Review: "Apayavide Eccharike" that instills fear through horror and suspense

Review: ಹಾರರ್, ಸಸ್ಪೆನ್ಸ್ ಮೂಲಕ ಭಯ ಹುಟ್ಟಿಸುವ ” ಅಪಾಯವಿದೆ ಎಚ್ಚರಿಕೆ” - CineNewsKannada.com

Review: ಹಾರರ್, ಸಸ್ಪೆನ್ಸ್ ಮೂಲಕ ಭಯ ಹುಟ್ಟಿಸುವ ” ಅಪಾಯವಿದೆ ಎಚ್ಚರಿಕೆ”

ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ದೇಶನ : ಅಭಿಜಿತ್ ತೀರ್ಥಹಳ್ಳಿ
ತಾರಾಗಣ: ವಿಕಾಶ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಅಶ್ವಿನ್ ಹಾಸನ್ ಮತ್ತಿತರರು
ರೇಟಿಂಗ್ : *** 3.5 /5

ದುಡಿಮೆ ಇಲ್ಲದೆ ದುಡ್ಡು ಮಾಡುವ ಕನಸು ಕಂಡ ಮೂವರ ಹುಡುಗರ ಸುತ್ತ ನಡೆಯುವ ಸಾಹಸ ಭರಿತ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಅಂಶಗಳುಳ್ಳ ಕುತೂಹಲಭರಿತ ಚಿತ್ರ ” ಅಪಾಯವಿದೆ ಎಚ್ಚರಿಕೆ” ಚಿತ್ರ ತೆರೆಗೆ ಬಂದಿದೆ.

ಉಂಡಾಂಡಿಗುಂಡ ಹುಡುಗರ ನಾನಾ ಅವತಾರ, ಬದುಕಿನಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಪಡುವ ಪಡಿಪಾಟಲು ಅದರಿಂದ ಎದುರಿಸುವ ಸಮಸ್ಯೆಗಳು ಸೇರಿದಂತೆ ಹಲವು ಅಂಶಗಳನ್ನು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಪ್ರೇಕ್ಷಕರನ್ನು ಬೆರಳತುದಿಯಲ್ಲಿ ಕೂರುವಂತೆ ಮಾಡಿದ್ದಾರೆ.

ಈ ಮೂಲಕ ಸಸ್ಪೆನ್ಸ್ ,ಥ್ರಿಲ್ಲರ್ ಕಥೆಯ ಮೂಲಕ ಅಲ್ಲಲ್ಲಿ ಭಯ ಹುಟ್ಟಿಸುತ್ತಲೇ ಮುಂದೇನು ಎನ್ನುವ ಕಾತುರತೆಯನ್ನು ಕಾಪಾಡಿಕೊಂಡಿದ್ದಾರೆ.ಅದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ.

ಮಲೆನಾಡ ಹಳ್ಳಿಯಲ್ಲಿರುವ ಸೂರಿ (ವಿಕಾಶ್ ಉತ್ತಯ್ಯ) ತನ್ನ ಗೆಳೆಯರಾದ ಪೆಟ್ಟಿಗೆ, ಗಾಬರಿ ಟ್ಯಾಲೆಂಟ್ ಜೊತೆ ಊರಲ್ಲಿ ಉಂಡಾಡಿ ಗುಂಡನಂತಿರುವ ಮಂದಿ, ಮೈಬಗ್ಗಿಸದೆ ಸುಲಭವಾಗಿ ಶ್ರೀಮಂತರಾಗುವ ಕನಸು ಕಂಡವರು. ಮನೆ ಬಾಡಿಗೆ, ಮಾಡಿಕೊಂಡ ಸಾಲ ತೀರಿಸಲಾಗದೆ ತಲೆ ಮರೆಸಿಕೊಂಡು ಓಡಾಡುತ್ತಿವರು.,ಆದರೂ ಕಷ್ಟದಲ್ಲಿರುವ ಮಂದಿಗೆ ನೆರವಾಗಬೇಕು ಎನ್ನುವ ಮಾನವೀಯ ಗುಣಉಳ್ಳವರು.

ಮನೆ ಬಾಡಿಗೆಗೆ ಕೊಟ್ಟ ಭಟ್ಟರ ಮಗಳು ರಾಧಾ (ರಾಧಾ ಭಗವತಿ) ಮೇಲೆ ಸೂರಿ ಕಣ್ಣು ಹಾಕುತ್ತಾನೆ, ಆಕೆಯನ್ನು ಒಲೈಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಾನೆ.ದುಡ್ಡು ಮಾಡುವ ಹಠಕ್ಕೆ ಬಿದ್ದು ಸ್ಲಗ್ಲರ್ ಆಂಟೋನಿ ಸ್ನೇಹ ಪಡೆಯಲು ಕವಲೇ ದುರ್ಗ, ಕೋಟೆ ಬೆಟ್ಟದಲ್ಲಿ ಮಾಡದ ಕೆಲಸಗಳಿಲ್ಲ. ಎರಡು ತಲೆ ಹಾವಿಗೆ ಹುಡುಕಾಟ, ಶ್ರೀಗಂಧ ಕಳವು, ಆಮೆ, ರೈಸ್ ಪುಲ್ಲಿಂಗ್ ಹೀಗೆ ನಾನಾ ಪ್ರಯತ್ನ ಕೈಗೂಡುತ್ತಾ ಅಥವಾ ವಿಫಲವಾಗುತ್ತಾ, ಅಲ್ಲಿ ನಡೆಯುವ ಗುಡ್ಡದ ಮೇಲೆ ರಣ ಪ್ರೇತದ ನೆಲೆ ಯಾವುದು. ಅದರ ಹಿಂದಿರುವವರು ಯಾರು ಎನ್ನುವುದು ಚಿತ್ರದ ಕಥನ ಕುತೂಹಲ.

ಚಿತ್ರದ ಬಹುತೇಕ ಭಾಗ ರಾತ್ರಿಯಲ್ಲಿ ನಡೆದಿದೆ. ಈ ಮೂಲಕ ನಿರ್ದೇಶಕ ಅಭಿಜಿತ್ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸ ಮಾಡಿದ್ದಾರೆ. ಮೊದಲರ್ಧದಲ್ಲಿ ಕೆಲವೊಂದಿಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ ಚೆನ್ನಾಗಿತ್ತು. ಇಡೀ ಚಿತ್ರ ಸಾಗುವುದು ದ್ವಿತೀಯಾರ್ಧದಲ್ಲಿ.ಮೊದಲರ್ಧದಲ್ಲಿ ಒಂದಷ್ಟು ಕತ್ತರಿ ಹಾಕಿದ್ದರೆ ಒಳ್ಳೆಯ ಪ್ರಯತ್ನವಾಗುತ್ತಿತ್ತು.

ನಟ ವಿಕಾಶ್ ಉತ್ತಯ್ಯ ನಟನೆಯ ಮೂಲಕ ಸೆಳೆದಿದ್ಧಾರೆ. ಜೊತೆಗೆ ಮುಖವಾಡ ಧರಿಸಿದ ವ್ಯಕ್ತಿಯಾಗಿ ನಟ ಅಶ್ವಿನ್ ಹಾಸನ್ ಗಮನ ಸೆಳೆದಿದ್ದಾರೆ. ಅವರ ಪಾತ್ರ ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ಉಳಿದಂತೆ ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಗೀತ ಛಾಯಾಗ್ರಾಹ ಎರಡೂ ವಿಭಾಗಗಳಲ್ಲಿ ಸುನಾದ್ ಗೌತಮ್ ಗಮನ ಸೆಳೆದಿದ್ಧಾರೆ.

ಇತ್ತೀಚೆಗೆ ಒಂದೇ ಜಾನರ್ ಸಿನಿಮಾ ನೋಡುತ್ತಿದ್ದ ಸಿನಿಮಾ ಪ್ರಿಯರಿಗೆ ಅಪಾಯವಿದೆ ಎಚ್ಚರಿಕೆ ಹೊಸ ಮಾದರಿಯ ಚಿತ್ರ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin