First look of Ravi Gowda's 'I'm God' released

ನಾಯಕ ರವಿ ಗೌಡ ನಟನೆಯ I’m god’ಚಿತ್ರದ ಹಾಡು ಬಿಡುಗಡೆ - CineNewsKannada.com

ನಾಯಕ ರವಿ ಗೌಡ ನಟನೆಯ I’m god’ಚಿತ್ರದ ಹಾಡು ಬಿಡುಗಡೆ

I’m god’ ಅಂತ ತೆರೆಮೇಲೆ ಹೀರೋ ಆಗಿ ಮಿಂಚಲು ರೆಡಿಯಾಗಿದ್ದಾರೆ ನಾಯಕ ರವಿ ಗೌಡ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆ ಮಾಡಿ ಸಿನಿಮಾತಂಡಕ್ಕೆ ಶುಭಕೋರಿದ್ದರು. ಇದೀಗ I’m god’ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

I’m god’ ಸಿನಿಮಾದಲ್ಲಿ ರವಿ ಗೌಡ ನಾಯಕನಾಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜಬಾವ್ದಾರಿ ಹೊತ್ತಿದ್ದಾರೆ,ಈ ಮೂಲಕ ತಾಬೊಬ್ಬ ಪ್ರತಿಭಾನ್ವಿತ ಕಲಾವಿದ, ತಂತ್ರಜ್ಞ ಎನ್ನುವುದನ್ನು ನಿರೂಪಿಸಿದ್ದಾರೆ

ಅಂದಹಾಗೆ ರವಿ ಅವರಿಗೆ ಇದು ಮೊದಲ ಸಿನಿಮಾವೇನು ಅಲ್ಲ..ಈ ಮೊದಲು ಧ್ವಜ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೀಗ I’m god’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ಹೀರೋ ಆಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ದೇಶಕರಾಗಿಯೂ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ.

ಸದ್ಯ I’m god’ ಸಿನಿಮಾದಿಂದ ಮೊದಲ ಹಾಡು ಬಿಡುಗಡೆ ಆಗಿದೆ. ಈ ಮೂಲಕ ಸಿನಿಮಾತಂಡ ಚಿತ್ರೀಕರಣ ಮುಗಿಸಿ ಪ್ರಮೋಷನ್ ಕೆಲಸ ಕೆಲಸವನ್ನು ಶುರು ಮಾಡಿಕೊಂಡಿದೆ. ಸದ್ಯ ಬಿಡುಗಡೆ ಆಗಿರುವ ಹಾಡನ್ನು ಯೂತ್ ಅಟ್ಯ್ರಾಕ್ಷನ್ ಸಂಚಿತ್ ಹೆಗ್ಡೆ ಹಾಡಿದ್ದು ಯುವಕರ ಗಮನ ಸೆಳೆಯುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯವಿದೆ.

ನಾಯಕ ಹಾಗೂ ನಿರ್ದೇಶಕ ರವಿ ಗೌಡ ಮಾತನಾಡಿ ಈ ಹಾಡಿನಲ್ಲಿ ಒಂದು ಹುಡುಗಿ ಮೇಲೆ ಲವ್ ಆದಾ ನಂತರ ಏನೆಲ್ಲ ಅನುಭವಗಳಾಗುತ್ತೆ ಎನ್ನುವುದು ತೋರಿಸಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಜೊತೆಗೆ ಸಂಚಿತ್ ಹೆಗ್ಡೆ ಧ್ವನಿ ಈ ಹಾಡಿಗೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿದೆ’, ಖುಷಿ ಹಾಗೂ ಭಯ ಎಲ್ಲಾ ರೀತಿಯ ಅನುವಾಗಿದೆ. ಒಂದೊಂದು ಸಾರಿ ಇದು ಬೇಕಿತ್ತ ಅಂತ ಅನಿಸಿತ್ತು. ಆದರೀಗ ನೋಡಿದ್ರೆ ಖುಷಿಯಾಗುತ್ತೆ’ ಎಂದು ಹೇಳಿದರು.

I’m god’ ಈಗಾಗಲೇ ಶೂಟಿಂಗ್ ಮುಗಿಸಿದ್ದು ರಿಲೀಸ್‍ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ I’m god’ ಸಿನಿಮಾತಂಡ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿಯಾಗಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ ಎಂದು ವಿಶ್ವಾಸ ಹೊರಹಾಕಿದ್ದಾರೆ

I’m god’ ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ರವಿ ಗೌಡ ಅವರಿಗೆ ನಾಯಕಿಯಾಗಿ ವಿತೇಜಾ ಪರೀಕ್ ಕಾಣಿಸಿಕೊಂಡಿದ್ದಾರೆ. ಇವರಿಗೆ ಮೊದಲ ಸಿನಿಮಾವಾಗಿದೆ. ಇನ್ನು ಉಳಿದಂತೆ ಸಿನಿಮಾದಲ್ಲಿ ರವಿಶಂಕರ್, ಹಿರಿಯ ನಟ ಅವಿನಾಶ್, ಅರುಣ ಬಾಲರಾಜ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ..

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin