ ಒಂದಾಗುವ ಕಥೆ ಇದು..
ಮನರಂಜನೆಯನ್ನು ಬಯಸುವ ಪ್ರೇಕ್ಷಕರನ್ನು ಮುಂದಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್, ಬೈಕ್, ಬ್ಯಾಗ್, ಸ್ನೇಹದ ಜೊತೆಗೆ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬಂದ ಒಂದಷ್ಟು ಕನಸುಗಾರರ ತೊಂದರೆ, ತಾಪತ್ರೆ, ಪಡಿÀಪಾಟಿಲು ಸುತ್ತ ಕಟ್ಟಿಕೊಟ್ಟಿರುವ ಚಿತ್ರ “ಮದರ್ ಪ್ರಾಮೀಸ್”.
ರಾಂಡಿ (ಪೂರ್ಣಚಂದ್ರ ಮೈಸೂರು) ಬೆಟ್ಟಿಂಗ್‍ನಲ್ಲಿ ಹಣ ಕಳೆದುಕೊಂಡು ಬೆಟ್ಟಿಂಗ್ ಹಣ ಕೊಡಲಾಗದೆ ಮನೆಯವರಿಗೆ ಮುಖ ತೋರಿಸಲು ಸಾಧ್ಯವಾಗದೆ ಆತ್ಮಹತ್ಯೆ ನಾಟಕ ಮಾಡಿವ. ಬಾಲ್ಯದಲ್ಲಿ ಬೈಕ್ ರೈಸರ್ ಆಗಬೇಕೆಂದು ಕನಸು ಕಂಡು ರಾಸಿ (ಡಾಲಿ ಧನಂಜಯ) ಜೂಜುಕೋರರ ಕಿಂಗ್, ದೊನ್ನೆ ಬಿರಿಯಾನಿ (ಮಹದೇವ ಪ್ರಸಾದ್) ಕಳ್ಳಸಾಗಾಣಿಕೆ ರಾಜ, ಇವರ ನಡುವೆ ಸಿಕ್ಕಿ ಹಾಕಿಕೊಂಡ ಹುಡುಗರ ಕಥೆ ವ್ಯಥೆ, ಬದುಕು ಬವಣೆ ಬಿಂಬಿಸಿರುವ ಚಿತ್ರ.
ಬೈಕ್ ಮತ್ತು ಬ್ಯಾಗ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ, ಬೈಕ್‍ಗೆ ಅತಿಯಾದ ಪ್ರೀತಿಯಾಕೆ,, ಕಳುವಾದ ಬ್ಯಾಗ್‍ನಲ್ಲಿ ಏನಿತ್ತು. ಅದನ್ನು ಯಾರು ಕಳ್ಳತನ ಮಾಡಿದರು,ಇಲ್ಲ ತಲುಪಬೇಕಾದ ಜಾಗ ತಲುಪಿತಾ, ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬಂದ ಹುಡುಗರ ಪಾಡು ಏನಾಯಿತು. ಇಲ್ಲ ಮುಂದೇನು ಎನ್ನುವುದನ್ನು ಕುತೂಹಲಕಾರಿ ಅದನ್ನು ಚಿತ್ರದಲ್ಲಿ ನೋಡಬೇಕು.
ನಿರ್ದೇಶಕ ಪೂರ್ಣಚಂದ್ರ ಮೈಸೂರು ಪ್ರೇಕ್ಷಕರನ್ನು ನಗಿಸಲು ಬರೊಬ್ಬರಿ 166 ನಿಮಿಷಯಗಳ ಚಿತ್ರ ಎರಡೂ ಮುಕ್ಕಾಲು ಗಂಟೆ ಪ್ರೇಕ್ಷಕರನ್ನು ಚಿತ್ರಮಂದಿರಲ್ಲಿ ಹಿಡಿದಿಡುವ ಕೆಲಸ ಮಾಡಿದ್ದಾರೆ. ನಗು ತರಿಸಲು ನಾನಾ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕರು ಮಾಡಿದ ಪ್ರಯತ್ನಕ್ಕೆ ಪ್ರೇಕ್ಷಕರಿಗೆ ನಗು ಬರುತ್ತಾ,, ಎರಡು ಮುಕ್ಕಾಲು ಗಂಟೆಯಾದರೂ ಸರಿ ಒಂದೊಳ್ಳೆ ಮನರಂಜನೆ ಸಿಗುತ್ತಾ ಅನ್ನಿಸುತ್ತಾ ಚಿತ್ರ ನೋಡಿದ ಪ್ರೇಕ್ಷಕರದ್ದು.
ನಟ ಡಾಲಿ ಧನಂಜಯ ಅವರ ಪಾತ್ರದ ವೈಭವೀಕರಣಕ್ಕಿಂತ ಹೆಚ್ಚಾಗಿ ಮಹದೇವ ಪ್ರಸಾದ್, ಶ್ರೀವತ್ಸ ಶ್ಯಾಮ್, ಪೂರ್ಣ ಚಂದ್ರ ಪಾತ್ರಗಳಿಗೆ ಪ್ರದಾನ ಆದ್ಯತೆ ನೀಡಲಾಗಿದೆ. ನಟ ಧನಂಜಯ ಅವರಿಗೆ ಜೊತೆಗಾರರನ್ನು ಪ್ರೊತ್ಸಾಹಿಸುವ ಆಸೆ, ಕಕ್ಕುಲಾತಿ ಅಭಿನಂಧನಾರ್ಹ, ಆದರೆ ಈಗಿನ ದಿನಮಾನಗಳಲ್ಲಿ ಎರಡು ಮುಕ್ಕಾಲು ಗಂಟೆ ಸಿನಿಮಾ ಅವಧಿ ದೊಡ್ಡದಲ್ಲ, ಅದು ನೋಡಿಸಿಕೊಂಡು ಹೋದಾಗ,. ಸಿನಿಮಾ ಅವಧಿಯ ಕಡೆಗೆ ಗಮನ ಹರಸಿದ್ದರೆ ಒಳ್ಳೆಯದಿತ್ತು..ನಿರ್ದೇಶಕರು, ತಂಡಕ್ಕೆ ಬಿಟ್ಟಿದ್ದು
ಹಿರಿಯ ಕಲಾವಿದರಾದ ವಿನಯ್ ಪ್ರಸಾದ್ ಅವರನ್ನು ತಾಯಿಯ ಸೆಂಟಿಮೆಂಟ್‍ಗೆ, ಗೀತಾ ಅವರನ್ನು ಶಿಕ್ಷಕಿಯಾಗಿ ಬೋಧನೆಗಾಗಿ ಬಳಸಿಕೊಳ್ಳಲಾಗಿದೆ. ಇದರ ಇನ್ನುಳಿದ ಪಾತ್ರಗಳು ಚಿತ್ರದಲ್ಲಿವೆ, ಒಂದು ರೀತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಹೇಳುವ ವಿಷಯವನ್ನು ಚಿಕ್ಕದಾಗಿ ಚೊಕ್ಕವಾಗಿ ಹೇಳುವ ಮಾಡಿದ್ದರೆ ಚಿತ್ರ ಮತ್ತಷ್ಟು ರುಚಿಸುತ್ತಿತ್ತು. ಚಿ,ಗುರುದತ್ ಅಂತಹ ಅದ್ಬುತ ಹಾಸ್ಯ ಕಲಾವಿದರನ್ನು ಒಂದೆರಡು ಸನ್ನಿವೇಶಗಳಿಗೆ ಸೀಮಿತಗೊಳಿಸಲಾಗಿದೆ, ಆರಂಭದಲ್ಲಿ ಅನಗತ್ಯ ಸನ್ನಿವೇಶಗಳಿಗೆ ಕತ್ತರಿ ಹಾಕಿ ಚಿ.ಗುರುದತ್ ಅವgಗೆ ಇನ್ನಷ್ಟು ಪ್ರಾಮುಖ್ಯತೆ ಕೊಟ್ಟಿದರೆ ಚಿತ್ರಕ್ಕೆ ಮತ್ತಷ್ಟು ತೂಕ ಬರುತ್ತಿತ್ತು.
ನರೇಶ್ ಡಿಂಗ್ರಿ, ಯಶವಂತ್, ಅರುಣ್ ಬ್ರಹ್ಮಾವರ ಮತ್ತಿತರಿದ್ದು ಹಿರಿಯ ಕಲಾವಿದ ಶ್ರೀನಿವಾಸ್ ಪ್ರಭು, ನಟ ನಾಗಭೂಷಣ, ಸೇರಿದಂತೆ ಹಲವು ಹಾಗೆ ಒಂದು ಹೋಗುತ್ತಾರೆ,
ಚಿತ್ರ ಕಲ್ಲು ಹೃದಯದವಲ್ಲಿ ನಗು ತರಿಸುತ್ತಾ.. ಇಲ್ವಾ.. ನಗು, ಆಯ್ಕೆ ನಿಮ್ಮದು….
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

