ಡಾಲಿ ಧನಂಜಯ ನಿರ್ಮಾಣದ ಹೊಸ ಚಿತ್ರ “ಹೆಗ್ಗಣ ಮದ್ದು” ಚಿತ್ರೀಕರಣ ಪೂರ್ಣ
“ವಿದ್ಯಾಪತಿ” ಚಿತ್ರದ ಬಳಿಕ ನಟ.ನಿರ್ಮಾಪಕ ಡಾಲಿ ಧನಂಜಯ ತಮ್ಮ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಟರ್ಸ್ ಮೂಲಕ ಸದ್ದುಗದ್ದವಿಲ್ಲದೆ ಮತ್ತೊಂದು ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿದ್ಧಾರೆ. ಅದುವೇ “ ಹೆಗ್ಗಣ ಮುದ್ದು”.

ತಮ್ಮ ಜೊತೆಯಲ್ಲಿರುವ ಮಂದಿಗೆ ಒಂದಿಲ್ಲೊಂದು ಅವಕಾಶ ಕಲ್ಪಿಸುವ ಮೂಲಕ ಬಡವರ ಮಕ್ಕಳು ಬೆಳಿಬೇಕು ಎನ್ನುವ ಉದ್ದೇಶದಿಂದ ಡಾಲಿ ಧನಂಜಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿಕೊಂಡೇ ಬರುತ್ತಿದ್ದಾರೆ, ತಮ್ಮ ನಿರ್ಮಾಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಹಾಗು ಆಪ್ತ ಬಳಗದಲ್ಲಿರುವ ಪೂರ್ಣಚಂದ್ರ ಮೈಸೂರು ಅವರಿಗೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
‘ಹೆಗ್ಗಣ ಮುದ್ದು’ ಎನ್ನುವ ಗಾದೆ ಮಾತನ್ನೇ ಚಿತ್ರದ ಶೀರ್ಷಿಕೆಯಾಗಿಸಿಕೊಂಡು ವಿಭಿನ್ನ ಸಿನಿಮಾವನ್ನು ಜನರ ಮುಂದಿಡಲು ಸದ್ದಿಲ್ಲದೆ ಸಿದ್ದತೆ ನಡೆಸಿದ್ದಾರೆ. ಶೀರ್ಷಿಕೆ ಮೂಲಕವೇ ಚಿತ್ರದ ಕುತೂಹಲ ಕೆರಳಿಸದೆ. ಜೊತೆಗೆ ಚಿತ್ರದ ಪೋಸ್ಟರ್ ಕೂಡ ಚಿತ್ರದ ಬಗೆಗಿನ ನಿರೀಕ್ಷೆ ಮತ್ತು ಕುತೂಹಲವನ್ನು ಹೆಚ್ಚು ಮಾಡಿದೆ.
ನಾಯಕಿಯಾಗಿ ಅದಿತಿ ಪ್ರವೇಶ
ಹೆತ್ತವರಿಗೆ ಹೆಗ್ಗಣ್ಣ ಮುದ್ದು ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ನಾಯಕನಾಗಿ ಕಾಣಿಸಿಕೊಂಡಿದ್ದು ಹಿರಿಯ ಕಲಾವಿದ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಚಿತ್ರದ ಮೂಲಕ ನಾಯಕಿಯಾಗಿ ಬಣ್ಣದ ಜಗತ್ತಿಗೆ ಪರಿಚಯವಾಗುತ್ತಿದ್ದಾರೆ. ಟಗರು ಪಲ್ಯ ಚಿತ್ರದಲ್ಲಿ ಮತ್ತೊಬ್ಬ ಹಿರಿಯ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅವರನ್ನು ಬಣ್ಣದ ಜಗತ್ತಿಗೆ ಪರಿಚಯ ಮಾಡಿದ್ದರು. ಇದೀಗ ಅದಿತಿ ಸರದಿ.
ಈಗಾಗಲೇ ಶಿವಣ್ಣ ಜೊತೆ ವೇದ ಸಿನಿಮಾದಲ್ಲಿ ಮಿಂಚಿರುವ ಅದಿತಿ ಇದೀಗ ಮೊದಲ ಬಾರಿಗೆ ಹೆಗ್ಗಣ ಮುದ್ದು ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಅವಿನಾಶ್ ಬಳೆಕ್ಕಳ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಹೆಗ್ಗಣ ಮುದ್ದು ಪ್ರಸಿದ್ಧ ಗಾದೆ ಮಾತಿನಿಂದ ಸ್ಫೂರ್ತಿ ಪಡೆದು ಇಟ್ಟಿರುವ ಟೈಟಲ್. ಟೈಟಲ್ ನಿಂದನೇ ಸಿನಿಮಾದ ಕಥಾಹಂದರದ ಕುರಿತು ಕುತೂಹಲ ಹೆಚ್ಚಾಗಿದೆ. ಇದೊಂದು ಡ್ರಾಮ ಥ್ರಿಲ್ಲರ್ ಸಿನಿಮಾವಾಗಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಅವಿನಾಶ್, ‘ಸಂಬಂಧಗಳ ಬಗ್ಗೆ ಇರುವ ಸಿನಿಮಾವಾಗಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಅಂತ ಹೇಗೆ ಹೇಳ್ತಿವೋ ಹಾಗೆ ಈ ಸಿನಿಮಾದಲ್ಲಿ ನನಗೆ ನಾನೆ ಮುದ್ದು ಎನ್ನುವುದನ್ನು ಹೇಳಲಾಗಿದೆ’ ಎಂದು ಹೇಳಿದ್ಧಾರೆ
ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಚಿಕೇತ್ ಬಲೆಕ್ಕಳ ಕ್ಯಾಮರಾ ವರ್ಕ್ ಇದೆ. ಸದ್ಯ ಶೂಟಿಂಗ್ ಮುಗಿಸಿ
ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿಯಾಗಿರುವ ಹೆಗ್ಗಣ ಮುದ್ದು ಡಾಲಿ ಪಿಕ್ಚರ್ಸ್ ನಿಂದ ಜೆಸಿ ಸಿನಿಮಾ ಬಿಡುಗಡೆ ಆದ ಬಳಿಕ ತೆರೆಗೆ ಬರುವ ನಿರೀಕ್ಷೆ ಇದೆ

