ಪುತ್ರ ಪ್ರಣಾಮ್ ಹೊಸ ಚಿತ “ಎಂಜಿಆರ್ “ಶೀರ್ಷಿಕೆ ಬಿಡುಗಡೆ ಮಾಡಿದ ದೇವರಾಜ್
ಡೈನಾಮಿಕ್ ವೆಂಚರ್ಸ್ ಹಾಗೂ ಪುರಾತನ ಫಿಲಂ ಪೆÇ್ರಡಕ್ಷನ್ಸ್ ಸಹಯೋಗದಲ್ಲಿ ನೂತನ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಪ್ರಜ್ವಲ್ ದೇವರಾಜ್ ಚಿತ್ರದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ. “ಎಂಜಿಆರ್” ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ

ಹಿರಿಯನಟ ದೇವರಾಜ್ ಮಾತನಾಡಿ ಚಿತ್ರರಂಗಕ್ಕೆ ಬಂದು 30 ವರ್ಷಗಳಾದ ಮೇಲೆ ನಿರ್ಮಾಪಕನಾದೆ. ಈಗ ನನ್ನ ಮಗ 10ರಿಂದ 12 ವರ್ಷಗಳಿಗೇ ನಿರ್ಮಾಪಕನಾಗಿದ್ದಾನೆ. ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಇದರಲ್ಲೇ ಏನಾದರೂ ಮಾಡಬೇಕೆಂಬ ತುಡಿತವಿರುತ್ತದೆ ಪೆÇೀಸ್ಟರ್ ನಲ್ಲಿ ಪ್ರಣಾಮ್ ಲುಕ್ ನೋಡಿ ನನಗೇ ಆಶ್ಚರ್ಯವಾಯ್ತು. ಮಾಸ್ಲುಕ್ ನಲ್ಲಿ ಕಾಣಿಸಿಕೊಂಡಿದ್ದಾನೆ. ಚರಣರಾಜ್ ಇಷ್ಟವಾದ ಸಂಗೀತ ನಿರ್ದೇಶಕ, ಅವರ ಹಾಡುಗಳು ನಮ್ಮ ಸೊಗಡನ್ನು ಬಿಟ್ಟು ಹೋಗುವುದಿಲ್ಲ ಎಂದರು
ನಿರ್ದೇಶಕ ಶ್ರೀಕಾಂತ್ ಹುಣಸೂರು ಮಾತನಾಡಿ ಪ್ರಣಾಂ ಜತೆ ಮುತ್ತಣ್ಣ ನಂತರ ಎರಡನೇ ಚಿತ್ರ. ಎಂಜಿಆರ್ ಅಂದ್ರೆ ಏನಂತ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಪ್ರಣಾಮ್ ಅವರನ್ನು ಬೇರೆ ಥರ ತೋರಿಸಬೇಕೆಂದು ಟ್ರೈ ಮಾಡಿದ್ದೇವೆ. ಟೈಟಲ್ ಸಮಸ್ಯೆಆಗಬಹುದು, ಆದರೆ ಕಾನ್ಸೆಪ್ಟ್ ಒಳ್ಳೆಯ ರೀತಿಯಲ್ಲೇ ಇರುತ್ತದೆ ಎಂದು ಹೇಳಿದರು
ನಿರ್ಮಾಪಕ ಪ್ರಜ್ವಲ್ ಮಾತನಾಡಿ ಸಿನಿಮಾ ಪ್ರಣಾಂ ಇರುತ್ತಾನೆ. ಹಿಂದೆ ನಿಂತು ಸಪೆÇೀರ್ಟ್ ಮಾಡುತ್ತೇವೆ. 2005ರಲ್ಲಿ ನಡೆವಂಥ ಕಥೆಯಿದು. ಮಾರ್ಚ್ ಎಂಡ್ ಅಥವಾ ಯುಗಾದಿ ವೇಳೆಗೆ ಮುಹೂರ್ತ ಮಾಡುತ್ತಿದ್ದೇವೆ. ನಮ್ಮ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳಿಗೂ ಅವಕಾಶ ನೀಡುತ್ತೇವೆ ಎಂದರು.

ನಾಯಕ ಪ್ರಣಾಂ ಮಾತನಾಡಿ ಸಿನಿಮಾಗೆ ನಮ್ಮಣ್ಣ ಪೆÇ್ರಡ್ಯೂಸರ್ ಆಗಿರುವುದಕ್ಕೆ ಖುಷಿಯಾಗ್ತಿದೆ. ಎಂಜಿಆರ್ ನಿಂದ ಪ್ರಣಾಂ ಹೊಸ ಅಧ್ಯಾಯ ಶುರು ಆಗ್ತಿದೆ ಆತ ಅಳಿಸ್ತಾನೆ, ನಗಿಸ್ತಾನೆ, ಫೈಟ್ ಮಾಡ್ತಾನೆ ಎಂದು ಹೇಳಿದರು

ಸ್ಕೇಟಿಂಗ ಕೃಷ್ಣ ಛಾಯಾಗ್ರಹಣ, ಚರಣರಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

