Shooting of Kiran Raj starrer ``Ronny '' is completed at Vishnuvardhan Memorial

ವಿಷ್ಣುವರ್ಧನ್ ಸ್ಮಾರಕದಲ್ಲಿ ಕಿರಣ್ ರಾಜ್ ಅಭಿನಯದ “ರಾನಿ” ಚಿತ್ರೀಕರಣ ಪೂರ್ಣ - CineNewsKannada.com

ವಿಷ್ಣುವರ್ಧನ್ ಸ್ಮಾರಕದಲ್ಲಿ ಕಿರಣ್ ರಾಜ್ ಅಭಿನಯದ “ರಾನಿ” ಚಿತ್ರೀಕರಣ ಪೂರ್ಣ

ಗುರುತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಚಿತ್ರದ ಕೊನೆ ಹಂತದ ಚಿತ್ರಿಕರಣ ಮುಗಿಸಿದೆ. ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ರವಿಶಂಕರ್, ಮಠ ಗುರುಪ್ರಸಾದ್, ಯಶ್ ಶೆಟ್ಟಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್ ಅವರ ಕೊನೆಯ ಹತ್ತು ದಿನದ ಚಿತ್ರೀಕರಣ ಮಾಡಿ ಮುಗಿಸಿದೆ.

ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ ಹೆಗ್ಡೆ ನಿರ್ಮಿಸುತ್ತಿರುವ ಮೊದಲ ಚಿತ್ರ ಇದಾಗಿದೆ.ಈಗಾಗಲೇ ಪೋಸ್ಟರ್ ಟೀಸರ್ ನಿಂದ ಚಿತ್ರ ಪ್ರೇಕ್ಷಕರಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ.

ಚಿತ್ರದಲ್ಲಿ ಮೂವರು ನಾಯಕಿಯರಿದ್ದು ರಾಧ್ಯ, ಸಮಿಕ್ಷಾ ಮತ್ತು ಅಪೂರ್ವ ಅಭಿನಯಿಸಿದ್ದಾರೆ. ಮೈಕೋ ನಾಗರಾಜ್, ಉಗ್ರಂ ಮಂಜು, ಉಗ್ರಂ ರವಿ, ಸುಜಯ್ ಶಾಸ್ತ್ರಿ, ಗಿರೀಶ್ ಹೆಗ್ಡೆ, ಬಿ ಸುರೇಶ, ಶ್ರೀಧರ್, ಧರ್ಮೇಂದ್ರ ಆರಸ್, ಚೇತನ್ ದುರ್ಗ, ಅನಿಲ್ ಯಾದವ್, ಪ್ರಥ್ವಿ ರಾಜ್, ಅರ್ಜುನ್, ಕರಿ ಸುಬ್ಬು ಮುಂತಾದ ಹೆಸರಾಂತ ಕಲಾವಿದ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ, ಉಮೇಶ ಸಂಕಲನ, ಮಣಿಕಾಂತ್ ಕದ್ರಿ ಸಂಗೀತ ಹಾಗೂ ಪ್ರಮೋದ ಮರವಂತೆ ಗೀತರಚನೆ, ವಿನೋದ್ ಸಾಹಸ ಧನಂಜಯ ಅವರ ನೃತ್ಯ ನಿರ್ದೇಶನವಿದೆ. “ರಾನಿ” ಗೆ ಸಚಿನ್ ಬಸ್ರೂರ್ ಹಿನ್ನಲೆ ಸಂಗೀತವಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನೆಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸಲಿದೆ ಚಿತ್ರತಂಡ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin