ನಟ ವಿಜಯ್ ರಾಘವೇಂದ್ರ ನಟನೆಯ ರುದ್ರಾಭಿಷೇಕಂ ಚಿತ್ರದ ಹಾಡುಗಳ ಚಿತ್ರೀಕರಣ
ನಟ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವ `ರುದ್ರಾಭಿಷೇಕಂ’ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ.

25 ದಿನಗಳ ಕಾಲ ಚಿತ್ರೀಕರಣ ಮುಗಿಸಿ, ಕಳೆದ ವಾರದಿಂದ ಎರಡು ಹಾಡುಗಳ ಚಿತ್ರೀಕರಣ ಸುಂದರ ನಿಸರ್ಗ ತಾಣಗಳಾದ ಕುಮಟಾ, ಕಾರವಾರ, ಹೊನ್ನಾವರ ಸುತ್ತಮುತ್ತ ನಡೆಸಿದ್ದು ,ಕಾರವಾರದ ಬಹುತೇಕ ಸ್ಥಳಗಳಲ್ಲಿ ಆಘನಾಶಿನಿ ಹಿನ್ನೀರ ತಾಣಗಳಲ್ಲಿ ಭರದಿಂದ ಚಿತ್ರೀಕರಣ ಸಾಗಿದೆ.
ನಾಯಕ ಚಿನ್ನಾರಿ ಮುತ್ತ, ಕಲಾಕುಸುಮ, ವಿಜಯ ರಾಘವೇಂದ್ರ ಹಾಗೂ ನಾಯಕಿ ಪ್ರಿಯಾಂಕ ಜೋಡಿ ಎರಡು ಹಾಡುಗಳನ್ನು ನಿರ್ದೇಶಕ ವಸಂತ್ ಕುಮಾರ್ ನಿರ್ದೇಶನದಂತೆ ನೃತ್ಯ ನಿದೇಶಕ ಭಜರಂಗಿ ಮೋಹನ್ ಚಿತ್ರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಒಂದು ಹಾಡಿನ ಚಿತ್ರೀಕರಣ ಮುಗಿಸಿ ಇದೀಗ ಎರಡನೇ ಹಾಡು “ಹೃದಯದ ಬಾಗಿಲು ತೆರೆದರೆ ನೀನು ಅದರಲಿ ಬೆಚ್ಚಗೆ ಮಲಗಿಕೋ” ಚಿತ್ರೀಕರಣ ಭರ್ಜರಿಯಾಗೇ ನಡೆಸಿದೆ.

ಚಿತ್ರದಲ್ಲಿ ನಾಯಕರಾಗಿ ವಿಜಯರಾಘವೇಂದ್ರ, ನಾಯಕಿಯಾಗಿ ಪ್ರಿಯಾಂಕ , ಬಲರಾಜ್ ವಾಡಿ , ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂದರ್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮಿ, ಸ್ವಾತಿ, ಪ್ರಿಯಾಂಕ್ ತಿಮ್ಮೇಶ ಮತ್ತಿತರು ನಟಿಸಿದ್ದಾರೆ

