ಅವಿವಾ ಜೊತೆ ಹೊಸ ಇನ್ಸಿಂಗ್ ಆರಂಭಿಸಿದ ಅಭಿಷೇಕ್ ಅಂಬರೀಷ್

ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಗುರುಹಿರಿಯರ ಸಮ್ಮುಖದಲ್ಲಿ ಅವೀವಾ ಬಿದ್ದಪ್ಪ ಅವರನ್ನು ಕೈಹಿಡಿಯು ಮೂಲಕ ಹೊಸ ಇನ್ಸಿಂಗ್ ಆರಂಭಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಭಿಷೇಕ್-ಅವೀವಾ ಮದುವೆ ಸಮಾರಂಭದಲ್ಲಿ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮಿಳು ಚಿತ್ರರಂಗದದ ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ನಟ ಮೋಹನ್ ಬಾಬು ಮಿಂಚು ಮನೋಜ್ ನಟ ಯಶ್, ದರ್ಶನ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಟಿ ಮೇಘನಾ ರಾಜ್, ಹಿರಿಯ ನಟ ಸುಂದರ್ ರಾಜ್,ಕ್ರಿಕೆಟಿಗ ಅನಿಲ್ ಕುಂಬ್ಳೆ ದಂಪತಿ ಸೇರಿದಂತೆ ಆಪ್ತರು, ಸಿನಿಮಾ ರಂಗದ ಪ್ರಮುಖರು ಭಾಗಿಯಾಗಿ ನವ ದಂಪತಿಗೆ ಶುಭ ಕೋರಿದರು.

ಅಂಬರೀಷ್ ಅವರ ಆಪ್ತರಾಗಿರುವ ರಜನಿಕಾಂತ್, ಮೋಹನ್ ಬಾಬು, ಡಾ.ನರೇಶ್, ಪವಿತ್ರಾ ಲೋಕೇಶ್ ಸೇರಿದಂತೆ ಪಾಲ್ಗೊಂಡು ಅಭಿಷೇಕ್ ಮತ್ತು ಅವೀವಾ ಬಿದ್ದಪ್ಪ ಅವರ ಹೊಸ ಬಾಳಿಗೆ ಶುಭ ಹಾರೈಸಿದರು.

ಡಾ.ನರೇಶ್ ಮಾತನಾಡಿ, ರೆಬೆಲ್ ಸ್ಟಾರ್ ಅಂಬರೀಷ್ ಅವರು ನನಗೆ ದೊಡ್ಡಣ್ಣ ಇದ್ದ ಹಾಗೆ ಅವರ ಪುತ್ರನ ಮದುವೆಯಲ್ಲಿ ಭಾಘಿಯಾಗಿರುವುದು ಖುಷಿಕೊಟ್ಟಿದೆ. ಅಭೀಷೇಕ್- ಅವೀವಾ ದಂಪತಿಗೆ ಒಳ್ಳೆಯದಾಗಲಿ ಎಂದ ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ಸ್ನೇಹಿತರಿದ್ದಾರೆ ಎಂದರು.

ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಹಿರಿಯ ಕಲಾವಿದ ದೊಡ್ಡಣ್ಣ ಸೇರಿದಂತೆ ಮತ್ತಿತರರು ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಮದುವೆಯ ಕಾರ್ಯದಲ್ಲಿ ಮೊದಲಿನಿಂದಲೂ ನೆರವಾಗಿದ್ದು ಇಂದೂ ಕೂಡ ಗಣ್ಯರ ಆಗಮನ ಸೇರಿದಂತೆ ಇನ್ನಿತರೆ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರರಂಗದ ಗಣ್ಯರಿಗಾಗಿ ನಾಡಿದ್ದು ಬುದವಾರ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ದಂಪತಿಯ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಚಿತ್ರರಂಗದ ಪ್ರಮುಖರು ಭಾಗಿಯಾಗುವ ನಿರೀಕ್ಷೆ ಇದೆ.

ಆರತಕ್ಷತೆ ಬಳಿಕ ಜೂನ್ 11 ರಂದು ಮಂಡ್ಯದಲ್ಲಿ ಅಭಿಮಾನಿಗಳಿಗಾಗಿ ಬೀಗರ ಊಟ ಹಮ್ಮಿಕೊಳ್ಳಲಾಗಿದ್ದು ಲಕ್ಷಾಂತರ ಮಂದಿ ಅಭಿಮಾನಿಗಳು ಭಾಗಿಯಾಗು ಸಾದ್ಯತೆ ಇದೆ.