Filming of "Bheema" Completed : Shooting at Real Locations

ಪೂರ್ಣಗೊಂಡ “ಭೀಮ” ಚಿತ್ರದ ಚಿತ್ರೀಕರಣ : ನೈಜ ಸ್ಥಳಗಳಲ್ಲಿ ಚಿತ್ರೀಕರಣ - CineNewsKannada.com

ಪೂರ್ಣಗೊಂಡ “ಭೀಮ” ಚಿತ್ರದ ಚಿತ್ರೀಕರಣ : ನೈಜ ಸ್ಥಳಗಳಲ್ಲಿ ಚಿತ್ರೀಕರಣ

ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹೆಚ್ಚಿಸಿರುವ ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶಿಸಿ ನಟಿಸುತ್ತಿರುವ “ ಭೀಮ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಭೀಮ ಚಿತ್ರವನ್ನ ನೈಜವಾಗಿ ತೆರೆಯ ಮೇಲೆ ತರುವ ಎಲ್ಲ ಪ್ರಯತ್ನವನ್ನು ನಿರ್ದೇಶಕ ವಿಜಯ್ ಕುಮಾರ್ ಮಾಡಿದ್ದು ಅದಕ್ಕಾಗಿ ನೈಜ ಸ್ಥಳದಲ್ಲಿ ಚಿತ್ರೀಕರಣ ಮಾಡಿರುವುವುದು ಭೀಮ ಚಿತ್ರದ ಹೆಗ್ಗಳಿಕೆ

ಮಧ್ಯರಾತ್ರಿ ಬೆಂಗಳೂರಿನ ವಿನೋಬನಗರದ ಗಲ್ಲಿಗಳಲ್ಲಿ ಭೀಮ ಚಿತ್ರದ ಕೊನೆಯ ಸೀನ್ ಶೂಟ್ ಮಾಡೋ ಮೂಲಕ ಕುಂಬಳಕಾಯಿ ಹೊಡೆಯಲಾಗಿದೆ.

ಈ ವೇಳೆ ಪತ್ರಕರ್ತರನ್ನು ಚಿತ್ರೀಕರಣ ಸ್ಥಳಕ್ಕೆ ಆಹ್ವಾನಿಸಿದ್ದ ನಿರ್ದೇಶಕ ದುನಿಯಾ ವಿಜಯ್ ಮತ್ತು ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

ಭೀಮನ ಏರಿಯಾವನ್ನ ಕಾಲ್ನಡಿಗೆಯಲ್ಲಿ ಸುತ್ತಿಸಿದ ವಿಜಯ್ ಭೀಮ ಚಿತ್ರವನ್ನ ಚಿತ್ರೀಕರಿಸಿದ ಜಾಗಗಳನ್ನ ಪರಿಚಯಿಸಿದ್ದು ವಿಶೇಷವಾಗಿತ್ತು.

ಇಡೀ ಭೀಮ ಚಿತ್ರತಂಡ ಈ ಸಂದರ್ಭದಲ್ಲಿ ಭಾಗಿಯಾಗಿತ್ತು. ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿಶೇಷವಾಗಿ ಸುದ್ದಿಯಾಗ್ತಿರೋ ಭೀಮ ಕೊನೆ ಸೀನ್ ಶೂಟಿಂಗ್ ವೇಳೆಯೂ ಆ ವಿಶೇಷಯನ್ನ ಕಾಪಾಡಿಕೊಂಡಿದೆ.

ಈಗಾಗ್ಲೇ ಎರಡು ಸೂಪರ್ ಹಿಟ್‍ಹಾಡುಗಳನ್ನ ರಿಲೀಸ್ ಮಾಡಿರೋ ಭೀಮ ಸದ್ಯದಲ್ಲೇ ಚಿತ್ರದ ಮತ್ತಷ್ಟು ಮಾಹಿತಿ ಕೊಡಲಿದೆ.

ಚಿತ್ರವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಹಾಡುಗಳು ಈಗಾಗಲೇ ಮೋಡಿ ಮಾಡಿವೆ. ಹೊಸಬರು ಮತ್ತು ರಂಗಭೂಮಿ ಕಲಾವಿದರನ್ನು ಭೀಮ ಚಿತ್ರದ ಮೂಲಕ ನಟ, ನಿರ್ದೇಶಕ ದುನಿಯಾ ವಿಜಯ್ ಪರಿಚಯ ಮಾಡಿಕೊಟ್ಟಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin