ನಾಯಕ ನಿರಂಜನ್ ಶೆಟ್ಟಿ ಹುಟ್ಟುಹಬ್ಬ : “31 ಡೇಸ್” ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆ
ನಾಗವೇಣಿ. ಓ. ಶೆಟ್ಟಿ ರವರ ನಿರ್ಮಾಣದಲ್ಲಿ ತಯರಾಗುತ್ತಿರುವ “31 ಡೇಸ್” ಸಿನಿಮಾದ ನಾಯಕರಾಗಿ ನಿರಂಜನ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ನಿರಂಜನ್ ಶೆಟ್ಟಿ ರವರ ಹುಟ್ಟು ಹಬ್ಬದ ಪ್ರಯುಕ್ತ “31 ಡೇಸ್” ” ಸಿನಿಮಾದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ
ಸದ್ಯ ಈ ಚಿತ್ರ ರೀ ರೆಕಾರ್ಡಿಂಗ್ ಹಂತದಲ್ಲಿದ್ದು ಜೂನ್ ಅಥವಾ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ನಾಯಕ ನಟರಾಗಿ ನಿರಂಜನ್ ಶೆಟ್ಟಿ ಅವರು ಅಭಿನಯಿಸಿದ್ದು, ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ. ಅಲ್ಲದೆ ಹೆಸರಾಂತ ನಟ, ನಟಿಯರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“”31 ಡೇಸ್” ಸಿನಿಮಾ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ ಪ್ರೇಮಕಥೆಯ ಚಿತ್ರ ಇದಾಗಿದ್ದು 31 ದಿನಗಳಲ್ಲಿ ನಡೆಯುವ ಕಥೆ. ರಾಜ ರವಿಕುಮಾರ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ವಿ. ಮನೋಹರ್ ರವರ ಸಂಗೀತ ನಿರ್ದೇಶನ “”31 ಡೇಸ್” ಚಿತ್ರಕ್ಕಿದೆ. ಇದು ವಿ.ಮನೋಹರ್ ಸಂಗೀತ ನಿರ್ದೇಶನದ 150 ನೇ ಸಿನಿಮಾ ಆಗಿದೆ. ವಿನುತ್. ಏ ಛಾಯಾಗ್ರಹಣ, ಧನು ಕುಮಾರ್ ರವರ ನೃತ್ಯ ನಿರ್ದೇಶನ, ರವಿತೇಜ್ ಹಾಗು ಸನತ್ ರವರ ಸಂಕಲನ “31 ಡೇಸ್” ಚಿತ್ರಕ್ಕಿದೆ.