ಸಂಗೀತಮಯ ಪ್ರೇಮಕಥೆಯ ಚಿತ್ರ “ಪೀಟರ್” ಏಪ್ರಿಲ್ 10ರಂದು ಬಿಡುಗಡೆ
ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ಬಿರುಬೇಸಿಗೆಯಲ್ಲಿ ಕನ್ನಡ ಪ್ರೇಕ್ಷಕರ ಕಣ್ಮನಕ್ಕೆ ತಂಪೆರೆಯಲು ಸಂಗೀತಮಯ ಪ್ರೇಮ ಕಥೆಯ ಚಿತ್ರ “ಪೀಟರ್” ತೆರೆಗೆ ಬರಲು ಸಜ್ಜಾಗಿದೆ, ಚಿತ್ರ ಏಪ್ರಿಲ್ 10 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ದತೆ ನಡೆಸಿದೆ

ಮೂರು ವಿಶಿಷ್ಠ ಹಾಡುಗಳಿಂದ ಗಮನ ಸೆಳೆದಿರುವ ಪೀಟರ್, ಟೀಸರ್ ನಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷವಾದ ಕುತೂಹಲ ಮೂಡಿಸಿದೆ. ಚಿತ್ರ ಬಿಡುಡಗೆ ಹಿನ್ನೆಲೆಯಲ್ಲಿ ಹಾಡುಗಳ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ
ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ಪೀಟರ್ ಸಿನಿಮಾದ ಪ್ರತಿ ಹಂತದಲ್ಲಿ, ಪ್ರತಿ ಕಂಟೆಂಟ್ ನಲ್ಲಿಯೂ ಹೊಸತನ ಕೊಟ್ಟಿದ್ದೇವೆ. ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಅನುಭವಿಸಲೇಬೇಕು. ನಾಲ್ಕು ಜಾನರ್ ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ಪೀಟರ್ ಸಿನಿಮಾದ ಪ್ರತಿ ಕಂಟೆಂಟ್, ಹಾಡು, ಟೀಸರ್ ಎಲ್ಲವೂ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದ್ರಾಬಾದ್ ನಲ್ಲಿಯೂ ಚಿತ್ರದ ಪ್ರಚಾರ ಕೆಲಸ ನಡೆಯುತ್ತಿದೆ. ಏಪ್ರಿಲ್ 10ಕ್ಕೆ ರಾಜ್ಯದಲ್ಲಿ ಬಿಡುಗಡೆಯಾದರೆ , ಇನ್ನೂ ಎರಡು ವಾರದ ಬಳಿಕ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದರು
ನಾಯಕ ರಾಜೇಶ್ ಧ್ರುವ ಮಾತನಾಡಿ, ಪೀಟರ್ ನನ್ನ ಎರಡನೇ ಸಿನಿಮಾ. ಎಮೋಷನಲ್ ಜರ್ನಿ ಜೊತೆಗೆ ಒಂದೊಳ್ಳೆ ಕಲಾವಿದರು ಹಾಗೂ ಒಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡಿದ ಖುಷಿ ಇದೆ. ಮೂರು ವರ್ಷ ಚಿತ್ರಕ್ಕಾಗಿ ಕೆಲಸ ಮಾಡಿ ಅಚ್ಚುಕಟ್ಟಾಗಿ ಔಟ್ ಫುಟ್ ತಂದಿದ್ದಾರೆ. ರವಿ ಹಾಗೂ ರಾಕೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ, ಪೀಟರ್ ರಾಕ್ಷಸನೋ ಹೌದು, ರಕ್ಷಕನೂ ಹೌದು. ಅವನ ಜೀವನದಲ್ಲಿ ಚೆಂಡೆ ತುಂಬಾ ಮುಖ್ಯವಾಗಿರುತ್ತದೆ. ರಕ್ಷಣೆಗೆ ಹೇಗೆ ಮುಂದಾಗ್ತಾನೆ. ಹಾಗೂ ಅವನ ವೈಯಕ್ತಿಕ ಜೀವನದ ರಕ್ಷಣೆಗೆ ರಾಕ್ಷಸ ಆಗುತ್ತಾನೆ ಎನ್ನುವುದು ಚಿತ್ರದ ತಿರುಗಳು ಎಂದರು

ಪೀಟರ್ ಚಿತ್ರದಲ್ಲಿ ರಾಜೇಶ್ ಧ್ರುವಾ, ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ಇನ್ನುಳಿದಂತೆ ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್ , ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್ , ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ತಾರಾಗಣದಲ್ಲಿದ್ದಾರೆ.
ದೂರದರ್ಶನ ಸಿನಿಮಾ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ ಪೀಟರ್ ಚಿತ್ರದ ಡೈರೆಕ್ಟರ್. ಚೊಚ್ಚಲ ಸಿನಿಮಾದಲ್ಲೇ ಪ್ರಶಂಸೆ ಗಳಿಸಿದ್ದ ಸುಕೇಶ್, ಈ ಸಲ ಮತ್ತೊಂದು ಮಣ್ಣಿನ ಸೊಗಡಿನ ಕಥೆ ಎಳೆಯನ್ನಾಗಿಸಿಕೊಂಡು, ಕೌತುಕತೆ ತುಂಬಿದ ರೋಚಕ ಸಸ್ಪೆನ್ಸ್ ಇರೋ ಪ್ರೇಮಕಥೆಯನ್ನ ಪ್ರಸ್ತುತ ಪಡಿಸುವ ಪ್ರಯತ್ನ ಮಾಡಿದಂತಿದೆ.

ರಿತ್ವಿಕ್ ಮುರಳಿಧರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ವಿಶೇಷವಾಗಿ ಸುಂದರಿ .. ಸುಂದರಿ… ರೊಮ್ಯಾಂಟಿಕ್ ಹಾಡು ಟ್ರೆಂಡ್ ನಲ್ಲಿದೆ.. ಸೈರಾಟ್ ಖ್ಯಾತಿಯ ಅಜಯ್ ಗೊಗಾವಲೆ ಹಾಡಿರೋ ಜೋಷ್ ಕಿ ಜವಾನಿ ಫ್ರೆಂಡ್ ಶಿಪ್ ಹಾಡು ಗಮನ ಸೆಳೆಯುತ್ತಿದೆ. ಇನ್ನೂ ತಾಯಿಯಾದೆಯಾ ಹಾಡು ಭಾವುಕರನ್ನಾಗಿಸ್ತಿದೆ.
ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನಡೆಯುವ ಈ ಕಥೆಯನ್ನ ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣದಲ್ಲಿ ಸೆರೆಹಿಡಿಯಲಾಗಿದ್ದು, ನವೀನ್ ಶೆಟ್ಟಿ ಸಂಕಲ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಚಿತ್ರವನ್ನ ವಿತರಿಸಲು ಮುಂದೆ ಬಂದಿದ್ದು, ಏಪ್ರಿಲ್ 10ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಮಾಡ್ತಿದೆ.

