ಘಾರ್ಗ ಚಿತ್ರದ ಬಂಗಾರಿ ಬುಲ್ ಬುಲ್ ಹಾಡು ಬಿಡುಗಡೆ ಮಾಡಿದ ಡಿಬಾಸ್ ಅಭಿಮಾನಿಗಳು
ಅಶ್ವಿನಿ ರಾಮ್ ಪ್ರಸಾದ್ ನಿರ್ಮಾದಲ್ಲಿ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ನಾಯಕನಾಗಿ ಕಾಣಿಸಿಕೊಂಡಿರುವ “ಘಾರ್ಗ” ಚಿತ್ರದಲ್ಲಿ ವಿಶೇಷ ಹಾಡನ್ನು ಬಳಸಿಕೊಳ್ಳಲಾಗಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಗಜ ಚಿತ್ರದ ಬಂಗಾರಿ ಯಾರೆ ನೀನು ಬುಲ್ ಬುಲ್ ಹಾಡನ್ನು ರೀಮಿಕ್ಸ್ ಮಾಡಲಾಗಿದ್ದು ಡಿಬಾಸ್ ಅಭಿಮಾನಿಗಳಿಗೆ ಅರ್ಪಿಸಲಾಗಿದೆ.

ಕೆ,ಎಂ ಶಶಿಧರ್ ನಿರ್ದೇಶನ ಮಾಡಿರುವ ಚಿತ್ರದ ಹಾಡನ್ನು ದರ್ಶನ್ ಅಭಿಮಾನಿಗಳು ಬಿಡುಗಡೆ ಮಾಡಿ ಶುಭ ಹಾರೈಸುವ ಮೂಲಕ ದರ್ಶನ್ ಅಭಿಮಾನಿಗಳ ಬೆಂಬಲ ಸಿಕ್ಕಿದೆ.
ನಿರ್ದೇಶಕ ಶಶಿಧರ್ ಮಾತನಾಡಿ ನಿರ್ಮಾಪಕರು ಗಜ ಚಿತ್ರದ ಹಾಡು ರೀಮಿಕ್ಸ್ ಮಾಡಲು ಹೇಳಿದರು, ಹಾಡು ಚೆನ್ನಾಗಿ ಬಂದಿದೆ, ನಾನು ಮತ್ತು ನಾಯಕ ಇಬ್ಬರು ಡಿಬಾಸ್ ಅಭಿಮಾನಿಗಳು ದರ್ಶನ್ ಅಭಿಮಾನಿಗ¼ಳಿಗೆ ಚಿತ್ರ ಇಷ್ಟವಾಗುತ್ತದೆ.ನಾಯಕನಿಗೆ 3 ಗೆಟಪ್‍ಗಳಿವೆ. ಈಟ್ರೈಲರ್ ನೋಡಿದಾಗ ನಿಮಗೆಲ್ಲ ನಂಬಿಕೆ ಬಂದಿರುತ್ತೆ, ಸಿನಿಮಾ ಕೂಡ ಅದೇ ಥರ ಮಾಡಿದ್ದೇನೆ. ನೀವೆಲ್ಲ ಸಿನಿಮಾ ನೋಡಿ, ನಂಬರ್ ಕೊಡ್ತೀನಿ, ಚೆನ್ನಾಗಿದ್ರೆ, ಚೆನ್ನಾಗಿಲ್ಲ ಅಂದರೆ ಕಾಲ್ ಮಾಡಿ ಎಂದರು.
ನಾಯಕ ಅರುಣ್ ಮಾತನಾಡಿ ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್. ನಾನು ಬಣ್ಣ ಹಚ್ಚುವ ಮೊದಲೇ ಕಲರಿಫೈಟ್ಸ್, ಆಕ್ಷನ್, ಡಾನ್ಸ್ ಎಲ್ಲವನ್ನೂ ಕಲಿತು ಬಂದಿದ್ದೇನೆ , ಗಜ ಚಿತ್ರ ಹಾಡು ಬಳಸಿಕೊಂಡಿದ್ದೇವೆ ಎಂದು ಹೇಳಿದರು
ನಿರ್ಮಾಪಕ ಅಶ್ವಿನಿ ರಾಮ್‍ಪ್ರಸಾದ್ ಮಾತನಾಡಿ ಚಿತ್ರ ಚೆನ್ನಾಗಿ ಮೂಡಿಬಂದಿದೆ ಹೆಚ್ಚು ಚಿತ್ರಮಂದಿರಲದಲಿ ಬಿಡುಗಡೆ ಮಾಡುತ್ತಿಲ್ಲ . ಚಿತ್ರ ಇಡಿಸಲಿದೆ ಎಂದರು
ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ.

