Abhishek Ambarish's "padavipoorva Trailer Unveiled

ಅಭಿಷೇಕ್ ಅಂಬರೀಶ್ ರಿಂದ “ಪದವಿಪೂರ್ವ” ಚಿತ್ರದ ಟ್ರೇಲರ್ ಅನಾವರಣ - CineNewsKannada.com

ಅಭಿಷೇಕ್ ಅಂಬರೀಶ್ ರಿಂದ  “ಪದವಿಪೂರ್ವ” ಚಿತ್ರದ ಟ್ರೇಲರ್ ಅನಾವರಣ

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಹೊಸಪ್ರತಿಭೆಗಳ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ “ಪದವಿಪೂರ್ವ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಉತ್ಸಾಹ ನೋಡಿದರೆ ಖುಷಿಯಾಗುತ್ತಿದೆ. ಟ್ರೇಲರ್ ಚೆನ್ನಾಗಿದೆ. ಅರ್ಜುನ್ ಜನ್ಯ‌ ಅವರ ಸಂಗೀತ ನಿರ್ದೇಶನ ಹಾಗೂ ‌ರೀರೆಕಾರ್ಡಿಂಗ್ ಅದ್ಭುತವಾಗಿದೆ. ಎಲ್ಲಾ ಕಲಾವಿದರ ಅಭಿನಯ ಅಮೋಘವಾಗಿದೆ. ನಿರ್ದೇಶಕ ಹರಿಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದರು ಅಭಿಷೇಕ್ ಅಂಬರೀಶ್.

ಈ ಚಿತ್ರದ ಟ್ರೇಲರ್ ಅಭಿಷೇಕ್ ಅವರಿಂದ ಬಿಡುಗಡೆ ಮಾಡಿಸಬೇಕೆಂಬುದು ನಾನು ಸೇರಿದಂತೆ ನಮ್ಮ ಚಿತ್ರತಂಡದ ಆಸೆಯಾಗಿತ್ತು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಭಿಷೇಕ್ ಅವರಿಗೆ ಧನ್ಯವಾದ. ಈ ಹೊಸತಂಡ, ಹೊಸತರಹದ ಪ್ರಮೋಷನ್ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಡಿಸೆಂಬರ್ 30 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು ಯೋಗರಾಜ್ ಭಟ್.

ಅಭಿಷೇಕ್ ಅಂಬರೀಶ್ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಸಂತೋಷವಾಗಿದೆ. ಪ್ರಮೋಷನ್ ಗಾಗಿ ರಾಜ್ಯದ ಬೇರೆಬೇರೆ ಊರುಗಳಿಗೆ ಹೋಗುತ್ತಿದ್ದೇವೆ. ಹೋದ ಕಡೆ ಎಲ್ಲಾ ನಮ್ಮನ್ನು ಗುರುತಿಸಿ, ಚಿತ್ರದ ಹಾಡುಗಳು ಹಾಗೂ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಎಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಾಯಕ ಪೃಥ್ವಿ ಶಾಮನೂರು.

ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದೇನೆ. ಇದೇ ಮೂವತ್ತರಂದು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಎಂದರು ನಿರ್ದೇಶಕ ಹರಿಪ್ರಸಾದ್ ಜಯಣ್ಣ

ನಾಯಕಿ ಅಂಜಲಿ ಅನೀಶ್, ಯಶಾ ಶಿವಕುಮಾರ್, ಛಾಯಾಗ್ರಾಹಕ ಸಂತೋಷ ರೈ ಪಾತಾಜೆ, ನೃತ್ಯ ನಿರ್ದೇಶಕ ಧನಂಜಯ್ ಹಾಗೂ ನಿರ್ಮಾಪಕ ರವಿ ಶಾಮನೂರು “ಪದವಿಪೂರ್ವ” ದ ಬಗ್ಗೆ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin