Pan India film "Kannappa" to release worldwide on April 25th

ಪ್ಯಾನ್ ಇಂಡಿಯಾ ಚಿತ್ರ “ಕಣ್ಣಪ್ಪ” ಏಪ್ರಿಲ್ 25ರಂದು ವಿಶ್ವದಾದ್ಯಂತ ಬಿಡುಗಡೆ - CineNewsKannada.com

ಪ್ಯಾನ್ ಇಂಡಿಯಾ ಚಿತ್ರ “ಕಣ್ಣಪ್ಪ” ಏಪ್ರಿಲ್ 25ರಂದು ವಿಶ್ವದಾದ್ಯಂತ ಬಿಡುಗಡೆ

ಕಣ್ಣಪ್ಪನ ಪೌರಾಣಿಕ ಕಥೆ ಆಧರಿಸಿದ ಮಹಾಕಾವ್ಯ ಚಿತ್ರ ‘ಕಣ್ಣಪ್ಪ’ ಚಿತ್ರದ ಬಹುನಿರೀಕ್ಷಿತ ಟೀಸರ್ ಅನ್ನು ಮುಂಬೈನಲ್ಲಿ ನಡೆದ ವಿಶೇಷ ಮಾಧ್ಯಮ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, ನಾಯಕ ನಟ ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಸೇರಿ ಚಿತ್ರತಂಡದ ಹಲವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಮತ್ತು ಎಂ. ಮೋಹನ್ ಬಾಬು ನಿರ್ಮಾಣದ ಕಣ್ಣಪ್ಪ ಚಿತ್ರ, ಪೌರಾಣಿಕ ಕಥೆಯಾದರೂ, ಆಧುನಿಕ ನಿರ್ಮಾಣ ತಂತ್ರಗಳೊಂದಿಗೆ ಸಂಯೋಜಿಸಿ, ಪ್ರೇಕ್ಷಕರನ್ನು ದೃಶ್ಯ ಮತ್ತು ಭಾವನಾತ್ಮಕ ಪ್ರಯಾಣಕ್ಕೆ ಕರೆದೊಯ್ಯುವ ಗುರಿ ಹೊಂದಿದೆ.

ಶಿವನ ಪಾತ್ರ ಮಾಡಿರುವ ಅಕ್ಷಯ್ ಕುಮಾರ್ ಮಾತನಾಡಿ ಆರಂಭದಲ್ಲಿ ಎರಡು ಬಾರಿ ಪ್ರಸ್ತಾಪವನ್ನು ತಿರಸ್ಕರಿಸಿದೆ. ಭಾರತೀಯ ಚಿತ್ರರಂಗದಲ್ಲಿ ಶಿವನನ್ನು ದೊಡ್ಡ ಪರದೆಯ ಮೇಲೆ ಜೀವಂತಗೊಳಿಸಲು ನಾನೇ ಸರಿಯಾದ ವ್ಯಕ್ತಿ ಎಂಬ ವಿಷ್ಣುವಿನ ಅಚಲ ನಂಬಿಕೆ ನನಗೆ ನಿಜವಾಗಿಯೂ ಮನವರಿಕೆ ಮಾಡಿಕೊಟ್ಟಿತು. ಕಥೆ ಶಕ್ತಿಯುತವಾಗಿದೆ,ಚಿತ್ರ ಒಂದು ದೃಶ್ಯ ಮೇರುಕೃತಿಯಾಗಿ ಹೊರಹೊಮ್ಮಿದೆ. ಈ ಅದ್ಭುತ ಪ್ರಯಾಣದ ಭಾಗವಾಗಲು ಹೆಮ್ಮೆ ಇದೆ ಎಂದಿದ್ಧಾರೆ.

ನಟ ವಿಷ್ಣು ಮಂಚು ಮಾತನಾಡಿ ಚಿತ್ರ ಕೇವಲ ಒಂದು ಯೋಜನೆಯಲ್ಲ ವೈಯಕ್ತಿಕ ಪ್ರಯಾಣ. ಪ್ರಸ್ತುತ ಭಾರತದಾದ್ಯಂತ ಎಲ್ಲಾ ಜ್ಯೋತಿರ್ಲಿಂಗಗಳನ್ನು ಭೇಟಿ ಮಾಡಿದ್ದೇನೆ. ಕಣ್ಣಪ್ಪನ ಕಥೆಯೊಂದಿಗೆ ಆಳವಾದ, ಆಧ್ಯಾತ್ಮಿಕ ಬಂಧ ಅನುಭವಿಸಿದ್ದೇನೆ. ಆತ್ಮವನ್ನು ಸ್ಪರ್ಶಿಸುವ ಅಚಲ ನಂಬಿಕೆ ಮತ್ತು ತ್ಯಾಗದ ಕಥೆಯಾಗಿದೆ. ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಪ್ರಭಾಸ್ ಅವರಂತಹ ಐಕಾನ್‍ಗಳು ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿರುವುದು ಹೆಮ್ಮೆಯ ವಿಷಯ” ಎಂದರು.

ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಮಾತನಾಡಿ “ಅಕ್ಷಯ್, ಮೋಹನ್ ಲಾಲ್ ಮತ್ತು ಪ್ರಭಾಸ್ ಅವರಂತಹ ದಿಗ್ಗಜರನ್ನು ನಿರ್ದೇಶಿಸುವುದು ಅದ್ಭುತ ಅನುಭವವಾಗಿತ್ತು. ಅವರವರ ಪಾತ್ರಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಮೈನವಿರೇಳಿಸುವ ದೃಶ್ಯಗಳು ಮತ್ತು ಮಹಾಕಾವ್ಯದ ಕಥಾಹಂದರದೊಂದಿಗೆ, ಕಣ್ಣಪ್ಪ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕೇನ್ಸ್ ಚಿತ್ರೋತ್ಸವದಲ್ಲಿ ಈಗಾಗಲೇ ಗಮನ ಸೆಳೆದಿರುವ ಚಿತ್ರದ ಟೀಸರ್, ಮಾರ್ಚ್ 1ರಂದು ಯೂಟ್ಯೂಬ್‍ನಲ್ಲಿ ಬಿಡುಗಡೆ ಆಗಲಿದೆ. ಏಪ್ರಿಲ್ 25 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ವಿನಯ್ ಮಹೇಶ್ವರಿ ಮತ್ತಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin