Action, Thrill, Fury All Double: The trailer of the record-breaking film 'Salar'

ಆಕ್ಷನ್, ಥ್ರಿಲ್, ಕ್ರೋಧ ಎಲ್ಲವೂ ದುಪ್ಪಟ್ಟು : ದಾಖಲೆ ಬರೆದ `ಸಲಾರ್’ ಚಿತ್ರದ ಟ್ರೇಲರ್ - CineNewsKannada.com

ಆಕ್ಷನ್, ಥ್ರಿಲ್, ಕ್ರೋಧ ಎಲ್ಲವೂ ದುಪ್ಪಟ್ಟು : ದಾಖಲೆ ಬರೆದ `ಸಲಾರ್’ ಚಿತ್ರದ ಟ್ರೇಲರ್

ಹೊಂಬಾಳೆ ಫಿಲಂಸ್ ನಿರ್ಮಾಣದ `ಸಲಾರ್: ಪಾರ್ಟ್ 1, ಸೀಸ್ ಫೈರ್’ ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಗಿ ದಾಖಲೆ ಬರೆದಿದೆ, 116 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಎಲ್ಲಾ ಭಾಷೆಗಳಲ್ಲಿ ಧೂಳ್ ಎಬ್ಬಿಸಿದೆ.

ಸಲಾರ್: ಪಾರ್ಟ್ 1: ಸೀಸ್‍ಫೈರ್' ಚಿತ್ರದ ಟೀಸರ್ ನೋಡಿ ಪ್ರೇಕ್ಷಕರು ಏನು ಊಹಿಸಿದ್ದರೋ, ಅದಕ್ಕಿಂತ ದುಪ್ಪಟ್ಟಾದ ಆಕ್ಷನ್, ಥ್ರಿಲ್ ಮತ್ತು ಕ್ರೋಧ ಈ ಟ್ರೇಲರ್ ನಲ್ಲಿದ್ದು,ಸಲಾರ್’ ಜಗತ್ತನ್ನು ಮತ್ತು ಅಲ್ಲಿನ ಪಾತ್ರಧಾರಿಗಳನ್ನು ಪರಿಚಯಿಸುವುದರ ಜೊತೆಗೆ ಚಿತ್ರದ ಮೇಲೆ ನಿರೀಕ್ಷೆಗಳನ್ನು ಹೆಚ್ಚುವಂತೆ ಮಾಡಿದೆ.

ಆಕ್ಷನ್ ಮತ್ತು ಮಾಸ್ ಹೀರೋ ಆಗಿ ಜನಪ್ರಿಯರಾಗಿರುವ ಪ್ರಭಾಸ್, ಈ ಚಿತ್ರದಲ್ಲಿ ಇನ್ನಷ್ಟು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಇಡೀ ಚಿತ್ರ ಸಖತ್ ಮಾಸ್ ಚಿತ್ರವಾಗಿ ಹೊರಹೊಮ್ಮಿದೆ.

ಭಾರತೀಯ ಚಿತ್ರರಂಗದ ಮೂರು ಜನಪ್ರಿಯ ಹೆಸರುಗಳಾದ ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಒಟ್ಟಾಗಿ ಕೈಜೋಡಿಸಿದರೆ ಏನಾಗಬಹುದೋ ಅದೇ `ಸಲಾರ್’ ಚಿತ್ರದಲ್ಲೂ ಆಗಿದೆ. ಇದೊಂದು ಅದ್ಭುತ ದೃಶ್ಯವೈಭವವಾಗಿದ್ದು, ಅತೀ ದೊಡ್ಡ ಆಕ್ಷನ್ ಚಿತ್ರವಾಗಿ ಹೊರಹೊಮ್ಮಿದೆ.

ಸಲಾರ್' ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಹೊಂಬಾಳೆ ಫಿಲಂಸ್‍ನಡಿ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಡಿ.22ರಂದುಸಲಾರ್: ಪಾರ್ಟ್ 1: ಸೀಸ್‍ಫೈರ್’ ಜಗತ್ತಿನಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin