Prabhas starrer "Rajasaab" to release on January 9th

ನಟ ಪ್ರಭಾಸ್ ನಟನೆಯ “ರಾಜಾಸಾಬ್” ಜನವರಿ 9 ರಂದು ಬಿಡುಗಡೆ - CineNewsKannada.com

ನಟ ಪ್ರಭಾಸ್ ನಟನೆಯ “ರಾಜಾಸಾಬ್” ಜನವರಿ 9 ರಂದು ಬಿಡುಗಡೆ

ಪ್ಯಾನ್-ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ‘ರಾಜಾ ಸಾಬ್’ ಇದೇ ಬರುವ ಜನವರಿ 9 ರಂದು ತೆರೆಗೆ ಬರಲು ಸಜ್ಜಾಗಿದೆ. ಕರ್ನಾಟಕದ ವಿತರಣಾ ಹಕ್ಕನ್ನು ಸ್ಯಾಂಡಲ್‍ವುಡ್‍ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಪಡೆದುಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಮಾರುತಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ, ಪ್ರಭಾಸ್ ಅವರನ್ನು ಸಂಪೂರ್ಣ ಹೊಸ ಅವತಾರದಲ್ಲಿ ಪರದೆಯ ಮೇಲೆ ತೋರಿಸಲಿದೆ. ಇದು ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಭರಪೂರ ಮನರಂಜನೆ, ಭಾವನೆ ಹಾಗೂ ಮಾಸ್ ಎಲಿಮೆಂಟ್ಸ್‍ಗಳನ್ನು ಒಳಗೊಂಡಿರಲಿದೆ.

ಕರ್ನಾಟಕದಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಕರ್ನಾಟಕದಲ್ಲಿ ಬಲಿಷ್ಠ ವಿತರಣಾ ಜಾಲ ಹೊಂದಿರುವ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ, ಬಾಕ್ಸ್ ಆಫೀಸ್‍ನಲ್ಲಿ ಸಿನಿಮಾ ದೊಡ್ಡ ಮಟ್ಟದ ಸದ್ದು ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಉಡುಗೊರೆಯಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin