ನಟ ಭುವನ್ ಪೊನ್ನಣ್ಣ ಕಟೀಲು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ
ಕನ್ನಡ ಸಿನಿಮಾರಂಗದ ಉದಯೋನ್ಮುಖ ನಾಯಕ ಭುವನ್ ಪೊನ್ನಣ್ಣ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸಿನಿಮಾ, ರಿಯಾಲಿಟಿ ಶೋ , ನಿರ್ಮಾಣ ಹೀಗೆ ಸಾಕಷ್ಟು ವಿಚಾರದಲ್ಲಿ ಬ್ಯುಸಿ ಆಗಿರುವ ಯುವ ನಟ ಇತರೆ ನಟರಗಿಂತ ಭಿನ್ನ ಎನ್ನುವುದನ್ನು ನಿರೂಪಿಸುತ್ತಾ ಬಂದಿದ್ದಾರೆ

ಆಧುನಿಕತೆಗೆ ಒಗ್ಗಿಕೊಳ್ಳುವ ಜೊತೆ ಜೊತೆಯಲ್ಲಿಯೇ
ಸಂಪ್ರದಾಯ ಸಂಸ್ಕೃತಿ ಪಾಲಿಸುವಲ್ಲಿ ಸದಾ ಮುಂದೆ. ಸದ್ಯ ಹುಟ್ಟುಹಬ್ಬದ ಖುಷಿಯಲ್ಲಿರುವ ಭುವನ್ ಹುಟ್ಟುಹಬ್ಬಕ್ಕೆ ತಪ್ಪದೇ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯುವುದು ಸಾಮಾನ್ಯ
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಜೀವನದಲ್ಲಿ ಮಹತ್ವದ ಬದಲಾವಣೆ ಆಗಿದೆ ಎನ್ನುವ ನಂಬಿಕೆ ಅವರದು..ಸಿನಿಮಾ ಅವಕಾಶಗಳು ನಿರ್ಮಾಣ ಮಾಡಲು ಆಗಿದ್ದು ಕೂಡ ದೇವಿ ದರ್ಶನದ ನಂತರವೇ ಎಂದಿದ್ದಾರೆ ಭುವನ್.

ಮದುವೆ ಆದ ನಂತರ ಕಟೀಲು ದುರ್ಗಾ ಪರಮೇಶ್ವರಿ ಬಳಿ ನನಗೆ ಮಗಳ ಹುಟ್ಟಬೇಕು ಅಂತ ಬೇಡಿಕೊಂಡಿದ್ದರಂತೆ ಹಾಗಾಗಿ ಮಗಳನ್ನೂ ಕೂಡ ಮೊದಲು ಕರೆದುಕೂಂಡು ಹೋಗಿದ್ದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ…ಹಾಗಾಗಿ ಭುವನ್ ಪೊನಣ್ಣ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಕುಟುಂಬ ಸಮೇತರಾಗಿ ಈ ದೇವಸ್ಥಾನಕ್ಕೆ ಬೇಟಿಕೊಟ್ಟು ದೇವರ ದರ್ಶನ ಪಡೆಯುತ್ತಾರೆ…
ಅದರಂತೆ ಈ ವರ್ಷವೂ ಫ್ಯಾಮಿಲಿ ಜೊತೆ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ…ಸದ್ಯ ಭುವನ್ ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಅಭಿನಯ ಮಾಡುತ್ತಿದ್ದು ಅದರ ಜೊತೆಗೆ ಒಂದು ಸಿನಿಮಾವನ್ನ ನಿರ್ಮಾಣ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ.

